ಪರಿಶ್ರಮ ಹಾಗೂ ಪಕ್ಷ ನಿಷ್ಠೆಗೆ ಸಂದ ಗೌರವ _ಸಚಿವ ಬಿ ಸಿ ನಾಗೇಶ್.

ಪರಿಶ್ರಮ ಹಾಗೂ ಪಕ್ಷ ನಿಷ್ಠೆಗೆ ಸಂದ ಗೌರವ _ಸಚಿವ ಬಿ ಸಿ ನಾಗೇಶ್.

 

ಪರಿಶ್ರಮದಿಂದ ಬೆಳೆದ ಕಾರ್ಯಕರ್ತನಿಗೆ ಸಿಕ್ಕ ಗೌರವ ಸಚಿವ ಸ್ಥಾನ ಎಂದು ನೂತನ ಸಚಿವ ಬಿಸಿ ನಾಗೇಶ್ ತಿಳಿಸಿದರು.ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಾದ ತಿಪಟೂರು ಶಾಸಕ ಬಿಸಿ ನಾಗೇಶ್ ರವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು ಇದೇ ವೇಳೆ ಶಿವಕುಮಾರ ಶ್ರೀಗಳ ಗದ್ದುಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.

 

 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ. ಸಿ ನಾಗೇಶ್ ರವರು ತಾವು ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಶ್ರಮಿಸಿದ್ದೇವೆ ಇನ್ನೂ ಪರಿಶ್ರಮದಿಂದ ಹಾಗೂ ಪಕ್ಷ ನಿಷ್ಠೆಗೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸಂದ ಗೌರವ ಎಂದು ತಿಳಿಸಿದರು.

 

ಪಕ್ಷ ಉನ್ನತ ಜವಾಬ್ದಾರಿ ನೀಡಿದ್ದು ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವುದಾಗಿ ಹಾಗೂ ಹಗಲು-ರಾತ್ರಿ ಶ್ರಮ ಹಾಕಿ ಅವರ ಅಪೇಕ್ಷೆಗಳನ್ನು ಪೂರ್ಣಗೊಳಿಸುವ ಇಂಗಿತ ವ್ಯಕ್ತಪಡಿಸಿದರು.

 

ಪಕ್ಷದ ವರಿಷ್ಠರು, ಸಂಘಟನೆಯ ಹಿರಿಯರು, ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ವಿಶ್ವಾಸವಿಟ್ಟು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.

 

ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ

ಇನ್ನು ಮಂತ್ರಿಗಿರಿಯ ನಿರೀಕ್ಷೆಯ ನನ್ನಲ್ಲಿರಲಿಲ್ಲ ಆಕಾಂಕ್ಷಿಯೂ ಕೂಡ ಆಗಿರಲಿಲ್ಲ ಅಪೇಕ್ಷೆಯೂ ನನ್ನಲ್ಲಿ ಇರಲಿಲ್ಲ  ಪಕ್ಷದ ವರಿಷ್ಠರು ಯಾವ ಖಾತೆ ನೀಡಿದರೂ ಅದನ್ನು ನಿಭಾಯಿಸುವುದು ನನ್ನ ಜವಾಬ್ದಾರಿ, ಕರೋನ ಮೂರನೇ ಅಲೆ ಬರುವ ನಿರೀಕ್ಷೆ ಇದ್ದು ಅದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿ ಸದಸ್ಯರು ತಿಳಿಸಿದ್ದು ಅದಕ್ಕೆ ಅನುಗುಣವಾಗಿ ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳು ಹಾಗೂ ಅವುಗಳ ನಿರ್ವಹಣೆಯ ಜವಾಬ್ದಾರಿ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸುವೆ ಇನ್ನು ತಮಗೆ ನೀಡಿರುವ ಯಾದಗಿರಿ ಜಿಲ್ಲೆಯ ನಿರ್ವಹಣೆಯನ್ನು ಸದ್ಯಕ್ಕೆ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಇನ್ನೆರಡು ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ಬಿಜೆಪಿ ಪಕ್ಷದಲ್ಲಿ ಯಾವುದೇ ಜಾತಿ ಕೋಟ ಇಲ್ಲ ಪಕ್ಷ ಎಂದಿಗೂ ಜಾತಿಗೆ ಮನೆ ಹಾಕಿಲ್ಲ ನಿಷ್ಠಾವಂತ ಸಮರ್ಥ ನಾಯಕರಿಗೆ ಗೌರವ ನೀಡುವ ಪಕ್ಷ ಬಿಜೆಪಿ ಪಕ್ಷ ಎಂದರು.

 

ಮಾಜಿ ಸಚಿವ ಸುರೇಶ್ ಕುಮಾರ್ ಸಮರ್ಥ ನಾಯಕರು

ಮಾಜಿ ಸಚಿವರಾದ ಸುರೇಶ್ ಕುಮಾರ್ ರವರು ಉತ್ತಮ ವಾಗ್ಮಿಗಳು ಅವರ ಅನುಭವ ಹೋರಾಟಕ್ಕೆ ನಾನು ಸಮನಲ್ಲ ಅವರು ನಮ್ಮ ಹಿರಿಯರು ಇದರಲ್ಲಿ ಯಾವುದೇ ಅನುಮಾನವಿಲ್ಲ ಇನ್ನು ಪಕ್ಷ ಹೊಸಬರಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಅವರಿಗೆ ಅವಕಾಶ ತಪ್ಪಿರಬಹುದು ಇದು ಪಕ್ಷದ ತೀರ್ಮಾನ ಅದಕ್ಕೆ ತಾವು ಬದ್ಧ ಎಂದು ತಿಳಿಸಿದರು.

 

ಇದೇ ಸಂದರ್ಭದಲ್ಲಿ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ,ಮಾಜಿ ಸಚಿವರಾದ ಶಿವಣ್ಣ, ನಂದೀಶ್ ಸೇರಿದಂತೆ ಹಲವು ನಾಯಕರು ನೂತನ ಸಚಿವರಿಗೆ ಸಾಥ್ ನೀಡಿದರು

Leave a Reply

Your email address will not be published. Required fields are marked *

You cannot copy content of this page

error: Content is protected !!