ನಂಜನಗೂಡಿನ ತಹಸೀಲ್ದಾರ್ ಮೋಹನ್ ಕುಮಾರಿ ಕೊನೆಗೂ ವರ್ಗಾವಣೆ
ನಂಜನಗೂಡಿನ ಹುಚ್ಚ ಗಣಿ ದೇವಾಲಯ ನೆಲಸಮ ಮಾಡಿದ ಪರಿಣಾಮ ವರ್ಗಾವಣೆ
ಬೆಂಗಳೂರಿನ ಐ ಎಂ ಎ ಹಗರಣದ ತನಿಖಾ ಅಧಿಕಾರಿಯಾಗಿ ಸರ್ಕಾರ ಆದೇಶ ಹೊರಡಿಸಿದೆ
ನಂಜನಗೂಡಿನಲ್ಲಿ ತಹಸೀಲ್ದಾರರಾಗಿ ಹನ್ನೊಂದು ತಿಂಗಳುಗಳ ಕಾಲ ಅಧಿಕಾರ ನಡೆಸಿದ ಮೋಹನ್ ಕುಮಾರಿ .ನಂಜನಗೂಡು ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಮಹಿಳಾ ತಹಸೀಲ್ದಾರ್ ಆಗಿದ್ದ ಮೋಹನ್ ಕುಮಾರಿನಂಜನಗೂಡಿನ ದೇವಾಲಯದ ನೆಲಸಮ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು .
ಇತ್ತೀಚೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಹುಚ್ಚ ಗಣಿ ದೇವಾಲಯ ನೆಲಸಮ ವಿಚಾರ ಭಾರಿ ಸದ್ದು ಮಾಡಿತ್ತು
ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಕೂಡ ಮುಜುಗರಕ್ಕೆ ಒಳಗಾಗುವಂತೆ ದೇವಾಲಯದ ನೆಲಸಮ ವಿಚಾರ ಸದ್ದು ಮಾಡಿತ್ತು
ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಬಿಜೆಪಿ ಪಕ್ಷದ ಸಂಸದ ಪ್ರತಾಪ್ ಸಿಂಹ ಇನ್ನೂ ಅನೇಕ ನಾಯಕರು ಭಾರಿ ಟೀಕೆ ಪ್ರಹಾರ ನಡೆಸಿದ್ದರು
ರಾಜ್ಯ ಸರ್ಕಾರ ತನಿಖಾ ಅಧಿಕಾರಿಗಳನ್ನು ನೇಮಿಸಿ ಪರಿಶೀಲನೆ ಮಾಡಿದ ಬಳಿಕ ನಂಜನಗೂಡಿನ ತಹಸೀಲ್ದಾರ್ ಮೋಹನ್ ಕುಮಾರಿ ಇಂದು ವರ್ಗಾವಣೆಯಾಗಿದ್ದಾರೆ