ಮಾದರಿ ತಾಲೂಕಿನ ಕನಸು ಹೊತ್ತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ನಾಗೇಂದ್ರ

 

 

 

 

 

 

ತುಮಕೂರು : ಪಾವಗಡ ಎಂಬ ಗಡಿ ತಾಲ್ಲೂಕನ್ನು ಸತತ ನಿರ್ಲಕ್ಷ ವಹಿಸಿರುವ ಎಲ್ಲಾ ರಾಜಕೀಯ ಪಕ್ಷಗಳು ಯಾವುದೇ ರೀತಿಯಾದ ಅಭಿವೃದ್ಧಿ ಕಾಣದೇ ಅತೀ ಹಿಂದುಳಿದ ತಾಲ್ಲೂಕು ಆಗಿ ಮಾರ್ಪಟ್ಟಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪಾವಗಡ ಅಭ್ಯರ್ಥಿ ನಾಗೇಂದ್ರ ತಿಳಿಸಿದ್ದಾರೆ .

 

 

 

 

 

 

 

 

 

ಅಲ್ಲದೇ ಸೋಲಾರ್‌ ಪಾರ್ಕ್‌ ಆಗಿದೆ ಎಂಬ ಹೆಗ್ಗಳಿಕೆ ಬಿಟ್ಟರೇ ಬೇರೆ ಯಾವ ಅಭಿವೃದ್ಧಿಯೂ ಕಾಣದೇ ಹಿಂದುಳಿದ ತಾಲ್ಲೂಕಾಗಿಯೇ ಉಳಿದು ಬಿಟ್ಟಿದೆ, ಸೋಲಾರ್‌ ಪಾರ್ಕ್‌ ಆದರೆ ಉದ್ಯೋಗವಕಾಶಗಳು ಹುಡುಕಿಕೊಂಡು ಬರುತ್ತವೆಂದು ಎಷ್ಟೋ ಯುವಕರು ಕಾದು ಕುಳಿತಿದ್ದರು, ಆದರೆ ಯಾವುದೇ ರೀತಿಯಾದ ಅಭಿವೃದ್ಧಿಯಾಗಿಲ್ಲವೆಂದು ನಾಗೇಂದ್ರ ಕಿಡಿ ಕಾರಿದರು.

 

 

 

 

 

 

 

 

 

 

 

 

 

 

 

 

ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನರೆಡ್ಡಿಯವರ ಆದೇಶದ ಮೇರೆಗೆ ಈಗಾಗಲೇ ನಾವು ನೀಟ್‌, ಸಿ.ಇ.ಟಿ, ಎಫ್.ಡಿ.ಎ, ಎಸ್.ಡಿ.ಎ. ಹಾಗೂ ಇನ್ನಿತರೆ ವೃತ್ತಿಪರ ತರಬೇತಿಗಳನ್ನು ಉಚಿತವಾಗಿ ನಡೆಸಿಕೊಂಡು ಬರುತ್ತಿದ್ದೇವೆ, ಇದರಿಂದ ಬಹಳಷ್ಟು ಯುವಕರು ಪ್ರೇರೇಪಿತರಾಗಿದ್ದಾರೆ, ಅಲ್ಲದೇ ಅವರುಗಳು ತಮಗಿರುವ ಸವಾಲುಗಳನ್ನು ಎದುರಿಸಲು ಸರ್ವ ಸನ್ನದ್ಧರಾಗಿದ್ದಾರೆ.

 

 

 

 

 

 

 

 

ನಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರ ಪಡೆಯಲಿ ಬಿಡಲಿ, ಪಾವಗಡದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಹಲವಾರು ಕಾರ್ಖನೆಗಳನ್ನು ತೆರೆಯಲು ನಾವು ಸಿದ್ಧರಾಗಿದ್ದೇವೆಂದರು, ಉದಾ. ಗಾರ್ಮೆಂಟ್ಸ್‌, ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ತೆರೆದು ಇಲ್ಲಿಂದ ರಾಜ್ಯದ ನಾನಾ ಭಾಗಗಳಿಗೆ ವಲಸೆ ಹೋಗಿರುವವರನ್ನು ಮತ್ತೆ ಗೂಡಿಗೆ ಕರೆ ತರುವ ಸದುದ್ದೇಶವನ್ನೂ ಸಹ ಹೊಂದಿದ್ದೇವೆಂದು ಸುದ್ಧಿಗೋಷ್ಠಿಯನ್ನು ನಡೆಸಿ ಮಾದ್ಯಮದವರಿಗೆ ತಿಳಿಸಿದರು.

 

 

 

 

 

ಇನ್ನುಳಿದಂತೆ ಈಗಾಗಲೇ ಪಾವಗಡದಿಂದ ವಲಸೆ ಹೋಗಿ ಬೆಂಗಳೂರಿನಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿರುವವರನ್ನು ಸಂಪರ್ಕಿಸಿ ಅಲ್ಲಿ ಒಂದು ಸಣ್ಣದಾದ ಸಮಾವೇಶವನ್ನು ಈಗಾಗಲೇ ಮಾಡಿದ್ದು, ಅವರುಗಳು ಸಹ ಮತ್ತೇ ಪಾವಗಡಕ್ಕೆ ಬರಲು ಸರ್ವ ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.

 

 

 

 

 

 

 

 

 

 

 

ಆದರೆ ಈ ಯಾವುದರ ಬಗ್ಗೆಯೂ ಹಾಲಿ ಮತ್ತು ಮಾಜಿ ಶಾಸಕರುಗಳು ಮಾಡದೇ ತಮ್ಮ ತಲೆ ತಲೆಮಾರುಗಳ ರಾಜಕೀಯವನ್ನೇ ಅನುಸರಿಸಿಕೊಂಡು ಬರುತ್ತಿದ್ದಾರೆ, ಇಲ್ಲಿ ಉದ್ಯೋಗವಕಾಶಗಳನ್ನು ಕಲ್ಪಿಸುವುದಾಗಲೀ, ಇಲ್ಲಿನ ಜನರಿಗೆ ಉತ್ತಮ ಶಿಕ್ಷಣ ಕೊಡಿಸುವ ಸದುದ್ದೇಶವನ್ನು ಇಟ್ಟುಕೊಳ್ಳೊದೇ ಬರೀ ಸ್ವಾರ್ಥ ರಾಜಕೀಯವನ್ನು ಮಾಡುತ್ತಿದ್ದಾರೆಂದು ಪರೋಕ್ಷವಾಗಿ ಹಾಲಿ ಶಾಸಕರಾದ ವೆಂಕಟರವಣಪ್ಪ ಮತ್ತು ಅವರ ಮಗ ಹೆಚ್.ವಿ.ವೆಂಕಟೇಶ್‌ (ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿ) ಇವರಿಗೆ ಟಾಂಗ್‌ ಕೊಟ್ಟರಲ್ಲದೇ, ಈ ಹಿಂದೆ ಅಧಿಕಾರವನ್ನು ಅನುಭವಿಸಿದ್ದ ಜೆ.ಡಿ.ಎಸ್.ನ ಕೆ.ಎಂ.ತಿಮ್ಮರಾಯಪ್ಪ ಸಹ ಯಾವುದೇ ರೀತಿಯಾದ ಅಭಿವೃದ್ಧಿಯನ್ನು ಪಾವಗಡ ಕ್ಷೇತ್ರಕ್ಕೆ ಮಾಡದೇ ತಮ್ಮ ಸ್ವಾರ್ಥ ರಾಜಕೀಯವನ್ನು ಮಾಡಿದ್ದಾರೆಂದರು.

 

 

 

 

 

 

ಮುಂದುವರೆದು ಪಾವಗಡಕ್ಕೆ ಭದ್ರ ಮೇಲ್ದಂಡೆ ನೀರು ಯೋಜನೆಯಿಂದಲೂ ಸಾಕಷ್ಟು ಅನ್ಯಾಯವಾಗಿದ್ದರೂ ಸಹ ಯಾರೂ ಸಹ ಚಕಾರ ಎತ್ತುತ್ತಿಲ್ಲ, ಪಾವಗಡದ ಸರ್ವತೋಮುಖ ಅಭಿವೃದ್ಧಿಗಾಗಿ ಸುಶಿಕ್ಷಿತ ಅಭ್ಯರ್ಥಿಯಾದ ನನ್ನನ್ನು ಆಯ್ಕೆ ಮಾಡುವುದರೊಂದಿಗೆ ಪಾವಗಡ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲು ಒಂದು ಸದಾವಕಾಶವನ್ನು ಕಲ್ಪಿಸಿಕೊಡಿ ಎಂದು ಜನತೆಯಲ್ಲಿ ಮತಯಾಚನೆ ಮಾಡಿದರು.

 

 

 

 

 

 

ಇನ್ನುಳಿದಂತೆ ತಾನು ಮೂಲತಃ ಶಿಕ್ಷಕನಾಗಿದ್ದು, ಕಳೆದ ಹತ್ತು- ಹದಿನೈದು ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಾ, ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ, ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತಾ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಜನರ ಬೆಂಬಲ ವ್ಯಕ್ತವಾಗುತ್ತಿದೆಂದು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!