ಮೈಸೂರು ದಸರಾಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರಿಂದ ವಿದ್ಯುಕ್ತ ಚಾಲನೆ

ಮೈಸೂರು ದಸರಾಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರಿಂದ ವಿದ್ಯುಕ್ತ ಚಾಲನೆ

ಮೈಸೂರು_ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆ ನಿಂತಿರುವ ನಾಡಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಗೈದು, ದೀಪಬೆಳಗಿಸುವ ಮೂಲಕ ವಿಶ್ವವಿಖ್ಯಾತ 411ನೇ ಮೈಸೂರು ದಸರಾಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಂದು ವಿದ್ಯುಕ್ತ ಚಾಲನೆ ನೀಡಿದರು.

 

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

 

ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗೆ ಸ್ಮರಣಿಕೆ ನೀಡಿ ಗೌರವ ಸಮರ್ಪಿಸಲಾಯಿತು.

 

ನಾಡಿನ ದೊರೆ ಬಸವರಾಜ ಬೊಮ್ಮಾಯಿ ಮತ್ತವರ ಪತ್ನಿ ಚನ್ನಮ್ಮ ಅವರಿಗೆ ಪುಸ್ತಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿದ್ಯುಕ್ತ ಚಾಲನೆ ನೀಡಿದ ಬಳಿಕ ಉದ್ಘಾಟನಾ ನುಡಿಗಳನ್ನಾಡಿದ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಮನುಕುಲಕ್ಕೆ ಬಂದಿರತಕ್ಕಂತಹ ಬಹಳ ದೊಡ್ಡ ಗಂಡಾಂತರ ಈ ಕೊರೋನಾ ಪಿಡುಗಿನಿಂದ ಮನುಕುಲವನ್ನು ರಕ್ಷಣೆ ಮಾಡುವಂತೆ ಹೇಳಿ ಪ್ರಾರ್ಥನೆ ಸಲ್ಲಿಸಿದ್ದೇವೆ.

ಯಾವ ಜನ್ಮದ ಪುಣ್ಯವೋ ಏನೋ ನಮ್ಮ ಜನಪ್ರಿಯ ಮುಖ್ಯಮಂತ್ರಿಗಳು ಅವರ ತಂದೆಯವರ ಜೊತೆಯಲ್ಲಿ ಕೆಲಸ ಮಾಡಿದ ಸೌಭಾಗ್ಯ ನನ್ನದಾಗಿದೆ. ನನ್ನನ್ನು ಅತ್ಯಂತ ವಿಶ್ವಾಸದಿಂದ ಅನಿರೀಕ್ಷಿತವಾಗಿ ಈ ಒಂದು ದೊಡ್ಡ ಗೌರವವನ್ನು ನನ್ನದಾಗಿ ಮಾಡಿಕೊಟ್ಟಿದ್ದೀರಿ, ಮುಖ್ಯಮಂತ್ರಿಗಳಿಗೆ ಅನಂತ ಧನ್ಯವಾದಗಳು ಎಂದರು.

ನನ್ನ ತಂದೆ ಹತ್ತು ಹನ್ನೆರಡು ವರ್ಷಗಳ ಪ್ರಾಯದಲ್ಲಿ ಮೈಸೂರಿಗೆ ಓದಲು ಕಳಿಸಿದರು. ಒಂಟಿಕೊಪ್ಪಲ್ ಮಿಡ್ಲ್ ಸ್ಕೂಲ್ ನಲ್ಲಿ ಕಲಿತೆ, ಆ ನಂತರ ಮಹಾಜನ ಹೈಸ್ಕೂಲ್ ನಲ್ಲಿ ಮೂರು ವರ್ಷ ಕಳೆದೆ. ಆ ನಂತರ ಯುವರಾಜ ಕಾಲೇಜು, ಆನಂತರ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸ ನಡೆಯಿತು. ನನ್ನ ವ್ಯಕ್ತಿತ್ವ ವಿಕಸನ ಮೈಸೂರಿಗೆ ಹೊಂದಿಕೊಂಡಂತೆ ನಡೆದಿದೆ. ಪ್ರತಿದಿನ ಚಾಮುಂಡಿಬೆಟ್ಟ ನೋಡುವುದು, ಕೈಮುಗಿದು ಹೋಗುವುದು, ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು, ದಸರಾ ಮಹಾಸಡಗರದಿಂದ ನಡೆಯುತ್ತದ್ದ ಕಾಲ, ಆಗ ಈ ರೀತಿಯ ಪಿಡುಗಿರಲಿಲ್ಲ, ವಿಜಯದಶಮಿಯ ದಿನ ರಾಜ್ಯದ, ದೇಶದ ವಿದೇಶಗಳಿಂದ ಸಹಸ್ರಾರು ಮಂದಿ ಮೈಸೂರಿಗೆ ಬಂದು ಈ ದಸರಾ ಹಬ್ಬದ ಸೊಗಡನ್ನು ಅನುಭವಿಸಿದ್ದಾರೆ ಎಂದರು.

ಪ್ರಜಾಪ್ರತಿನಿಧಿ ಸಭೆ ಜಗನ್ ಮೋಹನ ಅರಮನೆಯಲ್ಲಿ ನಡೆಯುತ್ತಿತ್ತು. ಮರಿಮಲ್ಲಪ್ಪದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿದ್ದರು. ಪ್ರಾತಃ ಸ್ಮರಣಿಯ ಪಿಟೀಲು ಚೌಡಯ್ಯ ಸೇರಿದಂತೆ ಹಲವರು ಪ್ರತಿರಾತ್ರಿ ಸಂಗೀತ ಕಛೇರಿ ಏರ್ಪಾಡು ಮಾಡುತ್ತಿದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಪಟ್ಟಣವಾಗಿತ್ತು. ಸಾಹುಕಾರ್ ಚನ್ನಯ್ಯನಂತವರು ಕುಸ್ತಿಗೆ ವಿಶೇಷ ಸೌಲತ್ತು ಒದಗಿಸುತ್ತಿದ್ದರು. ದಸರಾದಷ್ಟೇ ಖ್ಯಾತವಾಗಿದ್ದ ವಸ್ತುಪ್ರದರ್ಶನ. ನೋಡಲು ಸಹಸ್ರಾರು ಮಂದಿ ಬರುತ್ತಿದ್ದರು. ಅದನ್ನು ಅನುಭವಿಸುತ್ತಿದ್ದರು. ಇಂತಹ ಅತ್ಯಂತ ರೋಚಕವಾದಂತಹ ಮತ್ತು ನಮ್ಮನ್ನು ಪುಳಕಿತಗೊಳಿಸತಕ್ಕಂತಹ ಹಲವಾರು ಘಟನೆಗಳು ನಡೆಯುತ್ತಿತ್ತು. ಸಮಾರಂಭಗಳು ನಡೆಯುತ್ತಿತ್ತು. ಯದುಕುಲದ ಅರಸುರ ದಸರಾವನ್ನು ನಾಡಹಬ್ಬವನ್ನಾಗಿ ಪರಿವರ್ತಿಸಲು ಶ್ರಮಪಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಆ ನಂತರ ಬಂದಂತಹ ಅನುವಂಶಿಕರು ದಸರಾ ಉತ್ಸವಕ್ಕೆ ಸಾಕಷ್ಟು ಮೆರಗನ್ನು ತಂದುಕೊಟ್ಟಿದ್ದಾರೆಂದು ಸ್ಮರಿಸಿದರು.

ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾಯಿಲ್ ದಸರಾ ಮಹೋತ್ಸವಕ್ಕೆ ವಿಶೇಷ ಅರ್ಥ ಕಲ್ಪಿಸಿಕೊಟ್ಟವರು. ರಾಮಕೃಷ್ಣಾಶ್ರಮದಿಂದ ಪ್ರತಿ ತಿಂಗಳು ಬೆಟ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದೆವು ಅಲ್ಲಿ ತಾಯಿಗೆ ನಮಸ್ಕಾರ ಸಲ್ಲಿಸುತ್ತಿದ್ದೆವು. ಇವೆಲ್ಲವನ್ನು ಸ್ಮರಿಸಿದಾಗ ಓ ದೇವರೇ! ಮತ್ತೆ ಆ ಗಳಿಗೆ ಬಂದೀತೆ ಎಂಬ ಉದ್ಘಾರ ಹೊರಡತ್ತೆ ಎಂದು ಉದ್ಘರಿಸಿದರು.

ವಿದ್ಯಾರ್ಥಿಯಾಗಿದ್ದಾಗಲೇ ದಸರಾ ನೊಡುತ್ತಿದ್ದೇನೆ. ಮಂಡ್ಯ ಮೈಸೂರಿನ ಒಂದು ತಾಲೂಕಾಗಿತ್ತು. 75ವರ್ಷಗಳ ಕೆಳಗೆ ಪ್ರತ್ಯೇಕ ಜಿಲ್ಲೆಯಾಯಿತು. ಈ ಹಬ್ಬವನ್ನು ಪ್ರತಿಮನೆಯಲ್ಲೂ ನಾಡಹಬ್ಬವಾಗಿ ಆಚರಿಸುತ್ತೇವೆ. ಮುಖ್ಯಮಂತ್ರಿಗಳು ಈ ವರ್ಷದ ದಸರಾವನ್ನು ಸರಳವಾಗಿ ಕೊರೋನಾ ಸೋಂಕು ಬಾರದಂತೆ ಗಡಿಯೊಳಗಡೆ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. 800 ದಸರಾ ಉತ್ಸವಕ್ಕೆ ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರು ಶಕ್ತಿ ಪ್ರದರ್ಶನಕ್ಕೆ ದಿಗ್ವಿಜಯಕ್ಕೆ ಹೋಗಲು ಉಪಯೋಗಿಸಿಕೊಳ್ಳುತ್ತಿದ್ದರು. ವಿಜಯನಗರ ಅರಸ ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಮಹಾನವಿಮ ದಿಬ್ಬ ನಿರ್ಮಿಸಲಾಗಿತ್ತು. ಕ್ರಿಡೆ, ಸಾಹಸಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿತ್ತು. ವಿಜಯ ನಗರ ಸಾಮ್ರಾಜ್ಯದ ದಸರಾ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದವರು. ಮೈಸೂರು ಒಡೆಯರ ಸಂತತಿಯವರು. 1610 ಮೈಸೂರು ಒಡೆಯರ್ ಶ್ರೀರಂಗಪಟ್ಟಣದಲ್ಲಿ ದಸರಾ ಪ್ರಾರಂಭಿಸಿದರು. ಅಂಬಾರಿ ಕೂಡ ವಿಜಯ ನಗರದವರಿಂದಲೇ ಪಡೆದಿದ್ದರು. ಮಹಾರಾಷ್ಟ್ರದ ದೇವಿಗಿರಿಯಿಂದ ವಿಜಯನಗರದವರೆಗೂ ಬಂದಿತ್ತು. ಅಂಬಾರಿಗೆ 8ಶತಮಾನಗಳ ಇತಿಹಾಸವಿದೆ. 750ಕೆಜಿ ತೂಕವಿರುವ ಸ್ವರ್ಣ ಅಂಬಾರಿಯಲ್ಲೇ ವಿಜಯ ದಸರಾ ಮೆರವಣಿಗೆ ಹೋಗುತ್ತಿದೆ. ದಸರಾ ಆಗಿಂದಾಗೆ ಒಂದು ಪರಿವರ್ತನೆ ನೋಡಿದೆ ಅದಕ್ಕೆ ಕಾರಣ ದಿವಾನ್ ರುಗಳು. ರಂಗಾಚಾರ್ಲು ನಿಂದ ಪುಟ್ಟಣ್ಣ ಚೆಟ್ಟಿವರೆಗೆ ರಾಜ್ಯದ ಜನತೆಯ ಗಮನಕ್ಕೆ ತರಬೇಕೆಂಬ ಆಸೆಯಾಗಿತ್ತು. ಮೈಸೂರು ಸಂಸ್ಥಾನದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಶಾಲೆ, ಕಾಲೇಜು ಆಸ್ಪತ್ರೆ ಇತ್ತು. ಪ್ರಜೆಗಳ ಜೊತೆ ತುಂಬಾ ಪ್ರೀತಿಯಿತ್ತು. ಅದಕ್ಕೆ ಚೆಲುವಾಂಬಾ ಆಸ್ಪತ್ರೆ ಉದಾಹರಣೆ ಎಂದು ಸ್ಮರಿಸಿದರು.

1934ರಲ್ಲಿ ಅಂದಿನ ದಿವಾನರ ಆಹ್ವಾನದ ಮೇರೆಗೆ ಗಾಂಧೀಜಿ ಬಂದರು. ಹರಿಜನ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಲ್ಲಿ ಮಿಕ್ಕ ವಿದ್ಯಾರ್ಥಿಗಳಂತೆ ವ್ಯಾಸಂಗ ಮಾಡುತ್ತಿದ್ದಾರೆ ಎಂಬುದನ್ನು ಕೇಳಿ ಪುಳಕಿತರಾದರು. ಹರಿಜನ- ಸವರ್ಣೀಯರ ಮಿಲನವಾಗಬೇಕು. ಜೊತೆ ಜೊತೆಯಲ್ಲಿ ಜೀವನ ಮಾಡುವಂತಾಗಬೇಕೆಂದು ಆಸೆಯಾಗಿತ್ತು ಎಂದರು.

ಕೆಆರ್ ಎಸ್ ಆಣೆಕಟ್ಟಿನಿಂದ ಮಂಡ್ಯ ಅಭಿವೃದ್ಧಿ ಜಿಲ್ಲೆಯಾಗಿದೆ. ಅಣೆಕಟ್ಟು ಕಟ್ಟಲು ಮೈಸೂರು ರಾಜರ ಕೊಡುಗೆಯನ್ನು ಸ್ಮರಿಸಿದರು. ರಾಜಶಾಹಿ ವಿರೋಧಿಸಿದೆವು. ರಾಜಶಾಹಿ ಮಾಡಿದ ಘನಕಾರ್ಯಗಳನ್ನು ಇತಿಹಾಸದ ಪುಟದಿಂದ ಅಳಿಸಿಹಾಕಲು ಸಾಧ್ಯವಿಲ್ಲ. ಹಿಂದಿನದನ್ನು ನೆನೆಯದೇ ಮುಂದೆ ನಡೆಯಲು ಸಾಧ್ಯವಿಲ್ಲ, ಹಿಂದಿನದನ್ನು ನೆನೆದಾಗ ಮುಂದಿನ ಭವಿಷ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ದಸರಾ ಪ್ರೇರಕ ಶಕ್ತಿಯಾಗಿದೆ. ಭಾರತ ಅಭಿವೃದ್ಧಿ ಶೀಲ ರಾಷ್ಟ್ರವಾಗಿದೆ. ಚೀನಾ, ಭಾರತದ ಜೊತೆ ಅಭಿವೃದ್ಧಿಯಲ್ಲಿ ಪೈಪೋಟಿ ನಡೆಯುತ್ತಿದೆ. ಮತ್ಸರ ಇಲ್ಲದಿದ್ದಲ್ಲಿ ಸ್ವಾಗತಿಸುವ ಬೆಳವಣಿಗೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಮ್ಮ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದು, ಬಹಳ ದೊಡ್ಡ ದೊಡ್ಡ ಕನಸುಗಳನ್ನ ಪ್ರಧಾನ ಮಂತ್ರಿ ಕಂಡಿದ್ದು ಅದನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ಅವರ ಕನಸು ನನಸಾಗಲಿ. ತಾಯಿ ಚಾಮುಂಡೇಶ್ವರಿ ಆ ಶಕ್ತಿಯನ್ನು ಅವರಿಗೆ ನೀಡಲಿ. ಸ್ಮೃತಿಪಟದಲ್ಲಿ ಇಷ್ಟು ಕಟ್ಟಪಟ್ಟು ದೇಶದ ಬಗ್ಗೆ ಇಷ್ಟು ಚಿಂತನೆಗಳನ್ನು ಕೈಗೊಂಡು ರೂಪಿಸಲು ಶ್ರಮಿಸಿದವರನ್ನು ನೋಡಿಲ್ಲ, ಅವರಿಗೆ ನಮ್ಮ ಬೆಂಬಲವಿದೆ. ಯುವ ಜನಾಂದ ದೇಶದ ಆಸ್ತಿ, ಒಂದು ನಿರ್ದಿಷ್ಟವಾದ ದಿಕ್ಕಿನತ್ತ ಕೊಂಡು ಹೋಗಬೇಕು. ಅವರ ಮುಂದೆ ನಾವು ಗುರಿ ಯನ್ನು ಸ್ಥಾಪನೆ ಮಾಡುವ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂ ಗೋಸ್ಕರ ಸಿದ್ಧ ಮಾಡಬೇಕು. ಮುಂದಿನ ವರ್ಷಕ್ಕೆ ಒಂದು ಪ್ಯಾಕೇಜ್ ಟೂರ್ಸ್ ಮಾಡುವ ಮೂಲಕ ರೂಪುರೇಷೆಗಳು ಹೇಗಿರಬೇಕೆಂಬುದನ್ನು ಸಿದ್ಧಗೊಳಿಸಿ ನಿರ್ಮಿಸಿದರೆ ಬಹುಶಃ ದಸರಾದಿಂದ ರಾಜ್ಯದ ಅಭಿವೃದ್ಧಿ ಕೂಡ ಸಾಧ್ಯವಿದೆ. ಕರ್ನಾಟಕ ರಾಜ್ಯಕ್ಕೆ ಸಹಸ್ರಾರು ಮಂದಿ ಬರುತ್ತಾರೆ. ಬಿಜಾಪುರ, ಐಹೊಳೆ ಪಟ್ಟದಕಲ್ಲು ಹಂಪಿ ಇವುಗಳನ್ನು ನೋಡಿಹೋಗಲು ಅವಕಾಶ ಮಾಡಿದಲ್ಲಿ ಪ್ರವಾಸೋದ್ಯಕ್ಕೆ ಸಂಪನ್ಮೂಲ ಕ್ಷೇತ್ರವನ್ನಾಗಿ ಮಾಡಿಕೊಳ್ಳಬಹುದು. ಉದಾಹರಣೆಗೆ ಸಿಂಗಪೂರ ಮೈಸೂರಿಗಿಂತ ಸಣ್ಣದು ಮೂಲಭೂತವಾದ ಬಂಡವಾಳದಿಂದಲೇ ಲಕ್ಷಾಂತರ ಜನ ನೋಡಲು ಬರುತ್ತಾರೆ. ಸ್ವಚ್ಛವಾಗಿ ಆ ಪಟ್ಟಣವನ್ನು ರಕ್ಷಣೆ ಮಾಡಿದ್ದಾರೆ ಎಂದರು.

ಪ್ರಕೃತಿದತ್ತವಾಗಿರುವ ಅವಕಾಶವಿರುವಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ದಸರಾ ಸುಲಲಿತವಾಗಿ ನಡೆಯಲಿ. ಈ ಸುಂದರ ದಸರಾವನ್ನು ಉಲ್ಲಾಸ ಶ್ರದ್ಧೆ ಭಕ್ತಿಯಿಂದ ಆಚರಿಸೋಣ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!