ದಿವಂಗತ ಮುಸ್ತಾಕ್ ಅಹ್ಮದ್ ರವರಿಗೆ ನೆನಪಿನ ಬುತ್ತಿ ಸಲ್ಲಿಸಿದ ಪ್ರಮುಖರು

 

 

ತುಮಕೂರು: ಹಾಲಪ್ಪ ಪ್ರತಿಷ್ಠಾನದ ವತಿಯಿಂದ ನಗರದ ಅಶೋಕ ರಸ್ತೆಯ ಹೆಚ್‍ಎಂಎಸ್ ಕಾಂಪ್ಲೆಕ್ಸ್‍ನಲ್ಲಿರುವ ಹಜರತ್ ಮದರ್ ಷಾ ಶಾದಿ ಮಹಲ್ ನಲ್ಲಿ ಮುಷ್ತಾಕ್ ಅಹಮದ್ ಅವರ ನೆನಪಿನ ಬುತ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕರ್ನಾಟಕ ಕೌಲಶ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು, ಮುಷ್ತಾಕ್ ಅಹಮದ್ ಅವರು, ಯಾವುದೇ ಒಬ್ಬ ವ್ಯಕ್ತಿಗೆ, ಯಾವುದೇ ಒಂದು ಸಮುದಾಯಕ್ಕೆ ಅಥವಾ ಯಾವುದೇ ಒಂದು ಕುಟುಂಬಕ್ಕೆ ಸೇರಿದವರಾಗಿರಲಿಲ್ಲ, ಪ್ರತಿಯೊಬ್ಬರೂ ಆ ಪ್ರೀತಿ, ಅಭಿಮಾನ, ವಿಶ್ವಾಸ, ಪ್ರತಿಯೊಬ್ಬರ ಕಷ್ಟಸುಖಕ್ಕೆ ಸ್ಪಂಧಿಸುವಂತಹ ವ್ಯಕ್ತಿತ್ವ ನಿಜವಾಗಲೂ ಎಲ್ಲಿಯೂ ನೋಡಲಿಕ್ಕೆ ಸಾಧ್ಯವಿಲ್ಲ ಎಂದರು.

 

ಒಂದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮುಷ್ತಾಕ್ ಅಹಮದ್ ಅವರು ಕುಸಿದುಹೋಗಿದ್ದರು, ನಮ್ಮ ಮದ್ಯೆ ಇವರನ್ನು ಯಾವಾಗ ಕಳೆದುಕೊಳ್ಳುತ್ತೇವೆಯೋ ಎಂಬ ಭಯ ಶುರುವಾಗಿತ್ತು. ಇಂದು ನಡೆಯುತ್ತಿರುವ ಮುಷ್ತಾಕ್ ಅಹಮದ್ ಅವರ ನೆನಪಿನ ಬುತ್ತಿ ಕಾರ್ಯಕ್ರಮ ಸರಳವಾದ ಕಾರ್ಯಕ್ರಮವಾಗಿದ್ದು, ಮುಷ್ತಾಕ್ ಅಹಮದ್ ಅವರ ಮೇಲಿದ್ದ ಪ್ರೀತಿ, ಅಭಿಮಾನದಿಂದ ಬಹಳಷ್ಟು ಜನ ಭಾಗವಹಿಸಿದ್ದಾರೆ ಎಂದರು.

ಮೊಬೈಲ್ ಸಿಎಂಸಿ ಆರಂಭ: ಜಿಲ್ಲೆಯಲ್ಲಿರುವ ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಅರ್ಜಿ ಹಾಕಲು ಕಂಪ್ಯೂಟರ್ ಸೆಂಟರ್‍ಗೆ ಹೋಗುತ್ತಾರೆ. ಇದರಿಂದ ಅವರ ಸಮಯ ಮತ್ತು ಓಡಾಡುವ ವೆಚ್ಚವೂ ತಗುಲುತ್ತದೆ. ಇದನ್ನು ಮನಗಂಡು ಮೊಬೈಲ್ ಸಿಎಂಸಿ ವಾಹನ ಆರಂಭಿಸಲಾಗಿದ್ದು, ಈ ವಾಹನ ಜಿಲ್ಲೆ ಎಲ್ಲಾ ಕಡೆ ತೆರಳಿದ್ದು, ಉದ್ಯೋಗಕ್ಕಾಗಿ ಅರ್ಜಿ ಹಾಕುವವರು, ಅಥವಾ ವಿದ್ಯಾರ್ಥಿಗಳ ಸ್ಕಾಲರ್ ಶಿಪ್‍ಗೆ ಅರ್ಜಿ ಹಾಕುವವರು, ಅಥವಾ ಮತ್ಯಾವುದೇ ಅರ್ಜಿ ಹಾಕುವುದಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಷ್ತಾಕ್ ಅಹಮದ್ ಹೆಸರಿನಲ್ಲಿ ಸಿಎಂಸಿ ಮೊಬೈಲ್ ವ್ಯಾನ್‍ಗಳನ್ನು ಇನ್ನೂ ಹೆಚ್ಚಿನದಾಗಿ ಆರಂಭಿಸಲು ಸೆಂಟ್ರಲ್ ಮುಸ್ಲೀಂ ಅಸೋಸಿಯೇಷನ್ (ಸಿಎಂಎ) ಸಹಾಯ ಮತ್ತು ಸಹಕಾರ ಬೇಕಾಗಿದೆ. ಇದರಿಂದ ಐಎಎಸ್, ಐಪಿಎಸ್, ಕೆಎಎಸ್ ನಂತರ ಉನ್ನತ ಪರೀಕ್ಷೆಗಳಿಗೆ ಸ್ಪರ್ಧೆ ಮಾಡುವವರಿಗೂ ಅನುಕೂಲವಾಗಲಿದೆ. ಜೊತೆಗೆ ಪರೀಕ್ಷಾರ್ಥಿಗಳಿಗೆ ಒಂದೊಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದರೆ, ಅವರ ಜ್ಞಾನಾರ್ಜನೆ ಇನ್ನೂ ಉತ್ತಮವಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮುಷ್ತಾಕ್ ಅಹಮದ್ ಅವರು ಹುಟ್ಟಿದ್ದು ಮುಸಲ್ಮಾನ್ ಸಮುದಾಯದಲ್ಲಾದರೂ ಸಹ ಅವರು ಬೆಳೆದಿದ್ದು ಜಾತ್ಯಾತೀತವಾಗಿ, ಎಲ್ಲಾ ಧರ್ಮಗಳಿಗಿಂತಲೂ ಮಾನವ ಧರ್ಮ ಶ್ರೇಷ್ಟ ಎಂದು ಹೇಳುತ್ತಿದ್ದವರು ಇಂದು ನಮ್ಮನ್ನು ದೈಹಿಕವಾಗಿ ಅಗಲಿದರೂ ಮಾನಸಿಕವಾಗಿ ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಹೇಳಿದರು.

ಇಂದು ಸಮಾಜದಲ್ಲಿ ಯಾರು ಬೇಕಾದರೂ ಹಣ ಗಳಿಸಬಹುದು, ಆದರೆ ಗುಣ ಗಳಿಸಲು ಅಸಾಧ್ಯ, ಆದರೆ ಮುಷ್ತಾಕ್ ಅಹಮದ್ ಅವರು ಗುಣದ ಮಾಲೀಕರಾಗಿದ್ದರು ಎಂದು ಸ್ಮರಿಸಿದರು.

ಉತ್ತಮ ಸಂಸ್ಕøತಿ, ಸಂಸ್ಕಾರವಂತರಾಗಿದ್ದ ಮುಷ್ತಾಕ್ ಅಹಮದ್ ಅವರು, ಎಲ್ಲರೊಟ್ಟಿಗೆ ಪ್ರೀತಿ, ವಿಶ್ವಾಸ, ಅಭಿಮಾನದಿಂದ ಇರುತ್ತಿದ್ದರು, ರಾಜಕೀಯವಾಗಿಯೂ ಸಹ ಒಂದು ಪಕ್ಷಕ್ಕೆ ಸೀಮಿತವಾಗಿರಲಿಲ್ಲ, ಎಲ್ಲಾ ಪಕ್ಷದ ಮುಖಂಡರ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದವರು ಎಂದು ತಿಳಿಸಿದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ನಾಗಣ್ಣ ಮಾತನಾಡಿ, ಪ್ರಪಂಚದಲ್ಲಿ ನಮ್ಮ ದೇಶ ವಿಚಿತ್ರವಾದ ದೇಶ, ಬಹುಭಾಷೆ, ಬಹುಸಂಸ್ಕøತಿ, ಬಹುಜನ ಹೀಗೆ ಎಲ್ಲವೂ ಸೇರಿರುವ ಒಂದು ಉತ್ತಮ ದೇಶ. ಅದಕ್ಕೋಸ್ಕರವೇ ನಾವೆಲ್ಲಾ ಸೇರಿ ಮುಷ್ತಾಕ್ ಅಹಮದ್ ಅವರನ್ನು ಜ್ಞಾಪಿಸಿಕೊಳ್ಳುತ್ತಿದ್ದೇವೆ ಎಂದರು.

ಇಂದಿನ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲಾ ಎಷ್ಟು ಭದ್ರವಾಗಿರಬೇಕು ಎಂಬುದು ನಾವೆಲ್ಲರೂ ಆಲೋಚನೆ ಮಾಡಬೇಕು, ನಾವು ಭಾರತದಲ್ಲಿ ನಾವು ಹೇಗಿರಬೇಕು, ನಮ್ಮ ಜೀವನವನ್ನು ಹೇಗೆ ಸಾಗಿಸಬೇಕು ಎಂಬುದನ್ನು ತುಂಬಾ ಆಲೋಚನೆ ಮಾಡುವಂತಹ ದಿನಗಳಲ್ಲಿ ನಾವು ಸುಭದ್ರವಾಗಿದ್ದೇವೆ. ಅಂತಹ ಸುಭದ್ರತೆಗೆ ನಾವು ತುಮಕೂರು ಜಿಲ್ಲೆಯಲ್ಲಿ ಬಹಳಷ್ಟು ಕೊಂಡಿಯಾಗಿದ್ದಂತಹವರು ಮುಷ್ತಾಕ್ ಅಹಮದ್ ಒಬ್ಬರೇ ಎಂದರು.

ತುಮಕೂರಿನಲ್ಲಿ ಮುರಳೀಧರ ಹಾಲಪ್ಪ ಅವರ ಮೇಲೆ ಮುಷ್ತಾಕ್ ಅಹಮದ್ ಅವರಿಗೆ ಇದ್ದ ಪ್ರೀತಿ, ಅಭಿಮಾನ ಬಹಳಷ್ಟಿತ್ತು, ಮುರಳೀಧರ ಹಾಲಪ್ಪ ಅವರು ಯಾವುದೇ ಕಾರ್ಯಕ್ರಮ ಮಾಡಬೇಕೆಂದೆದಿದರೂ ಮುಂಚೂಣಿಯಲ್ಲಿದ್ದು, ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಸಾಕಷ್ಟು ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದಂತಹವರು ಇಂದು ನಮ್ಮ ಮುಂದೆ ಇಲ್ಲದಿರುವುದು ತುಂಬಾ ಬೇಸರದ ಸಂಗತಿ ಎಂದು ಹೇಳಿದರು.

ಎಲ್ಲಾ ಸಮುದಾಯಕ್ಕೂ ಬ್ರಿಡ್ಜ್ ಇದ್ದಂತೆ ಇದ್ದವರು ಮುಷ್ತಾಕ್ ಅಹಮದ್ ಅವರಲ್ಲಿ ಯಾವುದೇ ತರಹದ ದ್ವೇಷಗಳಿರಲಿಲ್ಲ, ವಿರೋಧಗಳಿರಲಿಲ್ಲ, ಮುಸ್ಲೀಂ ಸಮುದಾಯದಲ್ಲಿ ದೊಡ್ಡ ದೊಡ್ಡ ಗಣ್ಯರನ್ನು ಕಾರ್ಯಕ್ರಮಗಳಿಗೆ ಸೇರಿಸುತ್ತಿದ್ದ ವ್ಯಕ್ತಿಯಾಗಿ ರೂಪುಗೊಂಡಿದ್ದರು ಎಂದು ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಸಿಎಂಎ ಪ್ರಧಾನ ಕಾರ್ಯದರ್ಶಿ ಝಹೀರುದ್ಧೀನ್ ಸಾಬ್, ಹುಸ್ಸೇನ್ ಷರೀಫ್, ಜಾಮಿಯಾ ಮಸೀದಿಯ ಮುಫ್ತಿ ಮಹಮದ್ ಉಮರ್ ಅನ್ಸಾರಿ, ಸಿದ್ಧಗಂಗಾ ಶಿಕ್ಷ ಸಂಸ್ಥೆಯ ಪ್ರೊ.ರೇಣುಕಪ್ಪ, ಎಪಿಸಿಆರ್ ಅಧ್ಯಕ್ಷ ತಾಜುದ್ದೀನ್ ಷರೀಪ್, ಮನ್ಸೂರ್ ಅಹಮದ್ ಮುಂತಾದವರು ಮುಷ್ತಾಕ್ ಅಹಮದ್ ಕುರಿತು ಮಾತನಾಡಿದರು.

ಸರಳ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮುಷ್ತಾಕ್ ಅಹಮದ್ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Leave a Reply

Your email address will not be published. Required fields are marked *

You cannot copy content of this page

error: Content is protected !!