ಮುರುಘಾ ಶರಣರ ಬಂಧನ ಪ್ರಕರಣ: ಬೇರೆ ರಾಜ್ಯಕ್ಕೆ ವರ್ಗಾಯಿಸಲು BSP ಪಟ್ಟು

ಮುರುಘಾ ಶರಣರ ಬಂಧನ ಪ್ರಕರಣ: ಬೇರೆ ರಾಜ್ಯಕ್ಕೆ ವರ್ಗಾಯಿಸಲು BSP ಪಟ್ಟು

 

 

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮುರುಘಾಮಠದ  ಶಿವಮೂರ್ತಿ ಶರಣರ  ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಿ ತನಿಖೆ ನಡೆಸಬೇಕೆಂದು ಬಹುಜನ ಸಮಾಜ ಪಾರ್ಟಿ(BSP ) ಒತ್ತಾಯಿಸಿದೆ.

 

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ,

ಬಂಧಿತ ಆರೋಪಿ ಮುರುಘಾ ಶರಣರು ಬಹಳ ಪ್ರಭಾವಶಾಲಿ ಆಗಿರುವುದರಿಂದಾಗಿ, ಅವರ ವಿರುದ್ಧ ದಾಖಲಾಗಿರುವ ಈ ಪ್ರಕರಣದ ವಿಚಾರಣೆಯನ್ನು ತಮಿಳುನಾಡು ಅಥವಾ ಕೇರಳ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

 

ಅಲ್ಲದೆ ಸಂತ್ರಸ್ತರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದ ಅವರು,  ಕರ್ನಾಟಕದ ಪ್ರಸಿದ್ಧ ಮತ್ತು ಪ್ರಭಾವಶಾಲಿ ಮಠಗಳಲ್ಲಿ ಒಂದಾಗಿರುವ ಶ್ರೀ ಮುರುಘಾಮಠದ ಶ್ರೀಗಳಾದ ಶಿವಮೂರ್ತಿ ಶರಣರು ತಮ್ಮ ಕ್ರಾಂತಿಕಾರಿ ವಿಚಾರಧಾರೆಯಿಂದ, ವೈಜ್ಞಾನಿಕ ಚಿಂತನೆಗಳಿಂದ ಮತ್ತು ಶೋಷಿತರ ಪರ ಕಾಳಜಿಯಿಂದಾಗಿ ನಾಡಿನಾದ್ಯಂತ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಹೀಗಿರುವಾಗ  ಶ್ರೀಗಳ ವಿರುದ್ದ ಕೇಳಿಬಂದಿರುವ ಇಂತಹ ಭೀಕರ ಆರೋಪದಿಂದ ಕನ್ನಡನಾಡು ಬೆಚ್ಚಿಬಿದ್ದಿದೆ ಎಂದರು.

 

ಶ್ರೀಗಳ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಗಂಭೀರ ಆರೋಪಕ್ಕೆ ಒಳಗಾಗಿರುವ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿರುವುದು ಎಲ್ಲರಿಗೂ ತಿಳಿದಿದೆ.

 

ಅಲ್ಲದೆ ಸಂತ್ರಸ್ಥ ವಿದ್ಯಾರ್ಥಿನಿಯರ ಪೈಕಿ ಒಬ್ಬ  ಪರಿಶಿಷ್ಟಜಾತಿಯ ವಿದ್ಯಾರ್ಥಿನಿಯೂ ಇರುವುದರಿಂದಾಗಿ ಶ್ರೀಗಳ ವಿರುದ್ಧ ಎಸ್. ಸಿ. ಮತ್ತು ಎಸ್. ಟಿ. ದೌರ್ಜನ್ಯ ತಡೆ ಕಾಯ್ದೆ ಅನ್ವಯ ದೂರು ದಾಖಲಾಗಿದೆ.

 

ಈ ಎರಡು ಕಾಯ್ದೆಗಳಡಿ ಎಫ್ ಐ ಆರ್ ದಾಖಲಿಸಿದ ಕೂಡಲೇ ಆರೋಪಿಗಳನ್ನು ಬಂಧಿಸಬೇಕಾಗಿದ್ದ  ಪೊಲೀಸರು ಒಂದು ವಾರ  ವಿಳಂಬಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು.

 

ಮತ್ತೊಂದೆಡೆ, ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ತೋರಿದ ವಿಳಂಬ ಧೋರಣೆಯಿಂದಾಗಿ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

 

ಬಹಳ ಅಘಾತಕಾರಿ ವಿಷಯವೇನೆಂದರೆ, ರಾಜ್ಯದ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಆರೋಪಿ ಪರ ವಕಾಲತ್ತು ವಹಿಸಿ ಶ್ರೀಗಳು ನಿರಪರಾಧಿ ಎಂಬಂತೆ ತನಿಖೆಯ ಪ್ರಾರಂಭ ಹಂತದಲ್ಲೇ ಹೇಳಿರುವುದು ತನಿಖೆಯನ್ನು ದಿಕ್ಕುತಪ್ಪಿಸುವ ಕ್ರಮವಾಗಿದೆ. ಇವರ ವರ್ತನೆಯು ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ ಎಂದು ಅವರು ಟೀಕಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!