ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಶಾಸಕ ಡಿ. ಸಿ ಗೌರಿಶಂಕರ್.
ತುಮಕೂರು.ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ದಿಗೆ ಕಂಕಣಬದ್ದರಾಗಿರುವ ಶಾಸಕ ಡಿ ಸಿ ಗೌರೀಶಂಕರ್ ಅಲ್ಪಸಂಖ್ಯಾತ ಸಮುದಾಯ ಹೆಚ್ಚು ವಾಸಿಸುವ ಗ್ರಾಮಗಳಿಗೆ ರಸ್ತೆ ,ಬೀದಿ ದೀಪ,ವಸತಿ ಸೌಕರ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿ ಕೆ ಪಾಲಸಂದ್ರ ಗ್ರಾಮಪಂಚಾಯ್ತಿ ವ್ಯಾಪ್ತಿಗೊಳಪಡುವ ಮಂಚಗೊಂಡನಹಳ್ಳಿ ಗ್ರಾಮದ ಅಲ್ಪಸಂಖ್ಯಾತ ಸಮುದಾಯದ ಕಾಲೋನಿಗೆ 30 ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ತಾಪನೆ, ಗೂಳೂರು ಹೋಬಳಿ ಅಧ್ಯಕ್ಷ ಜಿ .ಪಾಲನೇತ್ರಯ್ಯ 12 ಲಕ್ಷ ರೂ ತಮ್ಮ ಸ್ವಂತ ಹಣ ವೆಚ್ಚ ಮಾಡಿ ಮಂಚಗೊಂಡನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕ ಕಾಮಗಾರಿ ವೀಕ್ಷಣೆ ಬಳಿಕ ಕೆ.ಪಾಲಸಂದ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಒಂದು ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಳಿಕ ಹರಳೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೊಟ್ಟಿಗೆ ಗೊಲ್ಲಹಳ್ಳಿ,ಭೈರಸಂದ್ರ,ನಾಯಕನಪಾಳ್ಯ,ಗೌರೀಪುರ,ಗುಣಿಗೊಲ್ಲಹಳ್ಳಿ ಸಿದ್ದಾಪುರ,ಗುಡಿಪಾಲಸಂದ್ರ ,ಅಣ್ಣಯ್ಯನಪಾಳ್ಯದಲ್ಲಿ 1ಕೋಟಿ 50 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಶಾಸಕ ಡಿ ಸಿ ಗೌರೀಶಂಕರ್ ಮಾತನಾಡಿ ಗ್ರಾಮಾಂತರ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ಅಭಿವೃದ್ದಿಯಲ್ಲಿ ಮೂಲೆಗುಂಪಾಗಿದ್ದ ಗ್ರಾಮಗಳು ಅಭಿವೃದ್ದಿ ಕಂಡಿವೆ,ಸುಸಜ್ಜಿತ ರಸ್ತೆ,ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ,ನಾನು ಈ ಕ್ಷೇತ್ರದ ಶಾಸಕನಲ್ಲ ನಿಮ್ಮ ಮನೆ ಮಗ ನಿಮ್ಮ ಸೇವೆ ಮಾಡಲು ಸದಾ ಸಿದ್ದ ಎಂದರು.
ವಿರೋಧಿಗಳ ಟೀಕೆಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡಿದ್ದೇನೆ ಟೀಕಿಗೆ ಮೀಸಲಿಡುವ ಕಾಲವನ್ನು ಜನರ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ, ಅಭಿವೃದ್ಧಿಯ ಮೂಲಕ ಕ್ಷೇತ್ರದ ಜನರ ಭರವಸೆ ಈಡೇರಿಸಿರುವ ತೃಪ್ತಿ ನನಗಿದೆ ಎಂದರು
ಗುಳೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ಅಧ್ಯಕ್ಷ ಜಿ ಪಾಲನೇತ್ರಯ್ಯ ಅವರು ಗೂಳೂರು ಭಾಗದಲ್ಲಿ ಅತ್ಯುತ್ತಮ ಕೆಲಸ ಮಾಡಿ ಜನಮನ ಗೆದ್ದಿದ್ದಾರೆ ನನಗೆ ಆಶೀರ್ವಾದ ಮಾಡಿದಂತೆ ಅವರಿಗೂ ಸಹ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಬಳಿಕ ಶಾಸಕ ಡಿ ಸಿ ಗೌರೀಶಂಕರ್ ಸ್ಥಳೀಯರ ಕುಂದು ಕೊರತೆ ಆಲಿಸಿದರು.ಗೂಳೂರು ಜಿಲ್ಲಾ ಪಂಚಾಯತಿ ಜೆಡಿಎಸ್ ಅಧ್ಯಕ್ಷ ಜಿ ಪಾಲನೇತ್ರಯ್ಯ, ಹರಳೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮಾಜಿ ಎಪಿಎಂಸಿ ಉಪಾಧ್ಯಕ್ಷೆ ವಿಜಯ ಕುಮಾರಿ ಹಾಗೂ ಕೆ ಪಾಲ್ಸಂದ್ರ ಗ್ರಾಮ ಪಂಚಾಯತಿ ಸದಸ್ಯರು ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು, ಹರಳೂರು ಗ್ರಾಮ ಪಂಚಾಯಿತಿ ಸದಸ್ಯರು ಜೆಡಿಎಸ್ ಮುಖಂಡರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು