ಜೆಡಿಎಸ್ ಅಧಿಕಾರಕ್ಕೆ ಬಂದರೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಗೆ ಸಚಿವ ಸ್ಥಾನ_ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ
ತುಮಕೂರು : ಮುಂದಿನ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ತುಮಕೂರು ಗ್ರಾಮಂತರ ಶಾಸಕ ಗೌರಿಶೆಂಕರ್ ರವರಿಗೆ ಸಚಿವ ಸ್ಥಾನ ನೀಡಲಾಗುವುದು ಈ ಕ್ಷೇತ್ರದ ಜನ ಮುಂದಿನ ಬಾರಿಯು ಗೌರಿಶೆಂಕರ್ ರವರನ್ನು ವಿಧಾನಸಭೆಗೆ ಆಯ್ಕೆಮಾಡಿ ಕಳುಹಿಸಿಕೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಕೇಳಿಕೊಂಡ ಪ್ರಸಂಗ ನಡೆಯಿತು.
ತುಮಕೂರು ತಾಲ್ಲೂಕು ಹೆಬ್ಬೂರಿನಲಿ ನಡೆದ ಜನತಾಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ ಚನ್ನಿಗಪ್ಪ ರವರು ದೇವಗೌಡರ ಕುಟುಂಬದ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟಿದರು ಅದೇ ಹಾದಿಯಲ್ಲಿ ಗೌರಿಶೆಂಕರ್ ರವರು ಮುಂದುವರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಈಗ ವಿಷಮ ಪರಿಸ್ಥಿತಿ ಇದೇ ಧರ್ಮ ಧರ್ಮಗಳ ಮಧ್ಯ ವಿಷಬೀಜ ಬಿತ್ತಲಾಗುತ್ತಿದೆ ಇದಕ್ಕೆ ಸರ್ಕಾರದ ಕುಮ್ಮಕು ಸಹ ಇದು ಸಮಾಜ ಹೊಡೆಯುವ ಕೆಲಸವನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ತಾಕಿತು ಮಾಡಿದರು .
ಜನರ ಸಂಕಷ್ಟಗಳು ,ಸಮಸ್ಯೆಗಳು ಬಗ್ಗೆಹರಿಯಬೇಕಾದರೆ ಜೆಡಿಎಸ್ ಗೆ ಮತನೀಡಬೇಕು 75ವರ್ಷಗಳ ಕಾಲ ಅಧಿಕಾರ ಮಾಡಿದ ಸರ್ಕಾರಗಳು ಜನರ ಬಡತನ ನಿಗಿಸುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.
ತುಮಕೂರು ಜಿಲ್ಲೆಗೆ ನೀರಿನ ವಿಚಾರದಲ್ಲಿ ದೇವೇಗೌಡರ ಕುಟುಂಬ ಎಂದಿಗೂ ದ್ರೋಹ ಮಾಡಿಲ್ಲ ,ಹಾರಂಗಿ ,ಹೇಮಾವತಿ ಜಲಾಶಯ ನಿರ್ಮಾಣದ ಹಿಂದೆ ದೇವಗೌಡರ ಹೋರಾಟ ಇದೇ,ತುಮಕೂರು ಜಿಲ್ಲೆಗೆ 24 ಟಿ ಎಮ್ ಸಿ ನೀರು ಸಿಗಲು ದೇವೇಗೌಡರೇ ಕಾರಣ ನಮ್ಮಗಳ ವಿರುದ್ದ ಇಲ್ಲದ ಆರೋಪ ಮಾಡಿ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದು ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ವಿರೋಧಿ,ತುಮಕೂರು ಜಿಲ್ಲೆಗೆ ದ್ರೊಹ ಮಾಡಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ ದೇವೇಗೌಡರು ತುಮಕೂರಿಗೆ ನೀರು ಕಲ್ಪಿಸಲು ಹೋರಾಟ ಮಾಡದೆ ಇದ್ದಿದರೇ ಜಿಲ್ಲೆ ಶಾಶ್ವತವಾಗಿ ಬರಕ್ಕೆ ತುತ್ತಾಗುತಿತ್ತು ಎಂದು ವಿರೋದಿಗಳ ಅಪಪ್ರಚಾರದ ವಿರುದ್ದ ಗುಡುಗಿದರು.
ಮುಂದಿನ ಚುನಾವಣೆಯಲಿ ಪೂರ್ಣ ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ರಚನೆ ಮಾಡಿದರೇ ನೀರು ,ಶಿಕ್ಷಣ, ಆರೋಗ್ಯ, ಉದ್ಯೋಗ ,ಮನೆ ಎಲ್ಲಾರಿಗೂ ಕಲ್ಪಿಸುವ ಪಂಚರತ್ನ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದರು.
ಶಾಸಕ ಗೌರಿಶೆಂಕರ್ ಮಾತನಾಡಿ ರಾಜ್ಯದಲ್ಲಿ ನುಡಿದಂತೆ ನಡೆಯುವ ಮುಖ್ಯ ಮಂತ್ರಿ ಕುಮಾರಣ್ಣ ಅವರು ಮಾತು ಕೊಟ್ಟಂತೆ ಸಮಿಶ್ರ ಸರ್ಕಾರದ ಸಮಯದಲ್ಲಿ ವಿರೋಧಗಳ ನಡುವೆಯೂ 25 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿ ಧೀಮಂತಿಕೆ ಮೆರೆದರು. ಬಡವರ ಮುಖ್ಯ ಮಂತ್ರಿ ಎಂದೇ ಹೆಸರು ಮಾಡಿರುವ ಕುಮಾರಸ್ವಾಮಿಯವರು 2023 ಕ್ಕೆ ಮತ್ತೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು.
ಗೂಳೂರು,ನಾಗವಲಿ ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಜನಾತ ಜಲಧಾರೆ ರಥವನ್ನು ಪೂರ್ಣಕುಂಬದೊಂದಿಗೆ ಆದ್ದೂರಿಯಾಗಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಪಕ್ಷದ ಮಾಜಿ ಶಾಸಕರಾದ ಕೃಷ್ಣಪ್ಪ ತಿಮ್ಮರಾಯಪ್ಪ ಸುಧಾಕರ್ ಲಾಲ್ ವಿಧಾನ ಪರಿಷತ್ ಸದಸ್ಯ ,ತಿಪ್ಪೇಸ್ವಾಮಿ ಮುಖಂಡರಾದ ಅರ್ ಸಿ ಅಂಜನಪ್ಪ ,ಟಿ ಆರ್ ನಾಗರಾಜು,ನರಸೇಗೌಡ ,ಬೆಳ್ಳಿಲೋಕೇಶ್ ಮಹಿಳಾ ಘಟಕದ ಲಕ್ಷಮ್ಮಮ ಮತ್ತಿತರರು ಹಾಜರಿದರು.