ಶಿವಮೊಗ್ಗ ಯುವಕನ ಕೊಲೆ, ಗಲಭೆಗೆ ಸಚಿವ ಈಶ್ವರಪ್ಪ ನೇರ ಹೊಣೆ -ತಾಜುದ್ದೀನ್ ಶರೀಫ್
ತುಮಕೂರು: ಶಿವಮೊಗ್ಗ ನಗರದಲ್ಲಿ ಭಾನುವಾರ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧ ಪ್ರತ್ಯೆಕ್ಷ ವರದಿ ಸಾಕ್ಷಿಗಳಿಲ್ಲದೇ, ಎಫ್ ಐಆರ್ ದಾಖಲಿಸುವ ಮುನ್ನೆವೇ ಸಚಿವ ಈಶ್ವರಪ್ಪ ನವರು ಮುಸಲ್ಮಾನ ಗುಂಡಾಗಳು ಕೊಲೆ ಮಾಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದು ಖಂಡನೀಯ. ಸಚಿವರ ಹೇಳಿಕೆಯಿಂದ ಕೋಮು ಸೌಹಾರ್ದಯಕ್ಕೆ ಧಕ್ಕೆಯಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಅಧ್ಯಕ್ಷರು ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಯುವಕನ ಅಂತಿಮಯಾತ್ರೆ ವೇಳೆ ಕೋಮು ಘರ್ಷಣೆ ಉಂಟಾಗಿ ಹಲವರ ಮನೆ, ಅಂಗಡಿಗಳಿಗೆ ಕಲ್ಲು ತೂರಾಟ ನಡೆಸಿ ಯುವಕರ ಗುಂಪು ಧಾಂಧಲೆ ನಡೆಸಿದ್ದಾರೆ. ಅನೇಕ ವಾಹನಗಳಿಗೆ ಬೆಂಕಿಯನ್ನು ಹಚ್ಚಿ ಪುಂಡಾಟ ಮೆರೆದಿದ್ದಾರೆ. ಇದಕ್ಕೆ ಸಚಿವ ಈಶ್ವರಪ್ಪನವರೇ ನೇರ ಹೊಣೆ ಆಗಿದ್ದದಾರೆ.
ಅವರ ಹೇಳಿಕೆಯಿಂದಲೇ ಈ ದುರ್ಘಟನೆಯಾಗಿದೆ. ತಮ್ಮದೇ ಸರ್ಕಾರ ಇರುವಾಗ ಇಂತಹ ಘಟನೆಗಳು ನಡೆಯದ ಹಾಗೆ ನೋಡುವ ಬದಲು ಕೋಮು ಪ್ರಚೋದನ ಹೇಳಿಕೆ ನೀಡಿ ಕೋಮು ಗಲಭೆ ಮಾಡಿಸಿದ್ದು ದುರ್ದೈವ. ಈ ಕೊಲೆಯ ನಿಜವಾದ ಆರೋಪಿಗಳು ಯಾವದೆ ಧಮ೯ದವರಾಗಲಿ ಅಂತಹವರಿಗೆ ಕಾನೂನು ಕಠಿಣವಾದ ಶಿಕ್ಷೆ ವಿಧಿಸಬೇಕಾಗಿದೆ.
ರಾಜ್ಯದಲ್ಲಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಲಿ. ಗಲಭೆಯಲ್ಲಿ ಜನರ ಆಸ್ತಿಗಳು ನಾಶವಾಗಿದ್ದು ಅಂಥವರಿಗೆ ಸರ್ಕಾರ ಪರಿಹಾರ ಹಣ ನೀಡಬೇಕು ಇಲ್ಲವಾದರೆ ಈಶ್ವರಪ್ಪ ಅವರ ಆಸ್ತಿ ಮುಟ್ಟುಗೋಲು ಮಾಡಬೇಕೆಂದು ಎಂದು ಆಗ್ರಹಿಸಿದ್ದಾರೆ.