ರಾಜ್ಯದ ನೆಲ ಜಲ ವಿಚಾರಕ್ಕೆ ಬಂದಾಗ ಎಲ್ಲರೂ ಒಂದಾಗಬೇಕಿದೆ _ಸಚಿವ ಗೋವಿಂದ ಕಾರಜೋಳ.
ರಾಜ್ಯದ ನೆಲ ಜಲ ವಿಚಾರಕ್ಕೆ ಬಂದಾಗ ಸರ್ವಪಕ್ಷಗಳು ಒಂದಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ನೂತನ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಬೃಹತ್ ಹಾಗೂ ಮಧ್ಯಮ ನೀರಾವರಿ ಮಂತ್ರಿಯಾದ ನಂತರ ಮೊದಲ ಬಾರಿಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ಗೆ ಭೇಟಿ ನೀಡಿದ ನಂತರ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳರವರು ಮೇಕೆದಾಟು ಯೋಜನೆ ಅಂತರ್ರಾಜ್ಯ ನೀರಾವರಿ ಯೋಜನೆಗಳಲ್ಲಿ ಒಂದಾಗಿದ್ದು ಕೃಷ್ಣ ,ಮಹದಾಯಿ ಯೋಜನೆಗಳ ತರ ಇದು ಒಂದು ಅಂತರರಾಜ್ಯ ಯೋಜನೆಯಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಗ್ರೀನ್ ಟ್ರಿಬುನಲ್ ಚೆನ್ನೈ ವಿಭಾಗದವರು ಆಂಗ್ಲಮಾಧ್ಯಮದ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಸುದ್ದಿಯ ಮೇಲೆ ಸೋಮೆಟೊ ಕೇಸ್ ದಾಖಲು ಮಾಡಿ ಜಡ್ಜ್ಮೆಂಟ್ ಸಹ ನೀಡಿದ್ದು ಅದು ನಮ್ಮ ರಾಜ್ಯಕ್ಕೆ ಮಾರಕವಾಗಲಿದೆ ಹಾಗಾಗಿ ನಮ್ಮ ಸರ್ಕಾರ ಗ್ರೀನ್ ಟ್ರಿಬುನಲ್ ಗೆ ಅಪೀಲ್ ಮಾಡಲಾಗಿ ನಿಮಗೆ ಸುಮೋಟೋ ಕೇಸ್ ಹಾಕುವ ಅಧಿಕಾರ ನಿಮಗೆ ಇಲ್ಲ ಎನ್ನುವ ಆದೇಶ ನಮ್ಮ ಪರವಾಗಿ ಬಂದಿದ್ದು ಅದರ ವಿರುದ್ಧವಾಗಿ ಮತ್ತೆ ಅವರು ಸುಪ್ರೀಂಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಿದ್ದಾರೆ ಹಾಗಾಗಿ ಅವರ ಆರೋಪಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ ಅದಕ್ಕೆ ಸಂಬಂಧಿಸಿದಂತೆ ನಮ್ಮ ಅಧಿಕಾರಿಗಳು ಕಾನೂನು ರೀತಿಯಲ್ಲಿ ಹೋರಾಡಲು ಸಿದ್ಧರಿದ್ದಾರೆ ಎಂದರು.
ರಾಜ್ಯದ ಅನೇಕ ನದಿಗಳು ಅಂತರಾಜ್ಯ ನದಿ ಗಳಾಗಿದ್ದು ಅನೇಕ ರಾಜ್ಯಗಳೊಂದಿಗೆ ನೀರಿನ ಹಂಚಿಕೆ ಕೂಡ ಆಗಿದೆ ಇನ್ನು ಮೇಕೆದಾಟು ಕಾವೇರಿ ಬೇಸಿನ್ ನಲ್ಲಿ ಬರುವ ಯೋಜನೆಯಾಗಿದ್ದು ಅದರಂತೆ ತಮಿಳುನಾಡಿಗೆ ನೀರು ಹಂಚಿಕೆ ಕೂಡ ಆಗಿದ್ದು ನಮಗೆ ಲಭ್ಯವಿರುವ ನೀರಿನಲ್ಲಿ ನಾವು ಯಾವ ರೀತಿ ಉಪಯೋಗ ಮಾಡಿಕೊಳ್ಳಬೇಕು ಅನ್ನೋದು ನಮಗೆ ಬಿಟ್ಟ ವಿಷಯ ಮೇಕೆದಾಟು ಯೋಜನೆ ಬ್ಯಾಲೆನ್ಸಿಂಗ್ ಯೋಜನೆ ಆಗಿದ್ದು ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ ಹಾಗಾಗಿ ಅದಕ್ಕೆ ಯಾರ ಅಪ್ಪಣೆ ಕೂಡ ಬೇಕಾಗಿಲ್ಲ ನದಿಯೊಳಗೆ ಹರಿಯುವ ನೀರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಅದರಿಂದ ಯಾರಿಗೂ ತೊಂದರೆ ಇಲ್ಲ ಇನ್ನು ರಾಜ್ಯದ ನೆಲ ಜಲ ಬಂದಾಗ ಎಲ್ಲ ಪಕ್ಷ ಹಾಗೂ ಎಲ್ಲ ಸರ್ಕಾರಗಳು ರಾಜ್ಯದ ಹಿತ ಕಾಪಾಡಲು ಒಂದಾಗಬೇಕಿದೆ ಎಂದರು.
ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ
ಇನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಇನ್ನೂ ನುತನ ಮುಖ್ಯಮಂತ್ರಿಗಳ ಸರ್ಕಾರ ಸದೃಢವಾಗಿದೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಮರ್ಪಕವಾಗಿ ಇದ್ದು ಎಂತಹ ಸಮಸ್ಯೆ ಬಂದರೂ ಬಗೆ ಹರಿಸಲಿದ್ದಾರೆ ಎಂದರು.