ತಾಲೂಕು ಕಚೇರಿ ಸಿಬ್ಬಂದಿಗಳಿಂದ ಅರ್ಥಪೂರ್ಣ ಕಾಯಕಯೋಗಿ ಬಸವಣ್ಣ ಜಯಂತಿ ಆಚರಣೆ

ತಾಲೂಕು ಕಚೇರಿ ಸಿಬ್ಬಂದಿಗಳಿಂದ ಅರ್ಥಪೂರ್ಣ ಕಾಯಕಯೋಗಿ ಬಸವಣ್ಣ ಜಯಂತಿ ಆಚರಣೆ

ಹನೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಗದ ಜ್ಯೋತಿ ಮಹಾ ಜ್ನ್ಯಾನಿ ಕಾಯಕಯೋಗಿ ಬಸವಣ್ಣನವರ 890 ನೇ ಜನ್ಮ ದಿನೊತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ ಇದೆ ವೇಳೆ ಮಾತನಾಡಿದ ಗ್ರೇಡ್ 2 ತಹಸೀಲ್ದಾರ್ ಡಾ.ಧನಂಜಯ ರವರು ಎಲ್ಲರಿಗೂ ಗೊತ್ತಿರುವ ಈ ಬಾರಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸರಳವಾಗಿ ಈ ದಿನ ಬಸವಣ್ಣನವರ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ

 

 

 

 

 

 

 

 

ಹಾಗೆಯೇ ಬಸವಣ್ಣ ನವರ ಸಿದ್ದಂತಾ ಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಅಧ್ಯ ಕರ್ತವ್ಯ 12 ನೇ ಶತಮಾನದಲ್ಲಿಯೇ ಆರ್ಥಿಕತೆಯ ಬಗ್ಗೆ ಭದ್ರ ಬುನಾದಿ ಹಾಕಿ ಕೊಟ್ಟ ಮಹಾನ್ ಜ್ಞಾನಿ ಬಸವಣ್ಣ ನಮ್ಮ ದೇಶದಲ್ಲಿ ಸಮಾನತೆಯ ಪರವಾಗಿ ತಮ್ಮ ಜೀವನ ತ್ಯಾಗ ಮಾಡಿದ್ದಾರೆ ಮೇಲು ಕೀಳು ಹೆಣ್ಣು ಗಂಡು ಎಂಬ ತಾರತಮ್ಯದ ವಿರುದ್ಧ ಸಮಾನತೆಯ ಪರವಾಗಿ ಕ್ರಾಂತಿಕಾರಿ ಹೋರಾಟ ಮಾಡಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾ ಜ್ಞಾನಿ ಬಸವಣ್ಣ

 

 

 

 

 

 

 

 

 

 

 

ಹಾಗೂ ಕ್ರಿಸ್ತ ಪೂರ್ವ 563 -483 ರಲ್ಲಿ ಭಗವಾನ್ ಬುದ್ದರು ಜಗದಲ್ಲಿ ಶಾಂತಿ ಸಮಾಧಾನ ಸುಖ ಸಮೃದ್ಧಿ ಜೀವನ ನಡೆಸುವ ದಾರಿಯನ್ನು ಕಂಡು ಹಿಡಿಯಲು ತಮ್ಮ ಜೀವನವನ್ನೇ ತ್ಯಾಗ ಮಾಡಿದರು ಹಾಗೆ ಕ್ರಿಸ್ತ ಶಕ 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಸಮಾಜ ಸುಧಾರಕ ಬಸವಣ್ಣನವರು ಹಿಂದೆ ವರ್ಣಶ್ರಮ ಪದ್ಧತಿ ಎಂಬ ಮೇಲು ಕೀಳು ಬಡವ ಶ್ರೀಮಂತ ಎಂಬ ಅಸಮಾನತೆಯ ಪದ್ಧತಿ ಇತ್ತು ಮಹಿಳೆಯರನ್ನು ಕೇವಲವಾಗಿ ಕಾಣುವ ವ್ಯವಸ್ಥೆ ಇತ್ತು ಹೆಣ್ಣಿಗೆ ಸ್ವತಂತ್ರವನ್ನು ಕಿತ್ತುಕೊಂಡು ಕೇವಲ ಅಡುಗೆ ಮನೆಗೆ ಸೀಮಿತ ಮಾಡಿದ್ದರು

 

 

 

 

 

 

 

 

 

 

ಅಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಹೆಣ್ಣು ಗಂಡಿನಷ್ಟೇ ಸಮಾನಳು ಎಲ್ಲಾ ಮನುಷ್ಯರು ಸಮಾನರು ಎಂಬ ಕ್ರಾಂತಿಕಾರಿ ಹೋರಾಟ ಮಾಡಿ ನ್ಯಾಯಸಮ್ಮತವಾಗಿ ಬದಲಾವಣೆಯ ಕ್ರಾಂತಿ ಮಾಡಿದ ಜ್ಞಾನಿ ಬಸವಣ್ಣನವರು ಮೌಢ್ಯಚಾರಣೆ ವಿರುದ್ಧ ಹಲವಾರು ಆಂದೋಲನ ಮಾಡಿ ಜನ ಜಾಗೃತಿ ಮೂಡಿಸಿದ್ದಾರೆ ಪ್ರಜಾಪ್ರಭುತ್ವ ಪ್ರಭುತ್ವ ವ್ಯವಸ್ಥೆ ಹೇಗಿರಬೇಕು ಎಂಬುದನ್ನು 12 ನೇ ಶತಮಾನದಲ್ಲಿಯೇ ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ ಅನುಭವಮಂಟಪವನ್ನು ಕಟ್ಟಿ ಧಾರ್ಮಿಕ ಹಾಗೂ ಸಾಮಾಜಿಕ ಪರವರ್ತನೆ ಮಾಡುವ ಸಲುವಾಗಿ ಮಂತ್ರಿಯಾಗಿ ಆರ್ಥಿಕ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಜಗಜ್ಯೋತಿ ಬಸವಣ್ಣನವರಿಗೆ ಬಸವಣ್ಣ ನವರೇ ಸರಿಸಾಟಿ ಹಾಗಾಗಿ ನಾವೆಲ್ಲರೂ ಕೂಡ ಜಗಜ್ಯೋತಿ ಶ್ರೀ ಬಸವಣ್ಣನವರ ತತ್ವ ಸಿದ್ಧಾಂತಗಳನ್ನ ಮತ್ತು ಅವರು ನಡೆದು ಬಂದ ದಾರಿಗಳನ್ನ ಅವರ ವಿಚಾರಗಳನ್ನು ಪ್ರತಿಯೊಬ್ಬ ಭಾರತೀಯನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

 

 

 

 

 

 

 

 

 

 

ಎಂದು ಬಹಳ ಅರ್ಥಪೂರ್ಣವಾಗಿ ಬಸವಣ್ಣನವರ ಜೀವನದ ಚರಿತ್ರೆ ಬಗ್ಗೆ ಗ್ರೇಡ್ 2 ತಹಸೀಲ್ದಾರ್ ಡಾ.ಧನಂಜಯ್ ತಿಳಿಸಿದರು ಈ ಸಂದರ್ಭದಲ್ಲಿ ಹನೂರು ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಿವಾಸ್.ಆರ್ ಹೈ ಮಾದೇಶ್ ವಿ ಎ ಶೇಶುರಾಜ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!