ಕೊರಟಗೆರೆ – ತಾಲ್ಲೂಕಿನ ಐಕೆ ಕಾಲೋನಿಯಲ್ಲಿ ಫೆ 25 ರಂದು ಗಣಿತ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಗಾರವನ್ನು ಇಲಾಖಾ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ವಿಷಯ ಪರಿವೀಕ್ಷಕರಾದ ಗುರುಪ್ರಸಾದ್ ಅವರು 10ನೇ ತರಗತಿ ವಿದ್ಯಾರ್ಥಿಗಳ ಗುಣಮಟ್ಟ ಕಲಿಕೆ ಹಾಗೂ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಕರ ಕಾರ್ಯಸೂಚಿಗಳನ್ನು ಹಾಗೂ ಇಲಾಖೆ ಬಿಡುಗಡೆ ಮಾಡಿರುವ ನೀಲನಕ್ಷೆಯ ಕುರಿತು ಎಲ್ಲಾ ಶಿಕ್ಷಕರಿಗೂ ಮಾರ್ಗದರ್ಶನ ನೀಡಿದರು,ಹಾಗೂ ಮಧುಗಿರಿ ತಾಲೂಕಿನ ಡಿವಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಂಜುನಾಥ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದು ಹತ್ತನೇ ತರಗತಿಯಲ್ಲಿನ ಕ್ಲಿಷ್ಟಕರ ಅಂಶಗಳಾದ ತ್ರಿಕೋನಮಿತಿ ಮತ್ತು ತ್ರಿಕೋನ ಮಿತಿಯ ಅನ್ವಯಗಳಲ್ಲಿನ ಕ್ಲಿಷ್ಟಕರ ಸಮಸ್ಯೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸುವ ವಿಧಾನಗಳನ್ನು ತಿಳಿಸಿದರು, ಹಾಗೂ ತಾಲ್ಲೂಕು ಗಣಿತ ಶಿಕ್ಷಕರ ಸಂಘದ ಅಧ್ಯಕ್ಷರಾದ ವೈ ಸಿ ವಿ ಸ್ವಾಮಿರವರು ಮುಂದಿನ ಕಾರ್ಯಗಾರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮತ್ತು ಉತ್ತಮವಾಗಿ ಕಲಿತಂತಹ ವಿದ್ಯಾರ್ಥಿಗಳಿಗೆ ನಮ್ಮ ತಾಲ್ಲೂಕಿನ ಗಣಿತ ಶಿಕ್ಷಕರೆಲ್ಲರೂ ಪ್ರಶ್ನೆಪತ್ರಿಕೆಗಳನ್ನು ಅಧ್ಯಾಯವಾರು ಸಿದ್ಧಪಡಿಸಿಕೊಳ್ಳಲು ತಿಳಿಸಿದರು,
ಈ ಸಂದರ್ಭದಲ್ಲಿ ತಾಲೂಕಿನ 64 ಗಣಿತ ಶಿಕ್ಷಕರು ಭಾಗವಹಿಸಿದ್ದರು,