ತುಮಕೂರು ಗ್ರಾಮಾಂತರ ವಿ.ಸ ಕ್ಷೇತ್ರ ಸೂಕ್ಷ್ಮ ಖರ್ಚು ಆಧಾರಿತ ಕ್ಷೇತ್ರವಾಗಿ ಗುರುತು .

ತುಮಕೂರು ಗ್ರಾಮಾಂತರ ವಿ.ಸ ಕ್ಷೇತ್ರ ಸೂಕ್ಷ್ಮ ಖರ್ಚು ಆಧಾರಿತ ಕ್ಷೇತ್ರವಾಗಿ ಗುರುತು .

 

 

ತುಮಕೂರು – ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿರುವ ಸೂಕ್ಷ್ಮ ಖರ್ಚು ಆಧಾರಿತ ವಿಧಾನಸಭಾ ಕ್ಷೇತ್ರದ (Highly expenditure sensitive constancy)ಪಟ್ಟಿಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವು ಸಹ ಇದೆ ಎಂದು ಅಸಿಸ್ಟೆಂಟ್ ಕಮಿಷನರ್ ಹೋಟೆಲ್ ಶಿವಪ್ಪ ತಿಳಿಸಿದ್ದಾರೆ.

 

 

 

 

 

 

ಸೂಕ್ಷ್ಮ ಕರ್ಚು ಆಧಾರಿತ ಕ್ಷೇತ್ರವಾಗಿ ಪಟ್ಟಿಯಲ್ಲಿ ಇರುವ ಕಾರಣ ಇಬ್ಬರು ಎ ಆರ್ ಓ ಗಳನ್ನ ನೇಮಕ ಮಾಡಿ ಚುನಾವಣಾ ಅಕ್ರಮಗಳು ನಡೆಯದಂತೆ ಕ್ರಮಕೈಗೊಳ್ಳಲಾಗಿದೆ ಎಂದ ಅವರು ಇನ್ನು ಮತದಾರರಿಗೆ ಆಮಿಷದ ಆರೋಪಗಳು ಕಂಡುಬಂದರೆ ಕೂಡಲೇ ಸಾರ್ವಜನಿಕರು ಸಂಬಂಧಪಟ್ಟ ಚುನಾವಣೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ.

 

 

 

 

 

ಇನ್ನು ಚುನಾವಣಾ ಅಕ್ರಮಗಳನ್ನು ನಡೆಯುವ ಸಲುವಾಗಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 5 ಚೆಕ್ಪೋಸ್ಟ್ಗಳನ್ನ ನಿರ್ಮಾಣ ಮಾಡಲಾಗಿದ್ದು ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದ ಅವರು ಚುನಾವಣಾ ಆಕ್ರಮಗಳನ್ನು ತಡೆಯಲು ಪ್ಯಾರಾ ಮಿಲಿಟರಿ ಪಡೆಯನ್ನ ನಿಯೋಜಿಸಲಾಗುವುದು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯೋಡಿಗು ಸಹ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

 

 

 

 

 

68.850 ml (ಲೀಟರ್) ಮದ್ಯ 112 ಸೀರೆ ವಶ.

ಇನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು 68.850 ಎಂಎಲ್ ಮಧ್ಯವನ್ನ ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು, ಬೆಳ್ಳಾವಿ ಬಾಗದಿಂದ ವಶಪಡಿಸಿಕೊಳ್ಳಲಾಗಿದೆ ಇದರ ಜೊತೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಯಲ್ಲಾಪುರ ಚೆಕ್ ಪೋಸ್ಟ್ ನಲ್ಲಿ 112 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!