ತುಮಕೂರು ಮಹಾನಗರ ಪಾಲಿಕೆ ಕಮಿಷನರ್ ಬರವಸೆಯ ನಂತರ ಧರಣಿ ಕೈಬಿಟ್ಟ ತುಮಕೂರು ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್.
ಸೋಮವಾರ ಮಧ್ಯಾಹ್ನ ತುಮಕೂರು ಮಹಾನಗರ ಪಾಲಿಕೆ 17ನೇ ವಾರ್ಡ್ ಸದಸ್ಯರಾದ ಮಂಜುನಾಥರವರು ತುಮಕೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ಸೋಮವಾರ ಬೆಳಗ್ಗೆ ರಸ್ತೆಗಾಗಿ ಧರಣಿ ಕುಳಿತಿದ್ದರು ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಡಾವಣೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದೆ ಸಾಕಷ್ಟು ಹೈರಾಣಾಗಿದ್ದರು ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯ ಮಂಜುನಾಥ್ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಆದರೆ ಕೊನೆಗೂ ಅಧಿಕಾರಿಗಳ ಹಾಗೂ ಇತರೆ ಮುಖಂಡರ ಮಧ್ಯಸ್ಥಿಕೆಯಿಂದ ಪಾಲಿಕೆ ಸದಸ್ಯ ಮಂಜುನಾಥ್ ಕೈಗೊಂಡಿದ್ದ ಸತ್ಯಗ್ರಹ ಕೊನೆಗೂ ಅಂತ್ಯ ಕಂಡಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆಯ ಸದಸ್ಯ ಮಂಜುನಾಥರವರು ಎಷ್ಟೋ ವರ್ಷಗಳಿಂದ ಈ ಭಾಗದ ಸಾರ್ವಜನಿಕರು ರಸ್ತೆ ಇಲ್ಲದೆ ಹೈರಾಣಾಗಿದ್ದರು ಇನ್ನು ತಾವು ಚುನಾವಣೆ ಸಂದರ್ಭದಲ್ಲಿ ತಾನು ರಸ್ತೆ ಮಾಡಿಸಿ ಕೊಡುವೆ ಎಂದು ಮಾತು ನೀಡಿದ್ದೆ.
ಆದರೆ ಸಾರ್ವಜನಿಕರು ತಮ್ಮ ಬೇಸರ ವ್ಯಕ್ತಪಡಿಸಿದರು ಆದರೆ ಈ ಸ್ಥಳದಲ್ಲಿ ಕೆಲ ಪ್ರಭಾವಿ ಮುಖಂಡರ ಖಾಸಗಿ ಜಾಗ ಗಳಿದ್ದು ಅವರು ರಸ್ತೆ ಮಾಡಲು ಜಾಗ ಬಿಡದ ಕಾರಣ ಇದುವರೆಗೂ ರಸ್ತೆ ಮಾಡಲು ಸಾಧ್ಯವಾಗಿರಲಿಲ್ಲ ಆದರೆ ನಾನು ಇದಕ್ಕೆ ಸಂಬಂಧಿಸಿದಂತೆ ಕಳೆದ ಒಂದುವರೆ ವರ್ಷದಿಂದ ಸಾಕಷ್ಟು ಅಧಿಕಾರಿಗಳು ಹಾಗೂ ಶಾಸಕರು ಹಾಗೂ ಸಂಸದರ ಜೊತೆ ಈ ಬಗ್ಗೆ ಮಾತನಾಡಿದ್ದೆ ಅವರು ಆಶ್ವಾಸನೆ ನೀಡುವ ಮೂಲಕ ದಿನಗಳನ್ನು ಕಳೆದರು ಆದರೆ ರಸ್ತೆ ಸಮಸ್ಯೆ ಬಗೆಹರಿದಿಲ್ಲ ಹಾಗಾಗಿ ಇಂದು ಪ್ರತಿಭಟನೆ ಕೈಗೊಂಡಿದ್ದೇ ಆದರೆ ಪಾಲಿಕೆ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಹಾಗೂ ಸಂಸದರೊಂದಿಗೆ ಮಾತುಕತೆ ನಡೆಸಿ ಮುಂದಿನ ಎರಡು ದಿನದಲ್ಲಿ ಸರ್ವೆ ಮಾಡಿಸಿ ರಸ್ತೆ ಗುರುತು ಮಾಡಿ ಮುಂದಿನ ಎರಡು ತಿಂಗಳಲ್ಲಿ ರಸ್ತೆ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ ಹಾಗಾಗಿ ತಾನು ಪ್ರತಿಭಟನೆಯನ್ನು ಹಿಂಪಡೆದ್ದೇನೆ ಮುಂದಿನ ಎರಡು ದಿನದಲ್ಲಿ ಸರ್ವೆಕಾರ್ಯ ಮುಗಿಯಬೇಕು ಇಲ್ಲವಾದರೆ ಗುರುವಾರದಂದು ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಇದೆ ಸಾರ್ವಜನಿಕರ ಜೊತೆ ಧರಣಿ ನಡೆಸುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆಯ ಕಮಿಷನರ್ ರೇಣುಕಾ ತುಮಕೂರು ಮಹಾನಗರ ಪಾಲಿಕೆ ವಿರೋಧಪಕ್ಷದ ನಾಯಕ ಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಸ್ ಸ್ಥಳೀಯರಾದ ಚಿಕ್ಕಣ್ಣ ಮಾಯಣ್ಣ ಸೇರಿದಂತೆ ಸ್ಥಳೀಯ ನಾಗರಿಕರು ಹಾಜರಿದ್ದರು.