ಆರ್ಯವೈಶ್ಯ ಮಂಡಳಿಯ ಸಚ್ಚಿದಾನಂದ ಶ್ರೀಗಳ ಪೀಠಾರೋಹಣ

 

ಮಧುಗಿರಿ , ವಿಶ್ವ ಆರ್ಯವೈಶ್ಯ ಸಮುದಾಯದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಶಕ್ತಿ ಕೇಂದ್ರ ಶ್ರೀ ವಾಸವಿ ಶಕ್ತಿ ಪೀಠದ ದ್ವಿತೀಯ ಪೀಠಾಧಿಪತಿಗಳಾಗಿ ಶ್ರೀಶ್ರೀಶ್ರೀ ಸಚ್ಚಿದಾನಂದ ಸರಸ್ವತಿಯವರು , ದಿನಾಂಕ 20-06-20an ಆ ಭಾನುವಾರ ಬೆಳಿಗ್ಗೆ 10.50 ರಿಂದ 12.00 ಘಂಟೆಗೆ ಸಲ್ಲುವ ಶುಭ ಸಿಂಹ ಲಗ್ನದಲ್ಲಿ ಬೆಂಗಳೂರು ನಗರ ಮಲ್ಲೇಶ್ವರದ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ , ಮಾನ್ಯ ಘನ ಕರ್ನಾಟಕ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ವಯ , ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೆಂಗಳೂರು ನಗರದ ಪ್ರತಿಷ್ಠಿತ ಚಿನ್ಮಯ ಮಿಷನ್ ಸಂಸ್ಥೆಯ ಪರಮ ಪೂಜ್ಯರಾದ ಶ್ರೀ ಶ್ರೀ ಶ್ರೀ ಬ್ರಹ್ಮಾಜಿ ಅವರ ದಿವ್ಯ ಸನ್ನಿಧಿಯಲ್ಲಿ ಪೀಠಾರೋಹಣ ಮಾಡಲಿದ್ದಾರೆ ಎಂದು , ಮಧುಗಿರಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಮತ್ತು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯ ನಿರ್ದೇಶಕರಾದ ಕೆ.ಎನ್.ಶ್ರೀನಿವಾಸಮೂರ್ತಿ ರವರು ಮಾಧ್ಯಮಗಳಿಗೆ ತಿಳಿಸಿದರು . ಈ ಸಂಧರ್ಭದಲ್ಲಿ ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳು ಜಿ.ಆರ್.ವೆಂಕಟೇಶ್, ಆಡಳಿತ ಮಂಡಳಿ ನಿರ್ದೇಶಕರುಗಳಾದ ಕೆ.ಬದರಿನಾರಾಯಣ್, ತಾತಾ ಬದರಿನಾಥ್, ಕೆ.ಪಿ.ಅಶ್ವತ್ಥನಾರಾಯಣ್, ಎಸ್.ಆರ್.ಅಂಜನೇಯಲು, ಪಿ.ವಿ.ಮೋಹನ್, ಕಿಶೋರ್, ರಘುರಾಮಯ್ಯ, ಸಿ.ಎ.ಕೆಂಚೇಶ್, ಎಂ.ಎಸ್.ರಘನಾಥ್, ಎಸ್.ಎಂ.ಕೃಷ್ಣ, ಜಿ. ಆರ್ ಗೋವಿಂದರಾಜು ಇದ್ದರು.

ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿಯವರು ಮೂಲತಃ ಶಿವಮೊಗ್ಗದವರಾಗಿದ್ದು , ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗಾದ ಶ್ರೀ ವಾಸವಿ ವಿದ್ಯಾಲಯದಲ್ಲಿ ಪೂರೈಸಿದರು . ಅವರು ತಮ್ಮ ಮ್ಯಾನೇಜೆಂಟ್ ಪದವಿಯನ್ನು ಬಂಗಾರದ ಪದಕದೊಂದಿಗೆ ರಾಜ್ಯದ ಪ್ರತಿಷ್ಠಿತ ಕ್ರೈಸ್ಟ್ ವಿಶ್ವ ವಿದ್ಯಾನಿಲಯದಿಂದ ಪಡೆದ ಪ್ರತಿಭಾ ಸಂಪನ್ನರು , ಬಾಲ್ಯದಿಂದಲೇ ಆಧ್ಯಾತ್ಮಿಕತೆಯತ್ತ ಒಲವು ಹೊಂದಿದ್ದ ಶ್ರೀಗಳು , ಚಿನ್ಮಯ ಮಿಷನ್ ಬಾಲ ವಿಹಾರ ಹಾಗೂ ಪೂಜ್ಯ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್‌ನ ವ್ಯಕ್ತಿತ್ವ ವಿಕಸನ ಕಾರ್ಯಗಾರಗಳಲ್ಲಿ ಭಾಗವಹಿಸಿ ಸ್ಫೂರ್ತಿಯನ್ನು ಪಡೆದಿದ್ದಾರೆ .

Leave a Reply

Your email address will not be published. Required fields are marked *

You cannot copy content of this page

error: Content is protected !!