ಪ್ರೀತನ್ ನಾಗಪ್ಪ ಸ್ವಗ್ರಾಮದಲ್ಲಿ ಎಮ್ ಆರ್ ಮಂಜುನಾಥ್ ಭರ್ಜರಿ ಪ್ರಚಾರ

ಪ್ರೀತನ್ ನಾಗಪ್ಪ ಸ್ವಗ್ರಾಮದಲ್ಲಿ ಎಮ್ ಆರ್ ಮಂಜುನಾಥ್ ಭರ್ಜರಿ ಪ್ರಚಾರ

ಹನೂರು :- ವಿಧಾನಸಭಾ ಕ್ಷೆತ್ರದಲ್ಲೆ ಅತೀ ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡ ಗ್ರಾಮ ಸುಮಾರು ಹನ್ನೊಂದು ಸಾವಿರ ಜನಸಂಖ್ಯೆ ಹೊಂದಿರುವ ಕಾಮಗೆರೆ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಎಮ್ ಆರ್ ಮಂಜುನಾಥ್

 

 

 

 

 

 

 

ಇಂದು ರೋಡ್ ಶೋ ಮೂಲಕ ಮನೆ ಮನೆ ಪ್ರಚಾರಕ್ಕಿಳಿದು ಮತಯಾಚನೆ ಮಾಡಿದ್ದಾರೆ ಮುಖ್ಯವಾಗಿ ಕಾಮಗೆರೆ ಗ್ರಾಮದಲ್ಲಿ ಹೆಚ್ಚಾಗಿ ರೇಷ್ಮೆ ಕಾರ್ಖಾನೆಗಳು ಹೆಚ್ಚಾಗಿ ಕಂಡುಬರುವುದರಿಂದ ಎಮ್ ಆರ್ ಮಂಜುನಾಥ್ ರೇಷ್ಮೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ಯಜಮಾನರ ಹತ್ತಿರ ಹೋಗಿ ಮತಯಾಚನೆ ಮಾಡಿದ್ದಾರೆ

 

 

 

 

 

 

 

 

 

 

 

ನಂತರ ಗ್ರಾಮದ ಹಲವಾರು ಬಿದಿಗಳಲ್ಲಿ ಮತಯಾಚನೆ ಮಾಡುತ್ತಿರುವ ಮಂಜುನಾಥ್ ಗೆ ನಿರೀಕ್ಷೆಯ ಬೆಂಬಲ ನೀಡುತ್ತಿದ್ದಾರೆ ಹಾಗೆಯೇ ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಸ್ವಗ್ರಾಮದಲ್ಲಿ ಮಂಜುನಾಥ್ ರವರನ್ನು ಈ ಬಾರಿ ಜನ ಕೈ ಹಿಡಿಯುತ್ತಾರ ಕಾದು ನೋಡಬೇಕಾಗಿದೆ ಹಾಗೂ ಕಾಮಗೆರೆ ಗ್ರಾಮದಲ್ಲಿ ಪ್ರಚಾರಿಕ್ಕಿಳಿದ ಸಂದರ್ಭದಲ್ಲಿ ಜನರ ಪ್ರತಿಕ್ರಿಯೇ ಹೇಗಿದೆ ಎಂದರೆ

 

 

 

 

 

 

 

 

 

 

ಹನೂರು ಕ್ಷೆತ್ರದಲ್ಲಿ ಗೆದ್ದಂತ ಶಾಸಕರು ಹಾಗೂ ಸ್ಥಳೀಯ ಅಭ್ಯರ್ಥಿ ಪ್ರೀತನ್ ರವರು ಗ್ರಾಮದಲ್ಲಿ ಯಾವುದೇ ಸಾವು ನೋವು ಆದರೂ ಜನರ ಕಷ್ಟ ಸುಖಗಳಿಗೆ ಸರಿಯಾಗಿ ಸ್ಪಂದಿಸಲ್ಲ ಮಂಜುನಾಥ್ ರವರು ಕಳೆದ ಬಾರಿ ಸೋತರು ಕೂಡ ಕ್ಷೆತ್ರದ ಜನರ ಕಷ್ಟಕ್ಕೆ ಸಕ್ರಿಯವಾಗಿ ಸ್ಪಂದಿಸುತಿದ್ದಾರೆ

 

 

 

 

 

 

 

 

 

 

 

ಆಗಾಗಿ ಎಮ್ ಆರ್ ಮಂಜುನಾಥ್ ರವರು ನಮ್ಮ ಕ್ಷೆತ್ರವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುವ ಸಂಕಲ್ಪ ಮಾಡಿದ್ದಾರೆ ಹನೂರು ವಿಧಾನಸಭಾ ಕ್ಷೆತ್ರಕ್ಕೆ ಸೂಕ್ತ ಅಭ್ಯರ್ಥಿ ಆದ್ದರಿಂದ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಎಮ್ ಆರ್ ಮಂಜುನಾಥ್ ಅವರಿಗೆ ನಮ್ಮ ಬೆಂಬಲ ಸೂಚಿಸುತ್ತೇವೆ

 

 

 

 

 

 

 

 

 

ಎಂದು ಗ್ರಾಮದ ಮತದಾರರು ಅಭಿಮಾನ ವ್ಯಕ್ತ ಪಡಿಸುತಿದ್ದಾರೆ ಇನ್ನು ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಮಗೆರೆ ಗ್ರಾಮದ ಯಜಮಾನರು ಮುಖಂಡರು ಬಾಗಿಯಾಗಿದ್ದರು.

 

 

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!