ಗುಬ್ಬಿ ತಾಲೂಕಿನ ಚಿಕ್ಕೋನಹಳ್ಳಿ ಬಳಿ ಲಾರಿ ಪಲ್ಟಿ
ತುಮಕೂರು_
ತುಮಕೂರು ಜಿಲ್ಲೆ ಗುಬ್ಬಿ ನಗರದಿಂದ ಚಿಕ್ಕೋನಹಳ್ಳಿ ಮಾರ್ಗವಾಗಿ ಎಡೆಯೂರು ರಾಷ್ಟ್ರೀಯ ಹೆದ್ದಾರಿ ತಲುಪಲು ಈ ಮಾರ್ಗದಲ್ಲಿ ಕೆಶಿಪ್ ಸಂಸ್ಥೆ ಯಿಂದ ನಿರ್ಮಾಣ ಮಾಡಿರುವ ರಸ್ತೆ ಅವೈಜ್ಞಾನಿಕವಾಗಿದ್ದು ಈ ರಸ್ತೆಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಬಹಳಷ್ಟು ಬಾರಿ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಇದ್ದಾವೆ .ಇದಕ್ಕೆ ಮುಖ್ಯ ಕಾರಣ ಈ ರಸ್ತೆ ನಿರ್ಮಾಣ ಮಾಡಿದ ಕೆಶಿಪ್ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.
ಈ ರಸ್ತೆಯಲ್ಲಿ ಎಥೆಚ್ಚವಾಗಿ ವಾಹನ ಸಂಚಾರವಿದ್ದು ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಯಾವ ಜಾಗದಲ್ಲಿ ರಸ್ತೆ ತಿರುವು ಇದೆ ಯಾವ ಜಾಗದಲ್ಲಿ ಡಿವೈಡರ್ ಇದೆ ಎಂದು ತಿಳಿಯದಾಗಿದೆ ಈ ರಸ್ತೆಯಲ್ಲಿ ಸರಿಯಾದ ಸೂಚನಾ ಫಲಕಗಳನ್ನು ಹಾಕದೆ ಇರುವುದು ಇಂತಹ ದುರ್ಘಟನೆಗೆ ಕಾರಣವಾಗಿದೆ.
ಇದರ ಜೊತೆಗೆ ಕೇಲವು ಗ್ರಾಮಗಳಲ್ಲಿ ಕಿರಿದಾದ ರಸ್ತೆಗಳಿಗೆ ಡಿವೈಡರ್ ಹಾಕಿರುವುದರಿಂದ ಹೆಚ್ಚು ಅಪಘಾತಗಳು ಆಗುತ್ತಿವೆ ಚಿಕ್ಕೋನಹಳ್ಳಿ ಗ್ರಾಮದಲ್ಲಿ ರಸ್ತೆ ಕಿರಿದಾಗಿದ್ದು ಇಲ್ಲಿನ ರಸ್ತೆ ಮಧ್ಯೆ ಡಿವೈಡರ್ ಅವಶ್ಯಕತೆ ಇಲ್ಲಾದಿದ್ದರು ಇಲ್ಲಿ ಡಿವೈಡರ್ ನಿರ್ಮಿಸಿ ಅದಕ್ಕೆ ತಕ್ಕಂತೆ ಈ ಜಾಗದಲ್ಲಿ ಸರಿಯಾದ ಅಪಘಾತದ ಸೂಚನಾ ಫಲಕಗಳನ್ನು ಹಾಕದಿರುವುದು ಇಲ್ಲಿನ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ .
ಈ ಗ್ರಾಮದ ಜನರು ಆತಂಕದ ಜೀವನ ಮಾಡುವಂತಾಗಿದೆ. ಅಧಿಕಾರಿಗಳು ಕೂಡಲೆ ಇತ್ತಕಡೆ ಗಮನಹರಿಸಿ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಭಂದಪಟ್ಟ ಇಲಾಖೆಯ ಮುಂಭಾಗದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಮುಖಂಡ ಲೋಕೇಶ್ ತಿಳಿಸಿದರು.
ವರದಿ ಯೋಗೀಶ್ ಮೇಳೇಕಲ್ಲಹಳ್ಳಿ