ತುಮಕೂರಿನ ಕೆ ಆರ್ ಐ ಡಿ ಎಲ್ ಇಂಜಿನಿಯರ್ ಮನೆಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ.
ತುಮಕೂರು – ರಾಜ್ಯಾದ್ಯಂತ ಬುಧವಾರ ಬೆಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಹೊಂದಿರುವ ಮಾಹಿತಿಯ ಮೇಲೆ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಆರಂಭಿಸಿದ್ದಾರೆ.
ತುಮಕೂರು ಜಿಲ್ಲೆಯ ಕೆ ಆರ್ ಐ ಡಿ ಎಲ್ ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರಾಗಿ ಕೆಲಸ ನಿರ್ವಹಿಸುತ್ತಿರುವ ಹನುಮಂತ ರಾಯಪ್ಪ ಮನೆ ಮೇಲೆಯೂ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು.
ಹನುಮಂತ ರಾಯಪ್ಪ ಅವರಿಗೆ ಸೇರಿದ ತುಮಕೂರು ನಗರದ ಶಿರಾ ಗೇಟ್ ಬಡಾವಣೆಯಲ್ಲಿ ವಾಸವಿರುವ ಮನೆ ,ಮಿಡಗೇಶಿ ಬಳಿಯ ಫಾರಂ ಹೌಸ್ ಸೇರಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಕೊರಟಗೆರೆ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ತಪಾಸಣಾ ಕಾರ್ಯ ಮುಂದುವರೆಸಿದ್ದಾರೆ.