ಮಮತಾ ಬ್ಯಾನರ್ಜಿ ವಿರುದ್ಧ ವಕೀಲೆ ಪ್ರಿಯಾಂಕಾ ತಿಬ್ರೇವಾಲ್ ರನ್ನು ಕಣಕ್ಕಿಳಿಸಿದ ಬಿಜೆಪಿ
ಕೋಲ್ಕತ್ತ: ತನ್ನ ಯುವ ಘಟಕದ ನಾಯಕಿ ಹಾಗೂ ನ್ಯಾಯವಾದಿಯಾಗಿರುವ ಪ್ರಿಯಾಂಕಾ ತಿಬ್ರೇವಾಲ್ ರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಭಬಾನಿಪುರ ವಿಧಾನಸಭಾ ಕ್ಷೇತ್ರ ಹಾಗೂ ಇನ್ನಿತರ ಎರಡು ಸ್ಥಾನಗಳಿಗೆ ಸೆಪ್ಟೆಂಬರ್ 30ರಂದು ಚುನಾವಣೆ ನಡೆಯಲಿದೆ
ಬಿಜೆಪಿ ಪಕ್ಷವು ಸಮ್ಶೇರ್ ಗಂಜ್ ಗೆ ಮಿಲನ್ ಘೋಷ್ ಹಾಗೂ ಜಂಗೀಪುರ್ ವಿಧಾನಸಭಾ ಕ್ಷೇತ್ರಕ್ಕೆ ಸುಜಿತ್ ದಾಸ್ ರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಈ ಉಪಚುನಾವಣೆಯ ಮತ ಎಣಿಕೆಯು ಅಕ್ಟೋಬರ್ 3ರಂದು ನಡೆಯಲಿದೆ.
ತಿಬ್ರೇವಾಲ್ ರವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಯುವ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಪಕ್ಷಗಳ ಮೂಲಗಳ ಪ್ರಕಾರ ಪ್ರಿಯಾಂಕಾ ತಿಬ್ರೇವಾಲ್ ಸಕ್ರಿಯ ಬಿಜೆಪಿ ಯುವ ನಾಯಕಿಯಾಗಿದ್ದು, ಚುನಾವಣೋತ್ತರ ಹಿಂಸಾಚಾರದ ಕುರಿತು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದರು. ಹಿಂಸಾಚಾರದ ಕುರಿತು ಸಿಬಿಐ ತನಿಖೆಗೆ ನ್ಯಾಯಾಲಯ ಆದೇಶ ನೀಡಿತ್ತು.