ಜಮೀನು ಒತ್ತುವರಿ ಪ್ರಶ್ನೆಸಿದ್ದಕ್ಕೆ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ, ದೂರು ದಾಖಲು.
ತುಮಕೂರು_ದಲಿತರು ಉಳಿಮೆ ಮಾಡುತ್ತಿದ್ದ ಜಮೀನಿಗೆ ಸವರ್ಣಿಯರು ಬದುವನ್ನ ನಿರ್ಮಿಸಿದ್ದು ನನ್ನ ಪ್ರಶ್ನಿಸಲು ಹೋದ ಪರಿಶಿಷ್ಟ ಜಾತಿಯ ಕುಟುಂಬದ ಮೇಲೆ ಐವರು ಸವರ್ಣೀಯರು ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿ ಯಾರು ಹೋಬಳಿಯ ಭರಕನಾಳು ಗ್ರಾಮದಲ್ಲಿ ನಡೆದಿದೆ ನಡೆದಿದೆ.
ಪ್ರಕರಣದ ಹಿನ್ನೆಲೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಹೋಬಳಿಯ ಅಜ್ಜಿ ಗುಡ್ಡೆ ಗ್ರಾಮದ ಸರ್ವೆ ನಂಬರ್ 76ರಲ್ಲಿ ಸುಮಾರು 20 ವರ್ಷಗಳಿಂದ ಮೂರು ಎಕರೆ ಜಮೀನನ್ನು ದಲಿತ ಕುಟುಂಬ ವ್ಯವಸಾಯ ಮಾಡುತ್ತಿದ್ದ ಜಮೀನಿಗೆ ಸಂಬಂಧಿಸಿದಂತೆ ಹದ್ದು ಬಸ್ತಿಗಾಗಿ ಟಿ.ಟಿ ಹಾಗೂ ಸ್ಕೆಚ್ ಮಾಡಿಸಿ ಸಂಬಂಧಪಟ್ಟ ಇಲಾಖೆಗೆ ನೀಡಿದರು. ಇನ್ನು ಹಲವು ವರ್ಷದಿಂದ ಹುಳುಮೆ ಮಾಡುತ್ತಿದ್ದ ಜಮೀನಿನ ಪಕ್ಕದಲ್ಲೇ ಇರುವ ಸವರ್ಣಿಯರು ದಲಿತರು ಉಳಿಮೆ ಮಾಡಿಕೊಂಡು ಬರುತ್ತಿದ್ದ ಜಮೀನಿಗೆ ಅಡ್ಡಲಾಗಿ ಬದುವನ್ನು ನಿರ್ಮಾಣ ಮಾಡಿದ್ದು ಅದನ್ನು ಪ್ರಶ್ನಿಸಲು ಹೋದ ದಲಿತ ಕುಟುಂಬದ ಪರಿಶಿಷ್ಟ ಜಾತಿಯ ಗಂಗಾಧರ ಹಾಗೂ ಮಂಗಳಮ್ಮ ಎನ್ನುವ ಇಬ್ಬರ ಮೇಲೂ ಸವರ್ಣಿಯರು ಹಲ್ಲೆ ಮಾಡಿ ದ್ದರು ಹಲ್ಲೆ ಸಂಬಂಧ ತೀವ್ರ ಅಸ್ವಸ್ಥ ಗೊಂಡ ಅಸ್ವಸ್ಥಗೊಂಡ ವ್ಯಕ್ತಿಯನ್ನು ತಾಲೂಕು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜೂನ್ 16ರಂದು ದೂರು ನೀಡಲಾಗಿತ್ತು ದೂರಿನ ಹಿನ್ನೆಲೆ ಎಫ್ಐಆರ್ ಸಹ ದಾಖಲು ಮಾಡಿದ್ದ ಪೊಲೀಸರು.
ಘಟನೆಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿರುವ ಗಂಗಾಧರ್ ಅವರು ಜೂನ್ 16ರಂದು ಹೊಲದಲ್ಲಿದ್ದ ವೇಳೆ ಏಕಏಕಿ ಬರಕನಾಳು ಗ್ರಾಮದ ಸವರ್ಣೀಯರಾದ ರಾಮಯ್ಯ ತ್ರಿವೇಣಿ ಕೃಷ್ಣಮೂರ್ತಿ ಸರ್ವಮಂಗಳ ಹಾಗೂ ತೀರ್ಥ ಪ್ರಸಾದ್ ಎನ್ನುವವರು ನಮ್ಮ ಮೇಲೆ ಹಲ್ಲೆ ಮಾಡಿದ್ದು ಕೊಲೆ ಬೆದರಿಕೆಯನ್ನು ಸಹ ಹಾಕಿದ್ದು ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯಲ್ಲಿ ದೂರು ಸಹ ನೀಡಿದ್ದೆವು. ಆದರೆ ಇದುವರೆಗೂ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ ವಹಿಸಿದ್ದಾರೆ ಇದರಿಂದ ನಾವು ತೀವ್ರ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ ನಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಘಟನೆಯನ್ನಾಗಿ ಖಂಡಿಸಿರುವ ಬಿಎಸ್ಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಾಮಯ್ಯರವರು ಚಿಕ್ಕನಾಯಕನಹಳ್ಳಿ ಬರಕನಹಳು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆದಿರುವುದು ನಿಜಕ್ಕೂ ಖಂಡನೀಯ ಕೂಡಲೇ ಆರೋಪಿಗಳ ಬಂಧನ ವಾಗಬೇಕು ಈ ಮೂಲಕ ದಲಿತರ ರಕ್ಷಣೆಗೆ ಸರ್ಕಾರ ಮುಂದಾಗಬೇಕಾಗಿದೆ ಎಂದು ಒತ್ತಾಯಿಸಿದ್ದು ಪದೇಪದೇ ತುಮಕೂರು ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ಹಲ್ಲೆ ಪ್ರಕರಣಗಳು ವರದಿಯಾಗುತ್ತಿದ್ದು ತುಮಕೂರು ಜಿಲ್ಲೆ ಕರ್ನಾಟಕ ರಾಜ್ಯದ ಉತ್ತರ ಪ್ರದೇಶ ವಾಗುತ್ತಿದೆಯಾ ಅನ್ನುವ ಅನುಮಾನ ಮೂಡುತ್ತಿದೆ ಹಾಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡು ದಲಿತರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ .
ವರದಿ ಮಾರುತಿ ಪ್ರಸಾದ್ ತುಮಕೂರು