ಅಥಣಿ: ನಿನ್ನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಅವರ ಕಾರು ಅಪಘಾತ ಸಂಭವಿಸಿದ್ದು ಎಂಬ ಆರೋಪಕ್ಕೆ ಚಿದಾನಂದ ಸವದಿ ನಾನು ಆಗ ಕಾರಿನಲ್ಲಿ ಇರ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಅವರು ಅಥಣಿ ಪಟ್ಟಣದ ತಮ್ಮ ಸ್ವಗೃಹದಲ್ಲಿ ಭಾರತ ವೈಭವ ಜೊತೆ ಮಾತನಾಡಿ. ನಾನು ಮತ್ತು ನಮ್ಮ ಸ್ನೇಹಿತರು ಅಂಜನಾದ್ರಿ ಬೆಟ್ಟದ ಹನುಮನ ದರ್ಶನಕ್ಕೆ ಹೋಗಿದ್ದಿವಿ. ಮರಳಿ ಊರಿಗೆ ಬರುವ ಸಂದರ್ಭದಲ್ಲಿ ಹುನಗುಂದ ಸಮೀಪದಲ್ಲಿ ಈ ಘಟನೆ ಸಂಭವಿಸಿದೆ ನಾವು ಮತ್ತು ನಮ್ಮ ಸ್ನೇಹಿತರು ಎರಡು ಕಾರುಗಳಲ್ಲಿ ಹೋಗಿದ್ದು, ಹಿಂದಿನ ಕಾರಿನಿಂದ ನಮ್ಮ ಚಾಲಕ ಅಪಘಾತಕ್ಕೆ ಒಳಗಾಗಿ ನಮಗೆ ಕರೆ ಮಾಡಿದ ತಿಳಿಸಿದ. ನಾನು ತಕ್ಷಣವೇ ಅಪಘಾತ ಸಂಭವಿಸಿದ ಸ್ಥಳಕ್ಕೆ ಬೇಟಿ ನೀಡಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಹೋರಡುತ್ತೇನೆ, ನಮ್ಮ ಕಡೆಯಿಂದ ಆದಷ್ಟು ಪರಿಹಾರ ನೀಡುತ್ತೇನೆ ಎಂದು ತಿಳಿಸಿದರು. ಹಾಗೂ ಯಾವುದೇ ರೀತಿಯ ತಮ್ಮ ತಂದೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ, ನಾನು ಯಾರ ಮುಂದೆಯೂ ಡಿಸಿಎಂ ಮಗನೆಂದು ಹೇಳಿಲ್ಲಾ ಎಂದು ಆರೋಪಕ್ಕೆ ತೆರೆ ಎಳೆದರು. ಸದ್ಯ ಈ ಪ್ರಕರಣ ಹುನಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು. ಈ ಪ್ರಕರಣದ ಬಗ್ಗೆ ನಮ್ಮ ತಂದೆಯವರಾದ ಲಕ್ಷಣ ಸವದಿ ಅವರಿಗೆ ಮಾಹಿತಿ ನಿಡಿದ್ದೆನೆ ಎಂದು ಚಿದಾನಂದ ಸವದಿ ಹೇಳಿದರು.