ಕುಂದಾಣ ಗ್ರಾಮ ಪಂಚಾಯತಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ 

ಕುಂದಾಣ ಗ್ರಾಮ ಪಂಚಾಯತಿಯಲ್ಲಿ ವಾಲ್ಮೀಕಿ ಜಯಂತಿ  ಆಚರಣೆ

ದೇವನಹಳ್ಳಿ: ಮಹಾಕವಿ ವಾಲ್ಮೀಕಿಯನ್ನು ಜಯಂತಿ ಆಚರಿಸುವ ಮೂಲಕ ಸ್ಮರಿಸಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ತಿಳಿಸಿದರು.

 

ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಪಂಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಆಗಿದ್ದಾರೆ ಹಾಗೆಯೇ ರಾಮಾಯಣದಂತಹ ಮಹಾಕಾವ್ಯ ಬರೆದಿರುವ ವಾಲ್ಮೀಕಿ ನಮಗೆಲ್ಲರಿಗೂ ಆದರ್ಶಪ್ರಿಯರಾಗಿದ್ದಾರೆ. ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ ಜವಾಹರ್ ಲಾಲ್ ನೆಹರು ಅವರು ರಚಿಸಿರುವ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ ಜನರ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿರುವ ಮಹಾಕಾವ್ಯ ಅಂದರೆ ಅದು ರಾಮಾಯಣ ಎಂದು ಉಲ್ಲೇಖಿಸಿದ್ದಾರೆ. ಇವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಶಾಲಾ ಹಂತದಲ್ಲಿ ಮಕ್ಕಳಿಗೆ ಇಂತಹ ಮಹಾನಾಯಕರ ಪರಿಚಯವನ್ನು ಮಾಡಬೇಕು. ಮಕ್ಕಳು ಮಹಾನಾಯರನ್ನು ಸ್ಮರಿಸುವ ಮನೋಭಾವವನ್ನು ಪೋಷಕರು ತಮ್ಮ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

 

ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಸರಕಾರದ ಆದೇಶದಂತೆ ಸರಳವಾಗಿ ಆಚರಿಸಲಾಗುತ್ತಿದೆ. ದೇಶಾದ್ಯಂತ ವಾಲ್ಮೀಕಿ ದೇವಸ್ಥಾನಗಳಲ್ಲಿ ರಾಮಾಯಣದ ಶ್ಲೋಕಗಳನ್ನು ಪಠಿಸುವ ಮೂಲಕ ಮಹರ್ಷಿ ವಾಲ್ಮೀಕಿ ಕವಿಯನ್ನು ಪೂಜಿಸುತ್ತಾರೆ. ಗ್ರಾಪಂಯಲ್ಲಿ ಎಲ್ಲಾ ಸದಸ್ಯರನ್ನು ಒಳಗೊಂಡು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುತ್ತಿದೆ ಎಂದರು.

 

ಈ ವೇಳೆಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷೆ ವಿಜಯ.ಬಿ.ವಿ.ಸ್ವಾಮಿ, ಗ್ರಾಪಂ ಉಪಾಧ್ಯಕ್ಷೆ ವೀಣಾರಾಣಿ ನವೀನ್‌ಕುಮಾರ್, ಸದಸ್ಯರಾದ ಕ್ಯಾತೇಗೌಡ, ಕೊಂಡಪ್ಪ, ರಾಮಚಂದ್ರ, ನೇತ್ರನಾಗೇಶ್, ಮುಖಂಡರಾದ ಡಿ.ಎಂ.ದೇವರಾಜ್, ಬಿ.ವಿ.ಸ್ವಾಮಿ, ಪಿಡಿಒ ಚೈತ್ರಾ.ಸಿ, ಕಾರ್ಯದರ್ಶಿ ಅರುಣಗೋಪಿ, ಸಿಬ್ಬಂದಿ, ಗ್ರಾಮಸ್ಥರು ಇದ್ದರು.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!