ಮೈಸೂರಿನಲ್ಲಿ ಜಿಟಿಡಿ ವಿರುದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ವಾಗ್ದಾಳಿ

ಮೈಸೂರು

 

ನನಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ,

ಇವರ ಪಕ್ಷ ನಿಷ್ಠೆ ಎಷ್ಠೀದೆ ಅಂತ ಕಾರ್ಯಕರ್ತರಿಗೆ ಗೊತ್ತಾಗಲಿದೆ ಎಂದು

ಮೈಸೂರಿನಲ್ಲಿ ಜಿಟಿಡಿ ವಿರುದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ವಾಗ್ದಾಳಿ ನಡೆಸಿದರು..

 

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು

ಜಿಟಿಡಿ ಬಗ್ಗೆ ನಾವು ಏನನ್ನು ತೀರ್ಮಾನ ಮಾಡಿಲ್ಲ.

ಅವರೇ ಹೇಳಿದ್ದರು

ಪಕ್ಷ ಸಂಘಟನೆಗೆ ಸಮಯ ಕೊಟ್ಟಿರಲಿಲ್ಲ ಅಂತ.

ಈಗ ಸಚಿವ ಸ್ಥಾನ ಇಲ್ಲ ಅದಕ್ಕೆ ಕ್ಷೇತ್ರದ ಕೆಲಸ ಮಾಡ್ತಿದ್ದಾರೆ.

ಮಾಡಿಕೊಂಡು ಇರಲಿ.

ಅವರ ಬಗ್ಗೆ ನಾನೇನು ವ್ಯಂಗ್ಯ ಮಾಡ್ತಿಲ್ಲ.

ಮೈದಾನ ದೊಡ್ಡದಾಗಿದೆ ಯಾರಾದ್ರು ಕಾರ್ಯಕ್ರಮ ಮಾಡಬಹುದು.

ಆದ್ರೆ ಪ್ರತಿ ದಿನ ಹೂ ಮೂಡಿಸಲು ಆಗೋಲ್ಲ.

ಸಾ.ರಾ. ವಿರುದ್ದ ಸ್ಪರ್ಧಿಸಿದ್ದ ಅಭ್ಯರ್ಥಿ ಜೊತೆ ಮೆರವಣಿಗೆ ಹೋಗ್ತಾರೆ.

ಹಾಗಾದ್ರೆ ಇವರಿಗೆ ಪಕ್ಷ ನಿಷ್ಟೆ ಎಷ್ಠೀದೆ ಅಂತ ಕಾರ್ಯಕರ್ತರು ಮಾತನಾಡೋದಿಲ್ವಾ.

ಅವರದ್ದೆ ದೊಡ್ಡ ಶಕ್ತಿ ಇದೆ.

ಅವರು ಶಕ್ತಿ ಪ್ರದರ್ಶನ ಮಾಡಿಕೊಂಡು ಅವರ ದಾರಿಲಿ ಹೋಗಲಿ.

ನಾವು ನಮ್ಮ ದಾರಿಲಿ ಹೋಗ್ತಿವಿ.

 

*ಜಿಟಿಡಿಗೆ ಸಹಕಾರಿ ಕ್ಷೇತ್ರವನ್ನ ಪರಿಚಯಿಸಿದ್ದೆ ನಾನು.*

ಜೆಡಿಎಸ್‌ ಪಕ್ಷವನ್ನ ಬೆಳೆಸಿದ್ದೇನೆ ಎಂಬ ಜಿಟಿಡಿ ಹೇಳಿಕೆ ಹಿನ್ನೆಲೆ.

ಪಕ್ಷವನ್ನ ಬೆಳೆಸಿರೋರು ಕಾರ್ಯಕರ್ತರು.

ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ,ಅವರಿಗೆ ಡ್ಯಾಮೇಜ್.

2008 ರಲ್ಲಿ ಏನಾಯ್ತು, ಡ್ಯಾಮೇಜ್ ಆಗಿದ್ದು ನಮಗಲ್ಲ. ಡ್ಯಾಮೇಜ್ ಆಗಿದ್ದು ಯಾರಿಗೆ ಅಂತ ಇತಿಹಾಸವೇ ಹೇಳುತ್ತೆ ಎಂದು ಜಿಟಿಡಿಗೆ ತಿರುಗೇಟು ನೀಡಿದರು.

 

*ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ.*

ಜೆಡಿಎಸ್ ದೇವೆಗೌಡರ ಹಿಡಿತದಲ್ಲಿಲ್ಲ ಎಂಬ ಜಿಟಿಡಿ ಹೇಳಿಕೆ ಹಿನ್ನೆಲೆ.

ನಮ್ಮ‌ಕುಟುಂಬದ ಬಗ್ಗೆ ವರ್ಚೆ ಬೇಡ.

ನಮ್ಮ ತಂದೆಗೆ ಗೌರವ ಕೊಡೋದನ್ನ ಇವರು ಹೇಳಬೇಕಿಲ್ಲ.

*ನಾಲಿಗೆ ಮೇಲೆ ಹಿಡಿತ ಇರಲಿ,ನಿಮ್ಮಂತವರಿಂದಲೇ ಪಕ್ಷ ಹೀಗೆ ಆಗಿದೆ.*

*ಜಿಟಿಡಿಗೆ ಸಹಕಾರಿ ಕ್ಷೇತ್ರವನ್ನ ಪರಿಚಯಿಸಿದ್ದೆ ನಾನು.*

ದೇವೆಗೌಡ್ರು ಸಿಎಂ ಆಗಿದ್ದಾಗ ಇವರುಬಮನೆಯಲ್ಲಿ ಮಲಗಿದ್ರು.

ಕರೆದು ಸಹಕಾರ ಮಹಾಮಂಡಳ ಅಧ್ಯಕ್ಷ ಕೊಡಿಸಿದ್ದೆ ನಾನು.

ಬೆಳಿಗ್ಗೆ ಕಾಂಗ್ರೆಸ್, ಮದ್ಯಾಹ್ನ ಜೆಡಿಎಸ್, ರಾತ್ರಿ ಬಿಜೆಪಿಯವ್ರ ಮನೆಗಳಿಗೆ ಹೋಗ್ತಾರೆ.

ಎಲ್ಲರ ವಿಶ್ವಾಸ ಗಳಿಸುವ ಆತುರದಲ್ಲಿ ಇದ್ದಾರೆ.

ಎಲ್ಲೂ ಗಿಟ್ಟಲ್ಲ ಅಂದ್ರೆ ಕೊನೆಗೆ ನಮ್ಮತ್ರನೆ ಬರ್ತಾರೆ‌ಅಂತಾನೂ‌ ಗೊತ್ತು.

ಮತ್ತೆ ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ. *ನಾನು ಇರೋವರೆಗೂ ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ‌.*

ಇಲ್ಲಿಯವರೆಗೆ ಸಾಕಷ್ಟು ಮಾತುಕತೆ ನಡೆಸಿದ್ವು,ಇನ್ನ ನಡೆಯಲ್ಲ‌ ಎಂದು ತಿಳಿಸಿದರು ..

Leave a Reply

Your email address will not be published. Required fields are marked *

You cannot copy content of this page

error: Content is protected !!