ಬಸ್ ಹತ್ತುವ ವೇಳೆ ಗಾಜು ಒಡೆದ ಎಂದು ವಿದ್ಯಾರ್ಥಿಯನ್ನು ಅಮಾನುಷವಾಗಿ ನಡೆಸಿಕೊಂಡ ಕೆಎಸ್ಆರ್ಟಿಸಿ ಸಿಬ್ಬಂದಿ.
ತುಮಕೂರು_ವಿದ್ಯಾರ್ಥಿಯೊಬ್ಬ ಬಸ್ ಹತ್ತುವ ವೇಳೆ ಅಚಾನಕ್ಕಾಗಿ ಬಸ್ಸಿನ ಗಾಜಿಗೆ ಕೈಹಾಕಿದ ಪರಿಣಾಮ ಬಸ್ಸಿನ ಗಾಜು ಆಕಸ್ಮಿಕವಾಗಿ ಒಡೆದ ಕಾರಣ ಕೆಎಸ್ಆರ್ಟಿಸಿ ಸಿಬ್ಬಂದಿಗಳು ವಿದ್ಯಾರ್ಥಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ ಘಟನೆ ವರದಿಯಾಗಿದೆ.
ಸೋಮವಾರ ಸಂಜೆ ಐದು ಮೂವತ್ತರ ಸಮಯದಲ್ಲಿ ತುಮಕೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ವಿದ್ಯಾರ್ಥಿಯೊಬ್ಬ ಊರಿಗೆ ತೆರಳಲು ಸೀಟಿಗೆ ಬ್ಯಾಗನ್ನು ಹಾಕುವ ವೇಳೆ ಅಚಾನಕ್ಕಾಗಿ ಬಸ್ಸಿನ ಗಾಜಿಗೆ ಕೈಹಾಕಿ ಬಸ್ಸಿನ ಗಾಜು ಹೊಡೆದಿದ್ದು ಇದನ್ನು ಗಮನಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿಗಳು ವಿದ್ಯಾರ್ಥಿಯನ್ನು ಕಳ್ಳನಂತೆ ಹಿಡಿದು ಎಳೆದಾಡಿ. ಆವಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಎಡೆಮಾಡಿದೆ.
ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಲು ಮುಂದಾದ ಕೆಎಸ್ಆರ್ಟಿಸಿ ಸಿಬ್ಬಂದಿಗಳ ಕಾರ್ಯವೈಖರಿಗೆ ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಇನ್ನು ಹಳ್ಳಿ ಗಾಡಿಗೆ ತೆರಳುವ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ಅನ್ನು ಅವಲಂಬಿಸಿದ್ದಾರೆ ಆದರೆ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಬಸ್ ನಿಲ್ದಾಣ ಸಂಪೂರ್ಣ ಪ್ರಯಾಣಿಕರಿಂದ ತುಂಬಿ ಹೋಗಿರುತ್ತದೆ. ಇನ್ನು ಅಚಾನಕ್ಕಾಗಿ ನಡೆದ ಘಟನೆಯಿಂದ ಕೆಎಸ್ಆರ್ಟಿಸಿ ಸಿಬ್ಬಂದಿಗಳೇ ವಿದ್ಯಾರ್ಥಿ ಮೇಲೆ ಹೀಗೆ ಹಲ್ಲೆಗೆ ಮುಂದಾದರೆ ನಮಗೆ ರಕ್ಷಣೆ ನೀಡುವವರು ಯಾರು ಎಂದು ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಬಸ್ಸಿನ ಗಾಜು ಒಡೆದ ಪರಿಣಾಮ ವಿದ್ಯಾರ್ಥಿಗೆ ಏಳುನೂರು ರೂಪಾಯಿಗಳನ್ನು ನೀಡುವಂತೆ ಪಟ್ಟು ಹೇಳಿದ ಘಟನೆ ಸಹ ನಡೆದಿದೆ.
ವರದಿ _ವಿಜಯ ಭಾರತ ನ್ಯೂಸ್ಡೆಸ್ಕ್