ಸಿಪಿಎಲ್‌ನಲ್ಲಿ ಅಂಪೈರ್ ತೀರ್ಪನ್ನು ವಿಲಕ್ಷಣ ರೀತಿಯಲ್ಲಿ ಪ್ರತಿಭಟಿಸಿದ ಕೀರನ್ ಪೊಲಾರ್ಡ್

ಸಿಪಿಎಲ್‌ನಲ್ಲಿ ಅಂಪೈರ್ ತೀರ್ಪನ್ನು ವಿಲಕ್ಷಣ ರೀತಿಯಲ್ಲಿ ಪ್ರತಿಭಟಿಸಿದ ಕೀರನ್ ಪೊಲಾರ್ಡ್

ಬಾರ್ಬಡೋಸ್: ವೆಸ್ಟ್ ಇಂಡೀಸ್ ಹಾಗೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್, ಪವರ್-ಹಿಟ್ಟಿಂಗ್ ಹಾಗೂ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಅಂಪೈರ್‌ಗಳು ಮೈದಾನದೊಳಗೆ ನೀಡುವ ನಿರ್ಧಾರಗಳಿಂದ ಅತೃಪ್ತರಾದಾಗ ವ್ಯಕ್ತಪಡಿಸುವ ತಮ್ಮ ಚೇಷ್ಟೆಗಳಿಂದಲೂ ಕೂಡ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಅವರು ಎಂದಿಗೂ ತನ್ನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದರಿಂದ ಹಿಂಜರಿಯುವುದಿಲ್ಲ.

 

ಐಪಿಎಲ್‌ ಪಂದ್ಯದ ಸಮಯದಲ್ಲಿ ತಮ್ಮ ಬಾಯಿಗೆ ಟೇಪ್ ಹಾಕಿಕೊಳ್ಳುವ ಮೂಲಕ,ಬ್ಯಾಕ್ ವರ್ಡ್ ಪಾಯಿಂಟ್ ಹಾಗೂ ಮಿಡ್-ಆನ್‌ನಿಂದ ಜೋರಾಗಿ ಹರ್ಷೋದ್ಗಾರ ಮಾಡುವ ಮೂಲಕ ತನ್ನ ಮತ್ತು ತನ್ನ ತಂಡದ ವಿರುದ್ಧ ನಿರ್ಧಾರ ತೆಗೆದುಕೊಂಡಾಗ ಈ ರೀತಿ ಪ್ರತಿಭಟಿಸಿದ್ದರು. ಇದೀಗ, ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಪಂದ್ಯದಲ್ಲಿ ಅಂಪೈರ್ ತನ್ನ ತಂಡ ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ನಿರ್ಧಾರಕ್ಕೆ ಪೊಲಾರ್ಡ್ ಮತ್ತೊಂದು ಪ್ರತಿಭಟನೆಯ ಮಾರ್ಗವನ್ನು ಆರಿಸಿಕೊಂಡರು.

ಕಿಂಗ್ಸ್ ವೇಗದ ಬೌಲರ್ ವಹಾಬ್ ರಿಯಾಝ್ ವೈಡ್ ಲೈನ್ ಹೊರಗೆ ವೈಡ್ ಬಾಲ್ ಬೌಲ್ ಮಾಡಿದರು. ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಸ್ಟಂಪ್‌ನ ಲೈನ್ ನಲ್ಲಿ ನಿಂತಿದ್ದರೂ ಅಂಪೈರ್ ಅದಕ್ಕೆ ವೈಡ್ ನೀಡಲಿಲ್ಲ. ಸೀಫರ್ಟ್ ಅಂಪೈರ್ ನಿರ್ಧಾರಕ್ಕೆ ಅತೃಪ್ತಿ ಹೊರಹಾಕಿದರು ಹಾಗೂ ಏಕೆ ವೈಡ್ ನೀಡಲಿಲ್ಲ ಎಂದು ಅಂಪೈರ್ ಅನ್ನು ಪದೇ ಪದೇ ಕೇಳಿದರು.

 

ಆಗ ನಾನ್-ಸ್ಟ್ರೈಕರ್‌ನಲ್ಲಿದ್ದ ಪೊಲಾರ್ಡ್ ಸಹಜವಾಗಿ ಅಂಪೈರ್ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸುತ್ತಾ ಅಂಪೈರ್ ಅನ್ನು ದಿಟ್ಟಿಸಿ ನೋಡಿದರು. ಬಳಿಕ ಹತಾಶೆಯಿಂದ ಏನನ್ನೂ ಹೇಳದೆ ನಾನ್-ಸ್ಟ್ರೈಕರ್ ಆಗಿ ಗಾರ್ಡ್ ತೆಗೆದುಕೊಳ್ಳಲು ಮಿಡ್-ವಿಕೆಟ್ ಫೀಲ್ಡರ್ ನಿಲ್ಲುವ ಸ್ಥಾನಕ್ಕೆ ಹೋದರು.

Leave a Reply

Your email address will not be published. Required fields are marked *

You cannot copy content of this page

error: Content is protected !!