ಕೇಂದ್ರ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಿದ್ದು, ಕನ್ನಡ ಭಾಷೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಲೇಖಕ ವೀರಪ್ಪ ಮೊಯಿಲಿ ಅವರ ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಮಹಾಕಾವ್ಯ ಆಯ್ಕೆಯಾಗಿದೆ.
ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
? ‘ಬಾಲ ಸಾಹಿತ್ಯ ಪುರಸ್ಕಾರ’ಕ್ಕೆ ಹ.ಸ. ಬ್ಯಾಕೋಡ ಅವರ ‘ನಾನೂ ಅಂಬೇಡ್ಕರ್’ ಕಾದಂಬರಿ ಆಯ್ಕೆಯಾಗಿದೆ.
? ಅಕಾಡೆಮಿಯ ‘ಯುವ ಪುರಸ್ಕಾರ’ಕ್ಕೆ ಕೆ.ಎಸ್. ಮಹದೇವಸ್ವಾಮಿ ಭಾಜನಾರಾಗಿದ್ದಾರೆ.
– ಈ ಎರಡೂ ಪುರಸ್ಕಾರಗಳು ತಲಾ ₹50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
– ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಶಸ್ತಿಗೆ ತಲಾ ಒಂದು ಕೃತಿಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ
– ಸ್ಥಾಪನೆ :-
ಮಾರ್ಚ್ 12, 1954
– ಪ್ರಧಾನ ಕಚೇರಿ :-
ರವೀಂದ್ರ ಭವನ,ದೆಹಲಿ
– ಅಧ್ಯಕ್ಷರು :-
ಡಾ. ಚಂದ್ರಶೇಖರ ಕಂಬಾರ
☘ ಮೊದಲ ಪ್ರಶಸ್ತಿ :- 1955 – ಕುವೆಂಪು
ಶ್ರೀ ರಾಮಾಯಣ ದರ್ಶನಂ (ಮಹಾಕಾವ್ಯ)
☘ 2019ರ ಪ್ರಶಸ್ತಿ :- ವಿಜಯಮ್ಮ
ಕುದಿ ಎಸರು (ಆತ್ಮಕಥೆ)