ಬೆಂಗಳೂರು: ರಾಜ್ಯದಲ್ಲಿ ಕರೋನಾ ಕೇಕೆ ಸಾವಿನ ಹಾದಿ ಹಿಡಿದಿದ್ದು ಕರುನಾಡ ಸದ್ಯದ ಸ್ಥಿತಿ ಚಿಂತಾಜನಕವಾಗಿದೆ. ಅನೇಕ ಕಡೆ ಲಸಿಕೆ, ಬೆಡ್, ಆಕ್ಸಿಜೆನ್ ಸಿಗದೇ ನೂರಾರು ಜನ ಸಾವಿನ ಹಾದಿ ಹಿಡಿದಿದ್ದಾರೆ. ಎಲ್ಲಾ ಕಡೆ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.ಸರಕಾರಗಳು ಐಸಿಯುನಲ್ಲಿವೆ.
ಸರಕಾರದ ತಯಾರಿ ಇಲ್ಲದ ಯೋಜನೆ, ಅವ್ಯವಸ್ಥೆ ಈಗ ಜನರ ಪ್ರಾಣ ಹರಣಕ್ಕೆ ಕಾರಣವಾಗಿದೆ.
ಪ್ರತಿ ಜಿಲ್ಲೆ, ಪ್ರತಿ ತಾಲೂಕಲ್ಲೂ ಕರೋನಾ ಸಂಖ್ಯೆ ಹೆಚ್ಚಾಗುತ್ತಿದೆ. ಅಪಾರ ಸಾವು ನೋವಾಗುತ್ತಿದೆ.
ಬೆಂಗಳೂರಲ್ಲಿ ಹಾದಿ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದ ಲಿಂಬೆ ಹಣ್ಣಿನ ಹನಿ ಕುರಿತಾದ ಸುದ್ದಿ ಕೇಳಿ ಜಿಲ್ಲೆಯ ಶಿಕ್ಷಕರೊಬ್ಬರು ಮೂಗಿನೊಳಗೆ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡು ಇದೀಗ ಸಾವನ್ನಪ್ಪಿದ್ದಾರೆ.
ರಾಯಚೂರಿನ ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯ ಶಾಲಾ ಶಿಕ್ಷಕ ಬಸವರಾಜ್ ಮೃತ ದುರ್ದೈವಿ. ಮೂಗಿನಲ್ಲಿ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡರೆ ಕೊರೊನಾ ಬರುವುದಿಲ್ಲ ಎಂದುಕೊಂಡು ಬಸವರಾಜ್ ಅವರು ಬೆಳಗ್ಗೆ ಮೂಗಿಗೆ ನಿಂಬೆಹಣ್ಣಿನ ಹನಿ ಬಿಟ್ಟು ಕೊಂಡಿದ್ದರು. ನಂತರ ಕೆಲಸಮಯಗಳ ಬಳಿಕ ಬಸವರಾಜ್ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಕೂಡಲೇ ಸಂಬಂಧಿಕರು ಅಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ಮಾರ್ಗ ಮಧ್ಯದಲ್ಲೇ ಬಸವರಾಜ್ ಕೊನೆಯುಸಿರೆಳೆದಿದ್ದಾರೆ.
ವೈದ್ಯೆ ಬಲಿ!: ಮಂಗಳೂರಿನ ಹೊರವಲಯದ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಕೇರಳದ ತಲಶೇರಿ ಮೂಲದ ಡಾ.ಮಾಹಾಬಷೀರಾ ಕೊರೊನಾಗೆ ಬಲಿಯಾಗಿದ್ದಾರೆ. 8 ತಿಂಗಳ ಹಿಂದೆ ಮಂಗಳೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಶವಾಫೆರ್ ಮಹಮ್ಮದ್ ಅವರನ್ನು ಮದುವೆಯಾಗಿದ್ದ ಡಾ. ಮಹಾಬಷೀರಾ 6 ತಿಂಗಳ ಗರ್ಭಿಣಿಯಾಗಿದ್ದರು
ಕಳೆದ ಕೆಲ ದಿನಗಳ ಹಿಂದೆ ದಂಪತಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಹಾಬಷೀರಾಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ
3000 ಸೊಂಕಿತರು ನಾಪತ್ತೆ!: ರಾಜಧಾನಿಯಿಂದ ಬರೋಬ್ಬರಿ 2 ಸಾವಿರದಿಂದ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ.
ಸ್ವತಃ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದು, ಸುಮಾರು 2,000- 3,000 ಸೋಂಕಿತರು ನಾಪತ್ತೆಯಾಗಿದ್ದು, ಮನೆಗಳನ್ನು ತೊರೆದಿದ್ದಾರೆ. ಅಲ್ಲದೆ ಮೊಬೈಲ್‍ಗಳನ್ನು ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಪೊಲೀಸರ ಸಹಾಯದಿಂದ ಅಧಿಕಾರಿಗಳು ಇಂತಹವರನ್ನು ಟ್ರೇಸ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸುಮಾರು 2,000- 3,000 ಸೋಂಕಿತರು ಮನೆಗಳನ್ನು ತೊರೆದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸೋಂಕಿತರು ದಯವಿಟ್ಟು ಮೊಬೈಲ್ ಆಫ್ ಮಾಡಿಕೊಳ್ಳಬೇಡಿ, ಮನೆಗಳನ್ನು ತೊರೆಯಬೇಡಿ. ಸೋಂಕು ಪತ್ತೆಯಾದ ಆರಂಭದಲ್ಲಿ ಹೀಗೆ ನಾಪತ್ತೆಯಾದರೆ, ಐಸಿಯುಗೆ ಹೋಗುವ ಸ್ಥಿತಿ ಬರುತ್ತದೆ. ಆಗ ಮೊಬೈಲ್ ಆನ್ ಮಾಡಿಕೊಳ್ಳುತ್ತೀರಿ, ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿರುತ್ತದೆ. ಇದ್ದಕ್ಕಿದ್ದಂತೆ ಆಗಮಿಸಿ ಬೆಡ್ ಬೇಕು ಎಂದು ಕೇಳಿದಾಗ ಸಮಸ್ಯೆಯಾಗುತ್ತದೆ. ಹೀಗಾಗಿ ದಯವಿಟ್ಟು ಈ ರೀತಿ ಮಾಡಬೇಡಿ, ನಿಮ್ಮನ್ನು ಟ್ರ್ಯಾಕ್ ಮಾಡಲಿಕ್ಕೇ 10 ದಿನ ಬೇಕಾಗುತ್ತದೆ ಎಂದರು.ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಪರಿಸ್ಥಿತಿ ಗಂಭೀರವಾದ ಬಳಿಕ ಐಸಿಯು ಬೇಕು ಎಂದರೆ ಕಷ್ಟವಾಗುತ್ತದೆ. ಈಗಾಗಲೇ ಸುಮಾರು 2,000- 3,000 ಜನ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಾವು ವಿಳಾಸ ನೀಡಿದ್ದ ಮನೆಗಳನ್ನು ಸಹ ತೊರೆದಿದ್ದಾರೆ. ಅಂತಹವರನ್ನು ಪೊಲೀಸರು ಟ್ರೇಸ್ ಮಾಡುತ್ತಿದ್ದು, ಹೋರಾಟ ನಡೆಸುತ್ತಿದ್ದಾರೆ. ದಯವಿಟ್ಟು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಪತಿ ಸಾವು ಪತಿ ನೇಣಿಗೆ!: ಕೋವಿಡ್ 19 ಸೋಂಕಿನಿಂದ ಪತಿ ಸಾವನ್ನಪ್ಪಿದ ಸುದ್ದಿ ಕೇಳಿದ ಪತ್ನಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಬುಧವಾರ ನಡೆದಿದೆ.
ನೇಹಾ ಪವಾರ್ ಎಂಬವರೇ ನೇಣಿಗೆ ಶರಣಾದ ಮಹಿಳೆ. ಇಂದೋರ್ ನ ಬಿಜಲಾಪುರ ಎಂಬಲ್ಲಿನ ಮನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಮಗು ಸಾವು, ತಾಯಿ ಸಾವು!: ತುಮಕೂರಿನಲ್ಲಿ 19 ವರ್ಷದ ಮಗು ಸಾವನ್ನಪ್ಪಿದ್ದು, ಇದರಿಂದ ನೊಂದ ತಾಯಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾಳೆ. ತುಮಕೂರು ಜಿಲ್ಲೆಯಲ್ಲಿ 3 ಮಂದಿ ಶಿಕ್ಷಕರು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲೇ ಆತ್ಮಹತ್ಯೆ!: ಬೆಂಗಳೂರಿನಲ್ಲಿ ಕರೋನಾ ಸೊಂಕಿತ ವ್ಯಕ್ತಿಯೊಬ್ಬ ಜೀವನದಲ್ಲಿ ಬೇಸತ್ತು ವಿಕ್ಟೊರಿಯ ಆಸ್ಪತ್ರೆಯ 4ನೇ ಮಹದಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಈತ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಲ್ವರ ಕೊಲೆ!: ಕರೋನಾ ನಡುವೆ ಕಂಠಪೂರ್ತಿ ಕುಡಿದ ವ್ಯಕ್ತಿಯೋರ್ವ ಮನೆಮಂದಿಯ ಮೇಲೆ ಹಲ್ಲೆ ನಡೆಸಿ ನಾಲ್ವರನ್ನು ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ತನ್ನ ಗರ್ಭಿಣಿ ಪತ್ನಿ, ಇಬ್ಬರು ಸಣ್ಣ ಮಕ್ಕಳು ಮತ್ತು ಅತ್ತೆಯನ್ನು ಆರೋಪಿ ಕೊಲೆಗೈದಿದ್ದಾನೆ.