ಕನ್ನಡಿಗರಿಗೆ ಕಂಪನಿಯಲ್ಲಿ ಕಿರುಕುಳ ಆರೋಪ ,ಕನ್ನಡದ ಪಾಠ ಕಲಿಸಿದ ಕರ್ನಾಟಕ ರಕ್ಷಣಾ ಪಡೆ.
ತುಮಕೂರು _ತುಮಕೂರಿನ ಖಾಸಗಿ ಕಂಪನಿಯೊಂದರಲ್ಲಿ ಕನ್ನಡಿಗರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ಪಡೆಯ ಸದಸ್ಯರು ತುಮಕೂರಿನ ಕಾರ್ಖಾನೆಯೊಂದಕ್ಕೆ ದಿಢೀರ್ ದಾಳಿ ನಡೆಸಿ ಕಂಪನಿ ಮುಖ್ಯಸ್ಥನಿಗೆ ಕನ್ನಡದ ಪಾಠ ಕಲಿಸಿದ ಘಟನೆ ವರದಿಯಾಗಿದೆ.
ತುಮಕೂರಿನ ವಾಸಂತನರಸಾಪುರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವ ಖಾಸಗಿ ಕಂಪನಿಯೊಂದರಲ್ಲಿ ಕನ್ನಡಿಗರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ಪಡೆಯ ರಾಜ್ಯ ಅಧ್ಯಕ್ಷ ಬಾಬು ರವರ ನೇತೃತ್ವದಲ್ಲಿ ಖಾಸಗಿ ಕಂಪನಿಗೆ ದಾಳಿ ನಡೆಸಿ ಕಿರುಕುಳ ನೀಡುತ್ತಿದ್ದ ಕಂಪನಿಯ ಮುಖ್ಯಸ್ಥ ನೊಬ್ಬನಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಬುದ್ಧಿವಾದ ಜನರಲ್ ಮ್ಯಾನೇಜರ್ ರವರಿಗೆ ಬುದ್ದಿ ಹೇಳಿರುವ ಕನ್ನಡಪರ ಹೋರಾಟಗಾರರು ಹಿಂದಿ ಭಾಷೆ ಬರದ ಮುಖ್ಯಸ್ಥನಿಗೆ ಕನ್ನಡದ ಪಾಠ ಹೇಳಿ ಕನ್ನಡ ಕಲಿಸಿದ ಘಟನೆ ವರದಿಯಾಗಿದ್ದು.
ಇನ್ನು ಕಂಪನಿಯಲ್ಲಿ ಮ್ಯಾನೇಜರ್ ವಿಜಯ್ ಸಿಂಗ್ ಎನ್ನುವವರು ಕಂಪನಿಯಲ್ಲಿ ಕೆಲಸ ಮಾಡುವ ಕನ್ನಡಿಗರಿಗೆ ಹಬ್ಬಗಳಲ್ಲಿ ತಾರತಮ್ಯ, ರಾಜ್ಯದ ಚುನಾವಣೆಗಳಲ್ಲಿ ರಾಜ ನೀಡದೆ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಒತ್ತಡವಿರಬಹುದು, ಹಿಂದಿ ಭಾಷೆಯಲ್ಲಿ ಸಂವಹನ ಮಾಡುವಂತೆ ಒತ್ತಡ ಹೇರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಕಂಪನಿಯು ಕಾರ್ಮಿಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಕ್ಷಣಾ ಪಡೆಯ ರಾಜ್ಯಾಧ್ಯಕ್ಷ ಬಾಬು ಪ್ರತಿಕ್ರಿಯೆ ನೀಡಿದ್ದು ತುಮಕೂರಿನ ಖಾಸಗಿ ಕಂಪನಿಯಲ್ಲಿ ಕನ್ನಡಿಗರಿಗೆ
ಕನ್ನಡದಲ್ಲಿ ಮಾತನಾಡಬಾರದು ಹಿಂದಿಯಲ್ಲಿ ಸಂವಹನ ನಡೆಸಿ ಎಂದು ಒತ್ತಡ ಹೇರುವುದು, ಕಿರುಕುಳ ಸೇರಿದಂತೆ ಹಲವು ಆರೋಪಗಳು ಕಂಪನಿಯ ವಿರುದ್ಧ ಕೇಳಿಬಂದಿದ್ದು ಕೂಡಲೇ ತಮ್ಮ ಸಂಘದ ವತಿಯಿಂದ ಕಾರ್ಖಾನೆಗೆ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದ ಜನರಲ್ ಮ್ಯಾನೇಜರ್ ರವರಿಗೆ ತಿಳುವಳಿಕೆಯ ನೀಡಿ ಮುಂದೆ ಈ ರೀತಿ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದು ಈ ಬಗ್ಗೆ ಕಂಪನಿಯವರು ಸಹ ತಮ್ಮ ಮನವಿಗೆ ಸ್ಪಂದಿಸಿ ಮುಂದಿನ ದಿನದಲ್ಲಿ ಈ ರೀತಿ ಲೋಪವಾಗದಂತೆ ಎಚ್ಚರ ವಹಿಸುವುದಾಗಿ ಕಂಪನಿಯವರು ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವರದಿ _ಮಾರುತಿ ಪ್ರಸಾದ ತುಮಕೂರು