ತುಮಕೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು – ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ತುಮಕೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು – ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

 

ತುಮಕೂರು – ಈ ಬಾರಿಯ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ 11 ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

 

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಅವರ ಪರವಾಗಿ ಹೆಬ್ಬೂರು ಗ್ರಾಮದಲ್ಲಿ ಪ್ರಚಾರ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಬೃಹತ್ ರೋಡ್ ಷೋ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

 

 

 

 

 

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡುತ್ತಾ ಈ ಭಾಗದಲ್ಲಿ ಗೌರಿಶಂಕರ್ ಮಾಡಿರುವ ಅಭಿವೃದ್ಧಿಯ ಕಾರ್ಯಗಳೇ ಅವರಿಗೆ ಶ್ರೀ ರಕ್ಷೆ ಆಗಿ ಪರಿವರ್ತನೆಯಾಗಿ ಮತ್ತೊಮ್ಮೆ ಅವರು ಶಾಸಕರಾಗಿ ಗೆದ್ದು ಬರುವುದರಲ್ಲಿ ಸಂಶಯವಿಲ್ಲ ಈ ಭಾಗದ ಜನರು ಅವರನ್ನು ಅತ್ಯಾಧಿಕ ಅಂತರದಲ್ಲಿ ಗೆಲ್ಲಿಸಿಕೊಂಡು ಬರುವ ವಿಶ್ವಾಸ ನನಗಿದೆ ಎಂದರು.

 

 

 

 

 

ಮುಂದುವರೆದು ಮಾತನಾಡುತ್ತಾ ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕೂರದೆ ಜನರ ಕಷ್ಟ ನಷ್ಟಗಳಿಗೆ ಸ್ಪಂದನೆ ಮಾಡಿ ನಿರಂತರ ಜನರ ಸಂಪರ್ಕದಲ್ಲಿದ್ದರು ಅವರ ಸೇವೆಯ ಋಣ ತೀರಿಸುವ ಭಾಗ್ಯ ಇದೀಗ ನಿಮ್ಮ ಮುಂದಿದೆ ಎಂದರು ಜೊತೆಗೆ ಯಾವುದೇ ಆಮಿಷ ಮತ್ತು ಸುಳ್ಳು ವದಂತಿಗಳಿಗೆ ಜನ ಕಿವಿ ಕೊಡದೆ ಗೌರಿಶಂಕರ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದರು.

 

 

 

 

 

 

ಇನ್ನು ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಮಾತನಾಡುತ್ತಾ ನಾನು ಈ ಭಾಗದಲ್ಲಿ ಕೆಲಸ ಮಾಡುವ ಕೂಲಿ ಕೇಳುತ್ತಿದ್ದೇನೆ ದಯಮಾಡಿ ನನಗೆ ಮತದಾನ ಮಾಡುವುದರ ಮೂಲಕ ನಿಮ್ಮಗಳ ಸೇವೆ ಮಾಡುವ ಕೂಲಿ ನೀಡಿ ಎಂದು ಮಾತಾಯಾಚನೆ ಮಾಡಿದರು.

 

 

 

 

 

ಈ ಭಾಗದ ಮನೆ ಮಗನಾಗಿ ನಾನು ಮಾಡಿರುವ ಕೆಲಸಗಳು ನಿಮಗೆ ತೃಪ್ತಿ ತಂದಿದೆ ಎಂದು ಭಾವಿಸಿದ್ದೇನೆ ಹಾಗೊಂಡು ವೇಳೆ ನನ್ನಿಂದ ತಿಳಿಯದೇ ಏನಾದರೂ ತಪ್ಪು ಆಗಿದ್ದಾರೆ ನಿಮ್ಮ ಮನೆ ಮಗನನ್ನು ಕ್ಷಮಿಸುವಂತೆ ಕ್ಷಮಿಸಿ ಮತ್ತೊಮ್ಮೆ ನಿಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.

 

 

 

 

 

 

ಇತ್ತೀಚಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಷಫಿ ಅಹಮದ್ ಅವರು ಮಾತನಾಡುತ್ತಾ ಈ ಭಾಗದ ಎಲ್ಲಾ ನನ್ನ ಅಲ್ಪಸಂಖ್ಯಾತ ಮತ್ತು ಮುಸ್ಲಿಂ ಬಾಂಧವರು ಜೆಡಿಎಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ಗೌರಿಶಂಕರ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಅವರು ಏನೆಲ್ಲಾ ಸೇವೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅದನ್ನು ನೀವು ನೋಡಿದ್ದೀರಿ ಈ ಭಾರಿಯು ಅವರಿಗೆ ಅವಕಾಶ ಕೊಟ್ಟು ಮತ್ತಷ್ಟು ಶಕ್ತಿ ತುಂಬಿ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ನಾವು ಗೌರಿಶಂಕರ್ ಅವರಿಗೆ ಮತ ಹಾಕಿ ಗೆಲ್ಲಿಸಿಕೊಂಡು ಬರೋಣ ಎಂದು ಕರೆ ಕೊಟ್ಟರು.

 

 

 

 

 

 

 

ಬೃಹತ್ ರೋಡ್ ಷೋ ಹೆಗ್ಗೆರೆ ಮುಖ್ಯರಸ್ತೆ ಯಿಂದ ಹೊರಟು ಸುಮಾರು ಕಿಲೋಮೀಟರ್ ವರೆಗೂ ಜೈ ಘೋಷಣೆ ಹಾಕುತ್ತಾ ಕಾರ್ಯಕರ್ತರು ರಾಲಿ ಮಾಡಿ ಗೌರಿಶಂಕರ್ ಅವರಿಗೆ ನಾವಿದ್ದೇವೆ ಎಂದು ಸ್ವಯಂ ಪ್ರೇರಿತರಾಗಿ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದು ಬಹಳ ವಿಶೇಷವಾಗಿತ್ತು.

 

 

 

 

 

 

ರೋಡ್ ಷೋನಲ್ಲಿ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್, ಷಫಿ ಅಹಮದ್, ಹಲನೂರು ಲೇಪಕ್ಷ, ಜಿ ಪಾಲನೇತ್ರಯ್ಯ, ಹಿರೇಹಳ್ಳಿ ಮಹೇಶ್, ಪಾಪಣ್ಣ ಸ್ವಾಮಿ, ಬೆಳಗುಂಬ ವೆಂಕಟೇಶ್, ಹಲನೂರು ಅನಂತ್ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!