ಬಿಜೆಪಿ ಜತೆ ಮೈತ್ರಿ ವಿರೋಧಿಸಿ ಜೆಡಿಎಸ್ ಉಪಾಧ್ಯಕ್ಷ ಷಫಿಅಹ್ಮದ್ ರಾಜೀನಾಮೆ ಸಲ್ಲಿಕೆ.
ತುಮಕೂರು: ಬಿಜೆಪಿ ಜತೆಗಿನ ಮೈತ್ರಿ ವಿರೋಧಿಸಿ ಜೆಡಿಎಸ್‌ನ ರಾಜ್ಯ ಹಿರಿಯ ಉಪಾಧ್ಯಕ್ಷರೂ ಆದ ಮಾಜಿ ಶಾಸಕ ಎಸ್.ಷಪಿಅಹ್ಮದ್ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಷಫಿಅಹ್ಮದ್ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿo ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಪಕ್ಷದ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವಂತೆ ಜಿಲ್ಲೆಯಾದ್ಯಂತ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ರಾಜ ಜೆಡಿಎಸ್ ಪರ ಪ್ರಚಾರ ಆರಂಭಿಸಿದ್ದರು.
ಇನ್ನು ರಾಜ್ಯದ್ಯಂತ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಇದರಿಂದ ಹಲವು ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಬಂದಿದ್ದು ಈಗಾಗಲೇ ಹಲವು ಅಲ್ಪಸಂಖ್ಯಾತರ ಸಮುದಾಯದ ಮುಖಂಡರುಗಳು ಕಾಂಗ್ರೆಸ್ ಕದತೊಟ್ಟಲು ಮುಂದಾಗಿದ್ದು ಗುಟ್ಟಾಗೇನು ಉಳಿದಿಲ್ಲ .
ಇನ್ನು ಜೆಡಿಎಸ್ ಪಕ್ಷದ ಮೈತ್ರಿ ಬಿಜೆಪಿಗೆ ವರವಾದರೆ ಜೆಡಿಎಸ್ ಪಾಲಿಗೆ ಸ್ವಲ್ಪ ಕಹಿಯಾದಂತೆ ಪರಿಣಮಿಸಿದ್ದು ಅಲ್ಪಸಂಖ್ಯಾತರ ಸಮುದಾಯವನ್ನು ಓಲೈಕೆ ಮಾಡುವುದಾದರೂ ಹೇಗೆ ಎನ್ನುವ ಚಿಂತೆ ಜೆಡಿಎಸ್ ವರಿಷ್ಠರಿಗೆ ಕಾಣತೊಡಗಿದ್ದು ಇದರ ಬೆನ್ನಲ್ಲೇ ತುಮಕೂರಿನ ಹಿರಿಯ ರಾಜಕಾರಣಿ ಶಫಿ ಅಹಮದ್ ರವರು ಜೆಡಿಎಸ್ ಪಕ್ಷವನ್ನು ತೊರೆದಿದ್ದು ಅವರ ಮುಂದಿನ ನಡೆ ಏನು ಎಂಬುದೇ ನಿಗೂಢವಾಗಿದೆ.
ಇನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಕದವನ್ನು ಕಟ್ಟಲಿದ್ದಾರೆಯೇ…? ಅಥವಾ ರಾಜಕೀಯ ನಿವೃತ್ತಿ ಘೋಷಿಸಲಿದ್ದಾರಾ ಎನ್ನುವ ಹಲವು ರಾಜಕೀಯ ಚರ್ಚೆಗಳು ಅವರ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಮೇಲೆ ಹಲವು ಪ್ರಶ್ನೆಗಳು ಹುಟ್ಟು ಹಾಕಿದ್ದು ಇದಕ್ಕೆ ಸಂಬಂಧಿಸಿದಂತೆ ಶಫಿ ಅಹಮದ್ ರವರು ಯಾವ ನಿರ್ಧಾರ ಕೈಗೊಳ್ಳುವರು ಎಂಬುದನ್ನ ಕಾದು ನೋಡಬೇಕಿದೆ.