ಮಾಜಿ ಶಾಸಕ ಸುರೇಶ್‌ಗೌಡರನ್ನು ಕ್ಷೇತ್ರದಿಂದ ಬಹಿಷ್ಕರಿಸುವ ಹೋರಾಟಕ್ಕೆ ಮುಂದಾಗುತ್ತೇವೆಂದು ಎಚ್ಚರಿಕೆ ನೀಡಿದ : ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್

ಮಾಜಿ ಶಾಸಕ ಸುರೇಶ್‌ಗೌಡರನ್ನು ಕ್ಷೇತ್ರದಿಂದ ಬಹಿಷ್ಕರಿಸುವ ಹೋರಾಟಕ್ಕೆ ಮುಂದಾಗುತ್ತೇವೆಂದು ಎಚ್ಚರಿಕೆ ನೀಡಿದ : ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್.

 

 

ತುಮಕೂರು : ತುಮಕೂರು ತಾಲ್ಲೂಕು, ಡಿ.ಕೊರಟಗೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಾರಮ್ಮ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜೆಡಿಎಸ್ ಕಾರ್ಯಕರ್ತರು ತಮ್ಮ ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳಿರುವ ಫ್ಲೆಕ್ಸ್ ಬ್ಯಾನರ್‌ಗಳನ್ನು ಅಳವಡಿಸಲು ಮುಂದಾಗಿದ್ದು, ಆ ಸಮಯದಲ್ಲಿ ಮಸ್ಕಲ್ ಪಂಚಾಯಿತಿ ಅಧ್ಯಕ್ಷರ ಮನೆ ಮುಂದೆ ಫ್ಲೆಕ್ಸ್ ಬ್ಯಾನರ್ ಹಾಕಲು ಹೋಗಿರುತ್ತಾರೆ, ಆದರೆ ಅದಕ್ಕೆ ಅವರು ಅಡ್ಡಿಪಡಿಸಿದ ಕಾರಣ, ಅವರ ಮಾತಿಗೆ ಮನ್ನಣೆ ನೀಡಿ ಬೇರೆ ಕಡೆ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಿರುತ್ತಾರೆ ಎಂದು ಹಿರೇಹಳ್ಳಿ ಮಹೇಶ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಫ್ಲೆಕ್ಸ್ ವಿಚಾರವಾಗಿ ಕ್ಷುಲಕ್ಕ ಕಾರಣಗಳನ್ನು ಒಡ್ಡಿ ಜೆಡಿಎಸ್ ಕಾರ್ಯಕರ್ತರ ಮೇಲೆ ಅವಾಚ್ಯ ಶಬ್ಧಗಳನ್ನು ನಿಂದಿಸಿ, ಜಗಳಕ್ಕೆ ಮುಂದಾಗುತ್ತಾರೆ, ಈ ವಿಚಾರವನ್ನು ತಿಳಿದು ಜೆಡಿಎಸ್ ಮುಖಂಡರುಗಳು ಸ್ಥಳಕ್ಕೆ ತೆರಳಿ ಜಗಳವನ್ನು ನಿಲ್ಲಿಸಿರುತ್ತಾರೆ. ಈ ವಿಚಾರವನ್ನೇ ದೊಡ್ಡದಾಗಿ ಮಾಡಿ, ಜೆಡಿಎಸ್ ಪಕ್ಷದ ಮುಖಂಡರಾದ ಜಿ.ಪಾಲನೇತ್ರಯ್ಯರವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ, ಅವರ ಮೇಲೆ ವಿನಾಃಕಾರಣ ಅಪಪ್ರಚಾರ ಮಾಡುವುದಲ್ಲದೇ ಅವರ ಏಳ್ಗೆಯನ್ನು ಸಹಿಸದ ವ್ಯಕ್ತಿಗಳು ಈ ರೀತಿಯಾಗಿ ಮಾಡಿದ್ದಾರೆಂದು ನೇರ ಆರೋಪ ಮಾಡಿದರು.

 

ಇನ್ನು ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದ ವೀರಶೈವ ಮುಖಂಡರುಗಳು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಸಮುದಾಯ ಒಗ್ಗಾಟ್ಟಾಗಿದ್ದರೂ ಸಹ ಆ ಒಗ್ಗಟ್ಟನ್ನು ಹೊಡೆಯುವ ಸಲುವಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರವನ್ನು ನಡೆಸಿರುವುದಲ್ಲದೇ, ಈ ಹಿಂದೆ ೨೦೧೮ರ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಾಜಿ ಶಾಸಕರಾದ ಸುರೇಶ್ ಗೌಡರವರು ಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಸ್ವಾಮಿಗಳ ಬಗ್ಗೆ ಹಗುರವಾಗಿ ಮಾತನಾಡಿದರ ಪ್ರಯುಕ್ತ ಇಂದು ಅವರು ಮನೆಯಲ್ಲಿ ಕೂರವಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ, ಅದನ್ನ ಇನ್ನೂ ಗ್ರಾಮಾಂತರ ಕ್ಷೇತ್ರದ ಮತದಾರರು ಮರೆತಿಲ್ಲ, ಇದನ್ನು ಅರಿತು ನಡಿಯಬೇಕಾದವರು, ಸಮುದಾಯವನ್ನು ಹೊಡೆಯುವ ಹುನ್ನಾರಕ್ಕೆ ಬೀಳಬಾರದಾಗಿತ್ತು, ಆದರೆ ಆ ಕೆಲಸವನ್ನೇ ಅವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆ ಕಾರ್ಯೋನ್ಮುಖರಾಗಿರುವ ಸುರೇಶ್ ಗೌಡರವರು ಹಾಲಿ ಶಾಸಕ ಗೌರಿಶಂಕರ್‌ರವರು ವೀರಶೈವ ಸಮುದಾಯ ವಿರೋಧಿ ಎಂದು ಬಿಂಬಿಸತೊಡಗಿದ್ದಾರೆ. ಆದರೆ ವಾಸ್ತವತೆಯಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿರುವ ಹಲವಾರು ಗ್ರಾಮಗಳಲ್ಲಿನ ವೀರಶೈವ ಸಮುದಾಯದವರು ಗೌರಿಶಂಕರ್‌ರವರ ಬೆಂಬಲಕ್ಕೆ ನಿಂತಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಶೇ. ೮೦ ರಷ್ಟು ಗ್ರಾಮಾಂತರ ಭಾಗದ ವೀರಶೈವ ಸಮುದಾಯದವರು ಗೌರಿಶಂಕರ್‌ರವರನ್ನು ಬೆಂಬಲಿಸುತ್ತಿದ್ದಾರೆ ಎಂಬುದು ವಾಸ್ತವ ಸಂಗತಿಯಾಗಿದೆ.

 

ಇದನ್ನು ಅರಗಿಸಿಕೊಳ್ಳಲಾಗದ ಸುರೇಶ್ ಗೌಡರವರು ಈ ರೀತಿಯಾದ ಕೋಮು ಪ್ರಚೋದಿತ ಹೇಳಿಕೆಗಳನ್ನು ತಮ್ಮ ಬೆಂಬಲಿಗರೊಂದಿಗೆ ನೀಡುತ್ತಿರುವುದು ತುಂಬಾ ಶೋಚನೀಯ ಸಂಗತಿ, ಗೌರಿಶಂಕರ್‌ರವರು ಕೋವಿಡ್ ಸಂದರ್ಭದಲ್ಲಿ ಗ್ರಾಮಾಂತರ ಭಾಗದ ಜನತೆಗೆ ಹಲವಾರು ರೀತಿಯಲ್ಲಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದರು, ಆ ಸಮಯದಲ್ಲಿ ಜನರ ಕೈಗೆ ಸಿಗದೇ ಇದ್ದಂತಹ ಸುರೇಶ್ ಗೌಡರವರು ಚುನಾವಣೆ ಸಮೀಪಿಸುತ್ತಿದ್ದಂತೆ ಈ ರೀತಿಯಾದ ಅಪ್ರಚಾರ ಮಾಡಿ ಜನರನ್ನು ಧಿಕ್ಕು ತಪ್ಪಿಸುವ ಷಡ್ಯಂತ್ರ ರೂಪಿಸಿದ್ದಾರೆ, ಇದಕ್ಕೆ ನಮ್ಮ ಗ್ರಾಮಾಂತರ ಜನರು ಮನ್ನಣೆ ನೀಡುವುದಿಲ್ಲವೆಂಬ ಸಂಪೂರ್ಣ ಭರವಸೆ ನಮಗಿದೆಂದು ತಿಳಿಸಿದರು.

 

ಇನ್ನು ಮುಂದುವರೆದಿಗೆ ಕೆಲವರು ಜಿ.ಪಾಲನೇತ್ರಯ್ಯರವರು ಯಾರೆಂದು ಗೊತ್ತಿಲ್ಲವೆಂದು ಕೇಳಿದರೋ ಆ ವ್ಯಕ್ತಿಗಳಿಗೆ ಪಾಲನೇತ್ರಯ್ಯರವರ ಮನೆಗೆ ಸಹಾಯಬೇಡಲು ಹೋಗಿರುವುದು ಅಷ್ಟೇ ಸತ್ಯ. ಏಕೆಂದರೆ ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿ.ಪಾಲನೇತ್ರಯ್ಯರವರು ತಮ್ಮ ವೈಯುಕ್ತಿಕ ಖರ್ಚಿನಿಂದ ಹಲವಾರು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ, ಜೀರ್ಣೋದ್ಧೋರಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ, ತಮ್ಮ ಸ್ವಂತ ಖರ್ಚಿನಿಂದ ಹೈಟೆಕ್ ೧೫ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ, ಇನ್ನೂ ಗೂಳೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜೆಡಿಎಸ್ ಮುಖಂಡರಾಗಿಯೇ ಇಷ್ಟು ಸಾಮಾಜಿಕ ಕೆಲಸಗಳನ್ನು ನಿರ್ವಹಿಸುತ್ತಿರುವ ಏಕೈಕ ವ್ಯಕ್ತಿಯಾಗಿರುವ ಪಾಲನೇತ್ರಯ್ಯರವರ ಮೇಲೆ ಅವರ ಸಹಾಯ ಪಡೆದಂತಹ ವ್ಯಕ್ತಿಗಳೇ ಈ ರೀತಿಯಾಗಿ ಆರೋಪಿಸುತ್ತಿರುವುದರ ನೈತಿಕತೆಯನ್ನು ಅವರೇ ಅರ್ಥ ಮಾಡಿಕೊಳ್ಳಬೇಕು, ಏಕೆಂದರೆ ಪಾಲನೇತ್ರಯ್ಯರವರು ಒಬ್ಬ ಸಮಾಜ ಸೇವಕ, ಪಕ್ಷದ ಹಿರಿಯ ಮುಖಂಡ, ಅದರ ಅವರ ಮೇಲೆ ಆರೋಪಿಸುತ್ತಿರುವ ವ್ಯಕ್ತಿಗಳು ಜಿಲ್ಲಾ ಪಂಚಾಯತ್ ಸದಸ್ಯರು, ಇಂತಹ ಸದಸ್ಯರು ಮಾಡದಂತಹ ಕೆಲಸ ಕಾರ್ಯಗಳನ್ನು ಒಬ್ಬ ಸಮಾಜ ಸೇವಕ ಮಾಡುತ್ತಿರುವುದಕ್ಕೆ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಇವರ ಮೇಲೆ ಈ ರೀತಿಯಾಗಿ ಅಪಪ್ರಚಾರ ಮಾಡುತ್ತಿದ್ದಾರೆಂದು ಹಿರೇಹಳ್ಳಿ ಮಹೇಶ್‌ರವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

 

ಫ್ಲೆಕ್ಸ್ ವಿಚಾರವನ್ನು ಮುಂದಿಟ್ಟುಕೊಂಡು ಅದನ್ನು ಕೋಮುಗಲಭೆಗೆ ತಿರುಗಿಸುವ ಷಡ್ಯಂತ್ರವನ್ನು ಸುರೇಶ್‌ಗೌಡರವರು ಅವರ ಬೆಂಬಲಿಗರೊಂದಿಗೆ ಮಾಡಿಸುತ್ತಿರುವುದು ಅವರಿಗೆ ಶೋಭೆತರತಕ್ಕದ್ದಲ್ಲ, ಇನ್ನಾದರೂ ಅವರು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅವರನ್ನು ಕ್ಷೇತ್ರದಿಂದಲೇ ಬಹಿಷ್ಕರಿಸುವ ಉಗ್ರ ಹೋರಾಟಕ್ಕೆ ನಾವುಗಳು ಮುಂದಾಗುತ್ತೇವೆಂದು ಸುರೇಶ್‌ಗೌಡರವರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

 

ಸುದ್ಧಿಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಜಿ.ಪಾಲನೇತ್ರಯ್ಯ, ಸುವರ್ಣಗಿರಿ ಕುಮಾರ್, ರಾಮಚಂದ್ರಯ್ಯ, ವೆಂಕಟೇಶ್ (ಬೆಳಗುಂಬ) ಹಾಗೂ ಇನ್ನಿತರೆ ಜೆಡಿಎಸ್ ಗ್ರಾಮಾಂತರ ವಿಭಾಗದ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!