ಜಾಂಬವ ಯುವ ಸೇನಾ (ರಿ)ಗೋಕರೆ ಶಾಖೆ ಉದ್ಘಾಟನೆ
ಸ್ವಾಭಿಮಾನ, ಮತ್ತು ಹೋರಾಟ ನಮ್ಮ ಜಾಂಭವ ಯುವ ಸೇನೆಯ ಮುಖ್ಯ ಉದ್ದೇಶವಾಗಿದ್ದು ಶತ ಶತಮಾನಗಳ ಅಸ್ಪೃಶ್ಯತೆ ಒಳಪಟ್ಟ ಸಮಾಜವಾಗಿದ್ದು ಪೂರ್ವಜರು ಚಕ್ರವರ್ತಿಗಳಾಗಿ ಸಾಮ್ರಾಟರಾಗಿ, ರಾಜರಾಗಿ ರಾಜ್ಯಭಾರ ನಡೆಸಿದ ಇತಿಹಾಸವಿದೆ ಎಂದು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯ ಗೋಕರೆ ಗ್ರಾಮದಲ್ಲಿ ಜಾಂಭವ ಯುವ ಸೇನೆ ರಾಜ್ಯ ಸಮಿತಿ ವತಿಯಿಂದ ನೂತನ ಶಾಖೆ ಉದ್ಘಾಟನೆ ನೆರವೇರಿಸಿ ಮಾತನಾಡಿ ನಮ್ಮ ಮೀಸಲಾತಿಯಲ್ಲಿ ಸರ್ಕಾರ ಶೇಖಡಾವಾರು ಹೆಚ್ಚುಮಾಡಿಲ್ಲಾ ಆದ್ರೆ ನೂರಾರು ಜಾತಿಯನ್ನು ಸೇರಿಸುತ್ತಿದ್ದಾರೆ, ರಾಜಕೀಯದಲ್ಲಿ, ಸರ್ಕಾರಿ ನೌಕರಿಯಲ್ಲಿ, ಶಿಕ್ಷಣದಲ್ಲಿ ಸಮಪಾಲು ಸಮಾನತೆ ಬೇಕು ನಮ್ಮ ಜಾತಿ, ಸಮುದಾಯದ ಏಳ್ಗೆಗೆ ದಾಸನಾಗಲೂ ಸಿದ್ದ ತುಳಿತಕ್ಕೆ ಒಳಪಡಿಸಿದರೆ ಸಂಘಟನೆ ಮೂಲಕ ಹೋರಾಟಕ್ಕೆ ಸುದ್ದ ಹಾಗೂ ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ನಮ್ಮ ಗ್ರಾಮದಲ್ಲಿ ಯಾವುದೇ ಸಂಘಟನೆ ಇರಲಿಲ್ಲಾ ಇಂದು ಜಾಂಭವ ಯುವ ಸೇನೆ ಶಾಖೆ ಉದ್ಘಾಟನೆ ಮಾಡುತ್ತಿದ್ದು ಇದರಿಂದ ಎಲ್ಲಾ ಸಮುದಾಯಕ್ಕೂ ನ್ಯಾಯದೊರಕಿಸುವ ಕೆಲಸ ಮಾಡಬೇಕು ಅಂಬೇಡ್ಕರ್ ರವರ ಅನುಯಾಯಿಗಳಾಗಿ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು, ನಮ್ಮ ಸಮುದಾಯದಲ್ಲಿನ ಸೌಲಭ್ಯಗಳನ್ನು ಪಡೆಯಲು ಅನ್ಯ ಸಮುದಾಯದವರು ಸೇರಿಸಿ ಎಂದು ಸರ್ಜಾರದ ಮುಂದೆ ಮಂಡಿಯೂರಿದ್ದಾರೆ ಆದ್ದರಿಂದ ಎಲ್ಲರೂ ಒಗ್ಗಟ್ಟು ಪ್ರದರ್ಶನ ತೋರಬೇಕೆಂದು ಎಂದು ಯಲಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸೊಣ್ಣೇಗೌಡ ತಿಳಿಸಿದರು.
ಗ್ರಾಮದ ಮುತ್ತೈದೆಯರು ಪೂರ್ಣಕುಂಭ ಕಳಸದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸೇನೆಯ ಶಾಖೆಯ ಫಲಕವನ್ನು ಉದ್ಘಾಟಿಸಿದರು. ಗ್ರಾಮದ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಸಮುದಾಯದ ಹಿರಿಯರಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯೂರಿನ ಆದಿಜಾಂಬವ ಮಠದ ಅಧ್ಯಕ್ಷ ಶ್ರೀ ಷಡಕ್ಷರಿಮುನಿ ದೇಶೀಕೇಂದ್ರ ಸ್ವಾಮೀಜಿಯವರು ಆರ್ಶೀವಚನ ನೀಡಿದರು, ಸೇನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಮಳಿಗಾರ್, ಜಿಲ್ಲಾ ಪಂಚಾಯತಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ, ಮಾದಿಗ ದಂಡೋರ ಪ್ರಚಾರ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ,
ಯಲಿಯೂರು ಗ್ರಾಮ ಪಂಚಾಯತಿ ಸದಸ್ಯೆ ಪ್ರಿಯಾಂಕ ಮೋಹನ್, ಗೋಕರೆ ಗ್ರಾಮ ಶಾಖೆಯ ಅಧ್ಯಕ್ಷ ವಿಜಯ್ ಕುಮಾರ್, ಪದಾಧಿಕಾರಿಗಳು ಮುಖಂಡರು ಹಾಜರಿದ್ದರು
ಗುರುಮೂರ್ತಿ ಬೂದಿಗೆರೆ
8861100990