ಜೆಡಿಎಸ್ ಮುಖಂಡ ಪಾಲಣ್ಣ ಮನೆ ಮೇಲೆ ಐಟಿ ರೈಡ್. ಐಟಿ ರೇಡ್ ರಾಜಕೀಯ ಪ್ರೇರಿತ ಪಾಲಣ್ಣ
ತುಮಕೂರು – ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ರಾಜಕಾರಣಿಗಳ ಮನೆ ಬಾಗಿಲು ತಟ್ಟುತ್ತಿದ್ದು ಇದರ ಬಿಸಿ ತುಮಕೂರಿಗು ಸಹ ತಟ್ಟಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಮುಖಂಡ ಪಾಲನೆತ್ರಯ್ಯ ಅವರಿಗೂ ಸಹ ಐಟಿ ರೈಡ್ ಬಿಸಿ ತಟ್ಟಿದ್ದು ಶುಕ್ರವಾರ ಸಂಜೆ 4:30ಕ್ಕೆ ತುಮಕೂರು ತಾಲೂಕಿನ ಬೈರಸಂದ್ರ ಗ್ರಾಮದ ಪಾಲಣ್ಣ ನಿವಾಸಕ್ಕೆ ಆಗಮಿಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಅಬಕಾರಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಪಾಲಣ್ಣ ರವರ ಮನೆಯಲ್ಲಿ ತೀರ ಶೋಧ ನಡೆಸಿದ್ದಾರೆ.
ಸಂಜೆ 4:30 ರಿಂದ ಮಧ್ಯರಾತ್ರಿ ಎರಡು ಮೂವತ್ತರ ವರೆಗೂ ನಡೆದಿರುವ ಐಟಿ ಇಲಾಖೆ ಶೋಧ ಕಾರ್ಯ ನಡೆಸಿದ್ದು ಮನೆಯಲ್ಲಿ ಯಾವುದೇ ನಗದು ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಮುಖಂಡ ಪಾಲನೆತ್ರಯ್ಯ ಇನ್ನು ತಮ್ಮ ಮನೆ ಮೇಲೆ ಐಟಿ ದಾಳಿ ಆಗಿರುವುದು ಸತ್ಯ ಇನ್ನೂ ಚುನಾವಣೆ ಹೊತ್ತಲ್ಲಿ ಐಟಿ ದಾಳಿ ನಡೆದಿರುವುದು ಆಶ್ಚರ್ಯ ತಂದಿದ್ದು ತಮ್ಮ ಮನೆಯಲ್ಲಿ ಯಾವುದೇ ಹಣ ವಸ್ತು ಜ್ಯಪ್ತಿಯಾಗಿಲ್ಲ ಮನೆಯಲ್ಲ ಶೋಧ ನಡೆಸಿ ಅಧಿಕಾರಿಗಳು ತೆರಳಿದ್ದಾರೆ .
ಇನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಭದ್ರವಾಗಿದ್ದು ಜೆಡಿಎಸ್ ಕೋಟೆಯನ್ನು ಚಿದ್ರ ಮಾಡುವ ಪ್ರಯತ್ನವನ್ನು ಕೆಲ ರಾಜಕಾರಣಿಗಳು ಮಾಡುತ್ತಿದ್ದು ಐ ಟಿ ದಾಳಿ ಹಿಂದೆ ಬಿಜೆಪಿ ಪಕ್ಷದ ಮುಖಂಡರ ಕೈವಾಡ ಇದೆ ಇನ್ನು ವಿನಾಕಾರಣ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ವೀರಶೈವ ಮುಖಂಡರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿದ್ದಾರೆ ಆದರೆ ಇಂತಹ ಐಟಿ ದಾಳಿ ಬಗ್ಗೆ ನಾವು ಧೃತಿಗೆಡುವುದಿಲ್ಲ ಇನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಭದ್ರವಾಗಿದೆ ಈ ಬಾರಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ ಗೌರಿಶಂಕರ್ ಅವರು ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವುದು ಶತಸಿದ್ಧ ಹಾಗಾಗಿ ಅವರ ಗೆಲುವನ್ನ ಸಹಿಸಿಕೊಳ್ಳದವರು ಐಟಿ ದಾಳಿಯನ್ನು ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.