ಜೂನ್ 7 ರ ವರೆಗೂ ಇರುವ ಲಾಕ್ಡೌನ್ ಮುಗಿಯಲ್ಲ. ಸದ್ಯಕ್ಕೆ ಲಾಕ್ಡೌನ್ ನಿಂದ ಮುಕ್ತಿ ಇಲ್ಲ. ಎರಡು ವಾರಗಳ ನಂತರ ರಾಜ್ಯದ ಜನರ ಮನೆ ವಾಸ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಕೊರೋನಾ ತಡೆಗೆ ಲಾಕ್ಡೌನ್ ಜಾರಿ ಮಾಡಿದ ನಂತರ ಕೊರೋನಾ ಸಂಕು ಇಳಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಮೇ 24 ರಿಂದ ಜೂನ್ 7 ರವರೆಗೆ ಎರಡನೇ ಹಂತದ ಲಾಕ್ಡೌನ್ ಜಾರಿ ಮಾಡಲಾಗಿದೆ. ರಾಜ್ಯಾದ್ಯಂತ ಕಠಿಣ ನಿರ್ಬಂಧ ಜಾರಿಗೊಳಿಸಿದೆ. ಜೂನ್ 7 ರ ನಂತರವೂ ಲಾಕ್ ಡೌನ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಂತರವೂ ಲಾಕ್ಡೌನ್ ಮುಂದುವರೆಸುವ ಬಗ್ಗೆ ಸಚಿವರು, ಅಧಿಕಾರಿಗಳು ಸಿಎಂ ನೇತೃತ್ವದ ಸಭೆಯಲ್ಲಿ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಜೂನ್ 5 ರಂದು ಸಭೆ ನಡೆಸಿ ಇನ್ನಷ್ಟು ದಿನ ಲಾಕ್ಡೌನ್ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2000, ಬೆಂಗಳೂರಿನಲ್ಲಿ 500 ಕ್ಕೆ ಇಳಿಯುವ ಟಾರ್ಗೆಟ್ ರೀಚ್ ಆಗುವವರೆಗೂ ಲಾಕ್ ಡೌನ್ ಮಾಡಲಾಗುವುದು. ಅನ್ ಲಾಕ್ ಪ್ರಕ್ರಿಯೆ ಆರಂಭವಾದರೂ, ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆ, ಕೈಗಾರಿಕೆಗಳ ಓಪನ್ ಬೇಡ. ಅಲ್ಲದೇ, ಮತ್ತಷ್ಟು ಕಠಿಣ ನಿರ್ಬಂಧ ಜಾರಿ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.