ಸಾರ್ವಜನಿಕ ಸ್ಥಳಗಳು ಮಾದಕ ವ್ಯಸನಿಗಳ ತಂಗುದಾಣವೇ…..?

 

ಸಾರ್ವಜನಿಕರ ಬಳಕೆಗೆ ಇರಬೇಕಾದ ಸಾರ್ವಜನಿಕ ಸ್ಥಳಗಳು ಎಂದು ಮಾದಕ ವ್ಯಸನಿಗಳ ಕಾರಣವಾಗುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುವಂದೆ ಕಾರಣ ಇಷ್ಟೇ.

 

ತುಮಕೂರಿನ ಹೃದಯಭಾಗದಲ್ಲಿರುವ ಟೌನ್ ಹಾಲ್ ಸರ್ಕಲ್ ನಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣವಾಗಿರುವ ಸ್ಕೈವಾಕರ್ ಸಾರ್ವಜನಿಕರ ಬಳಕೆಗೆ ಬರೆದೆ ಅನಾಥವಾಗಿ ಬಿದ್ದಿದ್ದ ಕಾರಣ ಇಂದು ಮಾದಕ ವ್ಯಸನಿಗಳಿಗೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ತಂಗುದಾಣವಾಗಿ ಮಾರ್ಪಟ್ಟಿದೆ.

ಚಿತ್ರ_ಸ್ಕೈ ವಾಕರ್  ಮೇಲೆ ಬಿದ್ದಿರುವ ರಾಶಿರಾಶಿ ವೈಟ್ ಸಲ್ಯೂಷನ್

ತುಮಕೂರು ಟೌನ್ ಲ್ ವೃತ್ತದಲ್ಲಿ ಇರುವ ಸ್ಕೈವಾಕರ್ ಮೇಲೆ ಇಂದು ನಮ್ಮ ತಂಡ ಭೇಟಿ ನೀಡಿದ್ದ ವೇಳೆ ರಾಶಿ ರಾಶಿ ವೈಟ್ ಲೆಡ್ (ಸಲ್ಯೂಷನ್) ಸಿಕ್ಕಿದ್ದು ಅದೇ ಸ್ಥಳದಲ್ಲಿ ಸಲುಷನ್ ತೆಗೆದುಕೊಳ್ಳುವುದು ಬಳಸುವ ವಸ್ತುಗಳು ಹಾಗೂ ಬಟ್ಟೆಗಳು ಸೇರಿದಂತೆ ಹಲವು ವಸ್ತುಗಳು ಬಿದ್ದಿದ್ದು ನಮ್ಮ ತಂಡದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

ಹಾಗಾದರೆ ಇಷ್ಟು ದೊಡ್ಡ ಮಟ್ಟದ ಸಲ್ಯೂಷನ್ ಪಡೆಯುತ್ತಿರುವ ವ್ಯಕ್ತಿಗಳು ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುವುದು ನಿಶ್ಚಿತ ಇನ್ನೂ ಸದರಿ ಸ್ಥಳ ಸಾರ್ವಜನಿಕರ ಜನನಿಬಿಡ ಪ್ರದೇಶವಾಗಿದ್ದು ಸ್ಥಳದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಸಾವಿರಾರು ಜನ ಸಂಚರಿಸುತ್ತಾರೆ ಆದರೆ ಲಕ್ಷಾಂತರ ರೂಗಳು ಖರ್ಚು ಮಾಡಿ ನಿರ್ಮಿಸಿರುವ ಸ್ಕೈವಾಕರ್ ಬಳಕೆಯಾಗದೆ ಇರುವ ಕಾರಣ ಈ ಸ್ಥಳ ಮಾದಕ ವ್ಯಸನಿಗಳಿಗೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ಜಾಗವಾಗಿ ಮಾರ್ಪಟ್ಟಿದೆ .

ಎಲ್ಲಾ ಸೂಕ್ಷ್ಮತೆಯನ್ನು ಗಮನಿಸಿದಾಗ ಇನ್ನು ಆಭಾಗದಲ್ಲಿ ಹಲವು ಶಾಲಾ ಕಾಲೇಜು ಬಸ್ ನಿಲ್ದಾಣಗಳು ಪತ್ರೆಗಳು ಸೇರಿದಂತೆ ಎಲ್ಲಾ ತರದ ವರ್ಗದ ಜನರು ಈ ಭಾಗದಲ್ಲಿ ದಿನನಿತ್ಯ ಸಂಚರಿಸುತ್ತಾರೆ ಹಾಗಾದರೆ ಇಂಥ ಜಾಗದಲ್ಲಿ ಎಷ್ಟು ಪ್ರಮಾಣದಲ್ಲಿ ವಸ್ತುಗಳನ್ನು ತೆಗೆದುಕೊಳ್ಳುತ್ತಿರುವ ಯಾರು ಎನ್ನುವ ಪ್ರಶ್ನೆ ಕಾಡುತ್ತದೆ

ಮೇಲಿನ ಚಿತ್ರದಲ್ಲಿ ಕಾಣುತ್ತಿರುವುದು ಸಲ್ಯೂಷನ್ ಜೊತೆ ಬಳಸಿರುವ ಬಟ್ಟೆಗಳು ಕಾಣಬಹುದು

 

ಇನ್ನು ಕೂಗಳತೆಯ ದೂರದಲ್ಲಿ ನಗರದ ಹೃದಯ ಭಾಗವಾಗಿರುವ ಪಾಲಿಕೆ ಕಚೇರಿ ಲೈಬ್ರರಿ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳು ಇವೆ ಆದರೆ ಇದ್ಯಾವುದರ ಅರಿವು ಇಲ್ಲದ ವ್ಯಸನಿಗಳು ದಿನನಿತ್ಯ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಹಾಲಿ ಸ್ಥಳದಲ್ಲಿ ಬಿದ್ದಿರುವ ಬಟ್ಟೆಗಳು ಹಲೋ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ ಅವರು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದಲ್ಲಿ ಮುಂದೆ ನಗರದಲ್ಲಿ ಬಹುದೊಡ್ಡ ಸಮಸ್ಯೆ ಉದ್ಭವಿಸುವ ಯಾವುದೇ ಅನುಮಾನವಿಲ್ಲ.

Leave a Reply

Your email address will not be published. Required fields are marked *

You cannot copy content of this page

error: Content is protected !!