ಅಕಾಲಿಕ ಮಳೆಯಿಂದ ಸಂತ್ರಸ್ಥರಾದವರಿಗೆ ಸೂರು ನಿರ್ಮಿಸಿಕೊಡಲು ಮುಂದಾದ ಇಕ್ಬಾಲ್ ಅಹಮದ್
ತುಮಕೂರು ನಗರದಲ್ಲಿ ಕಳೆದೊಂದು ವಾರದಿಂದ ಸುರಿದ ಅಕಾಲಿಕ ಮಳೆಯ ಆರ್ಭಟದಿಂದಾಗಿ ನಗರದ ಮರಳೂರು ದಿಣ್ಣೆ ಪ್ರದೇಶದಲ್ಲಿಮನೆಗಳು ಕುಸಿದು ಅಲ್ಲಿನ ನಿವಾಸಿಗಳು ಅಕ್ಷರಶಃ ಬೀದಿಗೆ ಬಿದ್ದಿದ್ದು, ಅವರ ನೆರವಿಗೆ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಧಾವಿಸಿದ್ದು ಮನೆಗಳ ಪುನರ್ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಿರುವ ಸಾಮಗ್ರಿಗಳನ್ನು ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ವಾಯುಭಾರ ಕುಸಿತದಿಂದಾಗಿ ನಗರದಲ್ಲಿ ಒಂದು ವಾರದಿಂದ ಸುರಿದ ಕುಂಭ ದ್ರೋಣ ಮಳೆಗೆ ನಗರದ ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತತಗೊಂಡ ಪರಿಸ್ಥಿತಿ ಒಂದೆಡೆಯಾದರೆ ನಗರದ ಮರಳೂರು ದಿಣ್ಣೆ ಪ್ರದೇಶದಲ್ಲಿ ಮಳೆಗೆ ಆರು ಮನೆಗಳು ಕುಸಿದಿದ್ದು ಆ ಮನೆಗಳಲ್ಲಿ ವಾಸಿಸುತ್ತಿದ್ದವರ ಗೋಳು ಹೇಳತೀರದ್ದಾಗಿತ್ತು. ಈ ವೇಳೆ ನಗರದ ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಮುಕ್ದುಮ್ ಆಲಿ ರವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡು ಕಡುಬಡವರಾದ ಸಂತ್ರಸ್ಥರ ನೆರವಿಗೆ ಧಾವಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.
ಮಕ್ದುಮ್ ಆಲಿ ರವರ ಫೋಸ್ಟ್ ಗಮನಿಸಿದ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಸ್ವಯಂ ಪ್ರೇರಿತವಾಗಿ ಮರಳೂರು ದಿಣ್ಣೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿತು ಸ್ಥಳದಲ್ಲಿಯೇ ಸಂತ್ರಸ್ಥರ ಮನೆಗಳ ಪುನರ್ ನಿರ್ಮಾಣಕ್ಜೆ ಅಗತ್ಯವಾಗಿ ಬೇಕಿರುವ ವಸ್ತುಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿ ಬುಧವಾರದಿಂದ ಕೆಲಸ ಪ್ರಾರಂಭ ಮಾಡಲು ಸಹಕರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿಮಾತನಾಡಿದ ಇಕ್ಬಾಲ್ ಅಹಮದ್ ಮುಕ್ದುಮ್ ಆಲಿಯವರ ಫೋಸ್ಟ್ ಗಮನಿಸಿ ಸ್ಥಳಕ್ಕೆ ಬಂದು ಪರಿಶೀಲನೆ ನೆಡಸಿದಾಗ ನಿಜಕ್ಕೂ ಬಹಳ ದುಃಖವಾಯಿತು. ಮನೆಕಳೆದುಕೊಂಡ ಎಲ್ಲಾ ಸಂತ್ರಸ್ಥರೂ ಸಹ ಅತ್ಯಂತ ಕಡು ಬಡವರು. ದಿನ ನಿತ್ಯದ ಬದುಕನ್ನು ಸಾಗಿಸಲು ದುಡಿಮೆ ಮಾಡಬೇಕಾದ ಪರಿಸ್ಥಿತಿಯಲ್ಲಿರುವವರು. ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ಅವರ ಮನೆಗಳು ಕುಸಿದು ಬಿದ್ದಿದ್ದು, ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ. ಈ ಅನ್ನಿವೇಶವನ್ನು ತಾವು ಅವಲೋಕಿಸಿ ಅವರ ಮನೆಗಳನ್ನು ಪುನರ್ ನಿರ್ಮಾಣ ಮಾಡಲು ಅಗತ್ಯ ಸಾಮಗ್ರಗಳನ್ನು ಒದಗಿಸುವುದಾಗಿ ತನ್ಮ ವೈಯಕ್ತಿಕವಾಗಿ ನೀಡಲು ಒಪ್ಪಿರುವುದಾಗಿ ತಿಳಿಸಿದರು. ಮನುಷ್ಯ ತಾನು ಪರೋಪಕಾರಿ ಜೀವನವನ್ನು ನಡೆಸಬೇಕು. ತಮ್ಮು ಸುತ್ತಮುತ್ತಲಿನ ಎಲ್ಲಾ ನಾಗರೀಕರು ನೆಮ್ಮದಿಯಿಂದ ಬದುಕುವ ಹಾಗೆ ಮಾಡಬೇಕು, ಆಗ ತಾನು ಹುಟ್ಟಿದ್ದಕ್ಕೂ ಸಾರ್ಥಕ ಹಾಗೂ ಮಾನವೀಯತೆ ಮೆರೆದಂತಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮುಕ್ದುಮ್ ಆಲಿ ತಾವು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಾಗ ಯಾರೊಬ್ಬ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಸಹಾಯ ಮಾಡುವ ಉದಾರ ಮನಸ್ಸು ತೋರಲಿಲ್ಲ. ಆದರೆ ಇಕ್ಬಾಲ್ ಅಹಮದ್ ರವರು ಮುಂದೆ ಬಂಸು ಬಡಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದು ಅವರಿಗೆ ಅನಂತ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮರಳೂರು ದಿಣ್ಣೆಯ ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು