ಜಗ್ಗೇಶ್ ಅಭಿಮಾನಿಗಳ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಕನಸಿನ ಸೂರು ಉದ್ಘಾಟನೆ .
ಕೊರಟಗೆರೆ ಪಟ್ಟಣದ ಗಿರಿನಗರದಲ್ಲಿ ವಾಸವಿರುವ ನಿರಾಶ್ರತ ಮತ್ತು ವಯೋವೃದ್ದೆ ರಂಗಮ್ಮ (80)
ಇವರಿಗೆ ಗಂಡ ,ಮಕ್ಕಳಿಲ್ಲ ಸಂಬಂಧಿಕರು ಇದ್ದರೂ ಹತ್ತಿರವಿಲ್ಲ ದೂರದ ಸಂಬಂಧಿಗಳು ಇದ್ದಾರೆ ಇವರನ್ನು ನೋಡಿಕೊಳ್ಳುವವರು ಮತ್ತು ಇವರಿಗೆ ವಾಸಿಸಲು ಸೂರು ಇಲ್ಲದ ವೇಳೆಯಲ್ಲಿ ಆಗಮಿಸಿದಂತ ಬಳಗವೇ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ಅಭಿಮಾನಿ ಬಳಗ
ಕೊರಟಗೆರೆ ಪಟ್ಟಣದಲ್ಲಿ ಈ ಬಳಗದ ವತಿಯಿಂದ ಮೊದಲನೆಯ ಮನೆ ಲಕ್ಷ್ಮಮ್ಮ ಎಂಬುವವರಿಗೆ ಎರಡು ವರ್ಷಗಳ ಹಿಂದೆ ಕನ್ನಡದ ಸೂರು ಎಂಬುದಾಗಿ ನಿರ್ಮಿಸಿಕೊಟ್ಟಿದ್ದರು.
ಎರಡನೆಯದಾಗಿ ZEE ಕನ್ನಡ ವಾಹಿನಿಯ ಸರಿಗಮಪ ನಲ್ಲಿ ಹಾಡಿದಮತ ಸಹೋದರಿಯರಾದ ಮಧುಗಿರಿ ತಾಲೂಕಿನ ಜಕ್ಕನಹಳ್ಳಿಯ ರತ್ನಮ್ಮ ಮತ್ತು ಮಂಜಮ್ಮ ಎಂಬುವವರಿಗೆ ಮನೆ ನಿರ್ಮಿಸಿಕೊಟ್ಟರು.
ಮೂರನೆಯದಾಗಿ ಪಟ್ಟಣದ ಗಿರಿನಗರದ ವಾಸಿಯಾದ ನಿರಾಶ್ರಿತ ಮತ್ತು ವಯೋವೃದ್ದೆಯಾದ ರಂಗಮ್ಮ ( 80 ) ಇವರಿಗೆ ಕನಸಿನ ಸೂರು ಎಂಬುದಾಗಿ ನಿರ್ಮಿಸಿದ್ದು ಈ ಸೂರಿಗೆ ಪುನೀತ್ ನಿಲಯ ಎಂಬುದಾಗಿ ನಾಮಕರಣ ಮಾಡಿದ್ದಾರೆ.ಈ ಮನೆಯನ್ನು 66 ನೇ ಕನ್ನಡ ರಾಜ್ಯೋತ್ದವದ ಅಂಗವಾಗಿ ನಿರ್ಮಿಸಲಾಯಿತು.