ತುಮಕೂರಿನ ಇನ್ಸ್ಪೆಕ್ಟರ್ ಸೇರಿ ನಾಲ್ವರು ಪೋಲೀಸ್ ಅಧಿಕಾರಿಗಳಿಗೆ ಬಿಟ್ ಕಾಯಿನ್ ಬಲೆ.
ತುಮಕೂರು /ಬೆಂಗಳೂರು – ರಾಜ್ಯದಲ್ಲೇ ತೀವ್ರ ಸಂಚಲನ ಉಂಟುಮಾಡಿದ್ದ ಬಿಟ್ ಕಾಯಿನ್ ಆಕ್ರಮ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು ಸಿಸಿಬಿಯ ನಾಲ್ಕು ಇನ್ಸ್ಪೆಕ್ಟರ್ಗಳು ಹಾಗೂ ಇಬ್ಬರು ಸೈಬರ್ ತಜ್ಞರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದಾರೆ.
ಇನ್ನು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಬೆಂಗಳೂರಿನ ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಸಿಬಿ ಪೊಲೀಸರು ಹಾಗೂ ಇತರರು ಸಾಕ್ಷ ನಾಶಪಡಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದ್ದು.
ಇದನ್ನು ಪತ್ತೆ ಮಾಡಿದ್ದ ಎಸ್ಐಟಿ ಅಧಿಕಾರಿಗಳು ಸಿಸಿಬಿ ಪೊಲೀಸರು ಹಾಗೂ ಇತರರ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ ಆಗಸ್ಟ್ 9ರಂದು ದೂರು ದಾಖಲಿಸಿದ್ದು ಅದರ ಮುಂದಿನ ಭಾಗವಾಗಿ.
ಆರೋಪಿತ ಪೊಲೀಸರು ಹಾಗೂ ಇತರರನ್ನ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ತನಿಖೆ ಮುಂದುವರಿಸಿದ್ದು ನ್ಯಾಯಾಲಯದ ಅನುಮತಿಯಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರ ಇಬ್ಬರ ಮನೆ ಹಾಗೂ ಕಚೇರಿಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಸಿಸಿಬಿಯಲ್ಲಿ ಕೆಲಸ ನಿರ್ವಹಿಸಿದ್ದ ಇನ್ಸ್ಪೆಕ್ಟರ್ಗಳಾದ ಶ್ರೀಧರ್ ಪೂಜಾರ, ಪ್ರಶಾಂತ್ ಬಾಬು, ಹಾಗೂ ಇತ್ತೀಚಿಗೆ ತುಮಕೂರು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದ ಲಕ್ಷ್ಮಿಕಾಂತಯ್ಯ ಹಾಗೂ ಚಂದ್ರಾದರ್ ರವರ ಮನೆಗಳಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ.
ಇದರೊಂದಿಗೆ ಸಿಸಿಬಿ ಪೊಲೀಸರ ತನಿಖೆಗೆ ತಾಂತ್ರಿಕ ನೆರವು ನೀಡಿದ್ದ ಸೈಬರ್ ಸ್ಪೆಷಲ್ ಸ್ಪೆಷಲಿಸ್ಟ್ ಗಳಾದ ಸಂತೋಷ ಹಾಗೂ ಗಗನ್ ರವರ ಮನೆ ಹಾಗೂ ಕಚೇರಿಯ ಮೇಲು ಸಹ ಸಿಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ .
ಕಳೆದ ಮೂರು ದಿನಗಳ ಹಿಂದೆ ತುಮಕೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಲಕ್ಷ್ಮಿಕಾಂತಯ್ಯ ಅಧಿಕಾರ ವಹಿಸಿಕೊಂಡಿದ್ದರು ಇದರ ಬೆನ್ನಲ್ಲೇ ಶನಿವಾರ ಲಕ್ಷ್ಮಿಕಾಂತಯ್ಯರವರಿಗೆ ಸಿಸಿಬಿ ಅಧಿಕಾರಿಗಳು ಬುಲಾವ್ ನೀಡಿದ್ದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಸಹ ಬೆಂಗಳೂರಿಗೆ ಸಿಸಿಬಿ ಅಧಿಕಾರಿಗಳ ತನಿಖೆಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ.
ಅದೇನೆ ಇರಲಿ ಅಕ್ರಮ ಬಿಟ್ ಕಾಯಿನ್ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದ್ದು ಪ್ರಕರಣದ ಆರೋಪಿಗಳಿಗೆ ತೀವ್ರ ನಡುಕ ಶುರುವಾಗಿದೆ