ಬಡವರ ಆಹಾರ ಆರೋಗ್ಯದ ಕಾಳಜಿ ಮರೆತ ತುಮಕೂರು ಮಹಾನಗರ ಪಾಲಿಕೆ
ಊಟದ ಜೊತೆ ದೂಳು… ರೋಗ ಫ್ರೀ…????
ಸರ್ಕಾರದ ಮಹತ್ವಾಕಾಂಕ್ಷಿ ಯ ಯೋಜನೆಗಳಲ್ಲಿ ಒಂದಾದ ಅತಿ ಕಡಿಮೆ ದರ ಹಾಗೂ ಉತ್ತಮ ಆಹಾರ ಒದಗಿಸುವ ಬಡವರ ಹಸಿವನ್ನು ನೀಗಿಸುವ ಒಂದು ಅರ್ಥಪೂರ್ಣ ಯೋಜನೆಗಳಲ್ಲಿ ಒಂದಾದ ಬಡವರ ಇಂದಿರಾ ಕ್ಯಾಂಟೀನ್ ಕೂಡ ಒಂದು. ಅದೆಷ್ಟೋ ಬಡವರ ಪಾಲಿನ ಅನ್ನಪೂರ್ಣ ಈ ಇಂದಿರಾ ಕ್ಯಾಂಟೀನ್.
ಬಡವರು ಕೂಲಿ ಕಾರ್ಮಿಕರು ನಿರ್ಗತಿಕರು ವಿದ್ಯಾರ್ಥಿಗಳು ಪ್ರಯಾಣಿಕರ ಹಸಿವನ್ನು ನೀಗಿಸುವ ಸಲುವಾಗಿ ತುಮಕೂರಿನ ನಾಲ್ಕು ಭಾಗಗಳಲ್ಲಿ ಇಂದಿರಾ ಕ್ಯಾಂಟೀನ್ ಗಳು ಇವೆ ಅದರಿಂದ ಎಷ್ಟು ಬಡವರ ಹಸಿದ ಹೊಟ್ಟೆಯನ್ನುನಗಿಸುತ್ತ ಬಂದಿದೆಯೋ ಗೊತ್ತಿಲ್ಲ ಆದರೆ ಅವುಗಳ ನಿರ್ವಹಣೆ ಮೂಲಸೌಕರ್ಯಗಳು ಹಾಗೂ ಸ್ವಚ್ಛತೆಗೆ ಆದ್ಯತೆ ಮಾತ್ರ ಯಾರು ನೀಡಿದಂತೆ ಕಾಣುತ್ತಿಲ್ಲ.ಇದಕ್ಕೆ ಪುಷ್ಟಿ ನೀಡುವಂತೆ ತೀರ ನಿರ್ಲಕ್ಷಕ್ಕೊಳಗಾದ ಇಂದಿರಾ ಕ್ಯಾಂಟೀನ್ ಗಳಲ್ಲಿ ತುಮಕೂರಿನ ಮಂಡಿಪೇಟೆ ಇಂದಿರಾ ಕ್ಯಾಂಟೀನ್ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತದೆ.
ಕಾರಣ ಕೆಲ ದಿನಗಳ ಹಿಂದೆ ಮಂಡಿ ಪೇಟೆಯ ಮುಖ್ಯ ಸರ್ಕಲ್ ಒಂದರಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಯುಜಿಡಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಸ್ತೆ ಅಗೆದು ಯುಜಿಡಿ ಕಾಮಗಾರಿ ನಿರ್ವಹಿಸುತ್ತಿರುವ ಕಾರಣ ಇಡೀ ಪ್ರದೇಶ ದೂಳು ಮಯವಾಗಿದೆಇಂದಿರಾ ಕ್ಯಾಂಟೀನ್ ಮುಂಭಾಗ ವಾಹನಗಳ ಸಂಚಾರ ತೀವ್ರವಾಗಿದ್ದು ಅದರಿಂದ ಹೇಳುವುದು ನೇರವಾಗಿ ಇಂದಿರಾ ಕ್ಯಾಂಟೀನ್ ಗ್ರಾಹಕರು ಹಾಗೂ ಆಹಾರದ ಮೇಲೆ ಬೀಳುತ್ತಿದೆ. ಬಿಡುವ ಕಾರಣ ನೇರವಾಗಿ ಆಹಾರದ ಮುಖಾಂತರ ಇಂದಿರಾ ಕ್ಯಾಂಟೀನ್ ಗ್ರಾಹಕರ ಹೊಟ್ಟೆ ಸೇರುತ್ತಿದೆ. ಹಾಗೂ ಇಡೀ ಪ್ರದೇಶ ಹಾಗೂ ಸುತ್ತಮುತ್ತಲ ವಾತಾವರಣ ತೀರ ಕಲುಷಿತವಾಗಿದೆ. ಇಲ್ಲಿ ಬರುವ ಅನೇಕ ಜನರಿಗೆಹಾಗು ಹಾಗು ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ವರ್ತಕರು ಸೇರಿದಂತೆ ಎಲ್ಲರಿಗೂ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರಿಗೆ ಇದು ಯಾವುದರ ಅರಿವೂ ಇಲ್ಲದಂತೆ ಕೈಕಟ್ಟಿ ಕುಳಿತಿದ್ದಾರೆ.ಮುಖ್ಯರಸ್ತೆಯಲ್ಲಿ ಕನಿಷ್ಠ ನೀರು ಸಿಂಪಡಿಸುವ ಗೋಜಿಗೂ ಸಹ ಹೋಗದಿರುವುದು ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ.
ಆದರೆ ಇಲ್ಲಿಗೆ ಬರುವ ಗ್ರಾಹಕರು ವಿಧಿಯಿಲ್ಲದೆ ಆಹಾರ ಸೇವಿಸುತ್ತಿದ್ದಾರೆ. ಆದರೆ ದೊಡ್ಡ ದೊಡ್ಡ ದೊಡ್ಡ ಹೋಟೆಲ್ ಗಳ ಮುಂದೆ ಇದೇ ರೀತಿಯ ಕಾಮಗಾರಿಗಳನ್ನು ಪಾಲಿಕೆ ಅಧಿಕಾರಿಗಳು ನಿರ್ವಹಿಸುತ್ತಾರೆ ಎಂಬುದೇ ಸಾರ್ವಜನಿಕರ ಪ್ರಶ್ನೆ?…
ಇದ್ಯಾವುದರ ಅರಿವು ಕೂಡ ಯಾವ ಅಧಿಕಾರಿಗಳು ಇಲ್ಲದಂತೆ ಕಾಣುತ್ತಿದೆ ಹಾಗಾದರೆ ಇದಕ್ಕೆ ಹೊಣೆ ಯಾರು??
ಸ್ಮಾರ್ಟ್ ಸಿಟಿ ಹಾಗೆ ಹೀಗೆ ಎಂದು ಬೊಬ್ಬೆ ಹೊಡೆಯುವ ಅಧಿಕಾರಿಗಳಿಗೆ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಇನ್ನಾದರೂ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಒತ್ತುಕೊಡುತ್ತಾರೆಯೇ ಕಾದು ನೋಡೋಣ……