ಭಾರತ ಸಂವಿಧಾನದ ಮೂಲಕ ನಡೆಯುತ್ತದೆ, ಶರಿಯಾ ಕಾನೂನಿನಿಂದಲ್ಲ : ಗುಡುಗಿದ ಯೋಗಿ

ಭಾರತ ಸಂವಿಧಾನದ ಮೂಲಕ ನಡೆಯುತ್ತದೆ, ಶರಿಯಾ ಕಾನೂನಿನಿಂದಲ್ಲ : ಗುಡುಗಿದ ಯೋಗಿ

ನವದೆಹಲಿ: ಕರ್ನಾಟಕ ಹಿಜಾಬ್ ಗದ್ದಲದ ತೀವ್ರವಾಗಿರುವ ವೇಳೆ, ಭಾರತವು ಸಂವಿಧಾನದ ಮೂಲಕ ನಡೆಯುತ್ತದೆಯೇ ಹೊರತು ಶರಿಯಾ ಕಾನೂನಿನಿಂದಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

 

ಹಿಜಾಬ್ ವಿವಾದದ ಕುರಿತು ಮೊದಲ ಬಾರಿಗೆ ಮಾತನಾಡಿದ ಆದಿತ್ಯನಾಥ್, ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ಡ್ರೆಸ್ ಕೋಡ್ ರೂಪಿಸುವ ಹಕ್ಕಿದೆ ಆದರೆ ವ್ಯವಸ್ಥೆಯು ಸಂವಿಧಾನದ ಪ್ರಕಾರ ನಡೆಯಬೇಕು ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

 

ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಡ್ರೆಸ್ ಕೋಡ್ ಅನ್ನು ರೂಪಿಸುವ ಹಕ್ಕನ್ನು ಹೊಂದಿದೆ, ಆದರೆ ಅದನ್ನು ಭಾರತದ ಸಂವಿಧಾನದ ಪ್ರಕಾರ ಮಾಡಲಾಗುತ್ತದೆ ಎಂದು ನಾವು ನೋಡಬೇಕು. ಇದು ಎಲ್ಲರ ಹಿತದೃಷ್ಟಿಯಿಂದ ಕೂಡಿರುತ್ತದೆ,’’ ಎಂದಿದ್ದಾರೆ.

Leave a Reply

Your email address will not be published. Required fields are marked *