ಕ್ಷೆತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಅಧಿವೇಶನದಲ್ಲಿ ಶಾಸಕ ಎಮ್ ಆರ್ ಮಂಜುನಾಥ್ ಮನವಿ

ಕ್ಷೆತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಅಧಿವೇಶನದಲ್ಲಿ ಶಾಸಕ ಎಮ್ ಆರ್ ಮಂಜುನಾಥ್ ಮನವಿ

ಹನೂರು :- ತಾಲೂಕಿನ ಜೆಡಿಎಸ್ ಪಕ್ಷದ ಶಾಸಕ ಎಂ ಆರ್ ಮಂಜುನಾಥ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನನ್ನ ಕ್ಷೇತ್ರ ತುಂಬಾ ಭೌಗೋಳಿಕವಾಗಿ 6. 5. ಲಕ್ಷ ಎಕರೆ ದೊಡ್ಡ ವಿಸ್ತೀರ್ಣ ಹೊಂದಿದೆ ಹಲವಾರು ಸಮಸ್ಯೆಗಳು ಇರುವುದರಿಂದ ನನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಮರ್ಪಕವಾಗಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಗಮನಕ್ಕೆ ತರಲು ಸಭಾಧ್ಯಕ್ಷ ಯು ಟಿ ಖಾದರ್ ರಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ಮನವಿ ಮಾಡಿದ್ದಾರೆ.

ನನ್ನ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪವಾಡ ಪುರುಷರುಗಳಾದ ಶ್ರೀ ಮಲೈ ಮಾದೇಶ್ವರ ಧರೆಗೆ ದೊಡ್ಡವರಾದ ಸಿದ್ದಪ್ಪಾಜಿ ಮಂಟೇಸ್ವಾಮಿ ಪ್ರಸಿದ್ಧ ಪವಾಡ ಪುರುಷರ ತಾಣಗಳಿಂದ ಕೂಡಿದೆ ನಮ್ಮ ಕ್ಷೇತ್ರದಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೆತ್ರದಲ್ಲಿ ಸಂಚಾರ ಮಾಡುತ್ತಿರುತ್ತಾರೆ

 

 

 

 

 

 

 

 

 

 

 

 

 

 

 

 

ನನ್ನ ಕ್ಷೇತ್ರದ ರಸ್ತೆಗಳು ತೀರಾ ಅದಗೆಟ್ಟಿದ್ದು ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಅಪಘಾತ ಅವಘಡಗಳು ನಡೆಯುತ್ತಿವೆ. ಹಾಗೂ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವುದರಿಂದ ಸಾರಿಗೆ ವ್ಯವಸ್ಥೆ ನನ್ನ ಕ್ಷೇತ್ರದ ಹಳ್ಳಿಗಳಿಗೆ ತಲುಪುತ್ತಿಲ್ಲ ಪ್ರತಿಯೊಂದು ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು. ಹಾಗೂ ನನ್ನ ಕ್ಷೇತ್ರದ ಜನರು ಬೆಂಗಳೂರು ಮತ್ತು ಮೈಸೂರು ಕಡೆ ಉದ್ಯೋಗ ಹರಸಿ ಹೋಗುತ್ತಿದ್ದಾರೆ ಅದನ್ನು ತಡೆಗಟ್ಟಲು ಕ್ಷೇತ್ರದಲ್ಲಿ ಉತ್ತಮ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಆಗುವಂತೆ ನನ್ನ ಕ್ಷೆತ್ರಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಮಾಡಿದರು.

 

 

 

 

 

 

 

 

 

 

 

 

 

 

 

ಹಾಗೂ ಕ್ಷೇತ್ರದಲ್ಲಿ ಗುಡ್ಡಗಾಡು ಪ್ರದೇಶವಿದ್ದು ನೀರಾವರಿ ಸಮಸ್ಯೆ ಎದುರಾಗುತ್ತಿದೆ ಕ್ಷೇತ್ರದ ಜನರಿಗೆ ಹೆಚ್ಚಿನ ರೀತಿಯಲ್ಲಿ ನೀರಾವರಿ ವ್ಯವಸ್ಥೆ ಮಾಡಲು ಸಹಕಾರ ನೀಡುವಂತೆ ಮನವಿ ಮಾಡಿದರು.ಮತ್ತು ಹೆಚ್ಚಾಗಿ ಕಾಡoಚಿನ ಗ್ರಾಮಗಳಲ್ಲಿ ನಮ್ಮ ಕ್ಷೇತ್ರದ ಜನರು ವಾಸಿಸುತ್ತಿರುವುದರಿಂದ ವನ್ಯಪ್ರಾಣಿಗಳಿಂದ ಹಲವಾರು ಸಮಸ್ಯೆಗಳನ್ನ ಎದುರುಸುತ್ತಿದ್ದಾರೆ. ಮೊನ್ನೆಯಷ್ಟೇ ಏಳು ವರ್ಷದ ಪುಟ್ಟ ಬಾಲಕಿಯು ಚಿರತೆಯ ದಾಳಿಯಿಂದಾಗಿ ಮೃತಪಟ್ಟಿದ್ದಾಳೆ ಹಾಗೂ ಕಳೆದ 10 ದಿನಗಳ ಹಿಂದೆ ಆನೆ ದಾಳಿಯಿಂದಾಗಿ ಒಬ್ಬ ವ್ಯಕ್ತಿಯು ಮೃತಪಟ್ಟಿದ್ದಾನೆ. ಹಾಗಾಗಿ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸಮರ್ಪಕವಾಗಿ ಸಿಗುವಂತಾಗಬೇಕು. ಅರಣ್ಯ ಇಲಾಖೆ ಇನ್ನೂ ಹೆಚ್ಚಿನ ಕ್ರಮ ಕೈಗೊಂಡು ಕಾಡಂಚಿನ ಗ್ರಾಮದ ಸಾರ್ವಜನಿಕರಿಗೆ ವನ್ಯ ಪ್ರಾಣಿಗಳಿಂದ ಯಾವುದೇ ತೊಂದರೆ ಆಗದಂತೆ ಯೋಜನೆ ಕೈಗೊಳ್ಳಲು ಮನವಿ ಮಾಡಿದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!