ಅಕ್ರಮ ಚಟುವಟಿಕೆಗಳಿಗೆ ಪ್ರೇರೇಪಿಸುವ ಪುಂಡರಿಗೆ ಬಿಳಬೇಕಿದೆ ಕಡಿವಾಣ
ತುಮಕೂರು_ ಕಲ್ಪತರು ನಾಡು ತುಮಕೂರು ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಖ್ಯಾತಿ ಹೊಂದಿದೆ ಆದರೆ ಇಂತಹ ಪ್ರಖ್ಯಾತಿ ಹೊಂದಿರುವ ತುಮಕೂರು ನಗರದಲ್ಲಿ ಇರುವ ಜೂನಿಯರ್ ಕಾಲೇಜು ಮೈದಾನ ಹಾಗೂ ಪಕ್ಕದಲ್ಲೇ ಇರುವ ಸಾಲು ಆಲದ ಮರದ ಟ್ರೀ ಟೆಕ್ ಪಾರ್ಕ್ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಇಲ್ಲಿ ಪ್ರತಿದಿನ ನಡೆಯುವ ಚಟುವಟಿಕೆಗಳು ಯಾವ ಅಕ್ರಮ ಚಟುವಟಿಕೆಗಳಿಗೆ ಕಡಿಮೆಯಿಲ್ಲವೆಂಬಂತೆ ನಡೆಯುತ್ತಿವೆ ಇದಕ್ಕೆ ಪುಷ್ಟಿ ನೀಡುವಂತೆ ಕಾಲೇಜಿಗೆ ವಿದ್ಯಾಭ್ಯಾಸ ಮಾಡಲು ಬರುವ ಹುಡುಗರು ಗಾಂಜಾ, ಸಲ್ಯೂಷನ್ ಸೇರಿದಂತೆ ಹಾಡುಹಗಲೇ ಬಿಯರ್ ಬಾಟಲಿಗಳನ್ನು ಕುಡಿದು ಕೇಕೆ ಹಾಕುವ ಪುಂಡರು ಇರುವ ಕಾರಣ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಸಾಕಷ್ಟು ತೊಂದರೆಗಳು ಉಂಟಾಗುತ್ತಿವೆ.
ಕಾಲೇಜು ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಸಣ್ಣಪುಟ್ಟ ಜಗಳಗಳನ್ನು ಮಾಡಿಕೊಂಡರೆ ಅದನ್ನೇ ದೊಡ್ಡದು ಎಂಬಂತೆ ಬಿಂಬಿಸಿ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಪುಂಡರನ್ನು ಕರೆಸಿ ಹೊಡೆಸುವ ಹಾಗೂ ಅಕ್ರಮ ಚಟುವಟಿಕೆಗಳಿಗೆ ಪ್ರೇರೇಪಿಸುವಂತಹ ಪುಂಡರು ಆಗಮಿಸಿ ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡುತ್ತಿದ್ದಾರೆ.
ಇಂತಹ ಘಟನೆಗಳಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಸೋಮವಾರ ಮಧ್ಯಾಹ್ನ ನಡೆದ ಘಟನೆಯೊಂದು ಇಂತಹ ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ.
ಬೈಕ್ ನಲ್ಲಿ ಬರುವ ಪುಂಡ ನೊಬ್ಬ ಅಲ್ಲಿರುವ ವಿದ್ಯಾರ್ಥಿಗಳಿಗೆ ಟೂಲ್ಸ್ ಗಳನ್ನು ತಂದುಕೊಡುವೆ ….. ಚುಚ್ರೋ….. ಕೇಸ್ ಗಳಾದರೂ ಆಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ದೃಶ್ಯ ಕಂಡುಬಂದಿದೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ ಕೈಯಲ್ಲಿ ಹಾಡುಹಗಲೇ ಬಿಯರ್ ಬಾಟಲಿ ಹಿಡಿದು ಓಡಾಡುವ ದೃಶ್ಯಗಳು ಸಾಮಾನ್ಯವಾಗಿವೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕರೊಬ್ಬರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾಲು ಆಲದಮರ ಟ್ರೀ ಟೆಕ್ ಪಾರ್ಕ್ ನಿರ್ಮಾಣ ಮಾಡಿದೆ ಆದರೆ ಇಂತಹ ಒಂದು ಅದ್ಭುತ ಪಾರ್ಕ್ ಒಳ್ಳೆಯ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ , ಕಾಲೇಜಿಗೆ ಎಂದು ಆಗಮಿಸುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗದೆ ವೃತ್ತ ಕಾಲಹರಣ ಮಾಡುತ್ತಾರೆ ಗಾಂಜಾ, ಸಲ್ಯೂಷನ್ ಸೇರಿದಂತೆ ಮದ್ಯಪಾನ ಮಾಡುವ ಸನ್ನಿವೇಶಗಳು ಸಾಕಷ್ಟು ಕಣ್ಣಮುಂದಿವೆ ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನಹರಿಸಿ ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾಗಿದೆ ಎಂದು ಮನವಿ ಮಾಡಿದ್ದಾರೆ .
ವರದಿ _ವಿಜಯ ಭಾರತ ನ್ಯೂಸ್ ಡೆಸ್ಕ್