ಅಕ್ರಮ ಚಟುವಟಿಕೆಗಳ ತಾಣವಾದ ತುಮಕೂರಿನ ಸ್ಕೈವಾಕರ್ .
ತುಮಕೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ಸಾರ್ವಜನಿಕರ ಅನುಕೂಲಕ್ಕೆಂದು ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಪಾದಚಾರಿಗಳ ಅನುಕೂಲಕ್ಕಾಗಿ ರಸ್ತೆದಾಟಲು ಸ್ಕೈವಾಕರ್ ನಿರ್ಮಾಣ ಮಾಡಲಾಗಿದೆ.
ಆದರೆ ಸ್ಕೈವಾಕರ್ ನಿರ್ಮಾಣ , ಮಾಡಿ ವರ್ಷಗಳೇ ಕಳೆದರು ಅದರ ಬಳಕೆ ಹಾಗೂ ನಿರ್ವಹಣೆಗೆ ಪಾಲಿಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಮಾದಕ ವ್ಯಸನಿಗಳು ತಮ್ಮ ಅಕ್ರಮ ಚಟುವಟಿಕೆಗಳಿಗೆ ಸ್ಕೈವಾಕರ್ ಅನ್ನ ಬಳಸಿಕೊಳ್ಳುವ ಮೂಲಕ ತಮ್ಮ ತಂಗುದಾಣವನ್ನಾಗಿ ಬಳಸಿಕೊಂಡಿದ್ದಾರೆ.
ಕೆಜಿಗಟ್ಟಲೆ ಸಲ್ಯೂಷನ್ ಬಾಟಲ್ ಗಳು.
ಸ್ಕೈವಾಕರ್ ಮೇಲೆ ಗಮನಿಸಿದರೆ ಕೆಜಿಗಟ್ಟಲೆ ಸಲುಷನ್ ಡಬ್ಬಿಗಳು ಬಿದ್ದಿದ್ದು ಎಲ್ಲರನ್ನೂ ಭಯ ಹುಟ್ಟಿಸುವಂತಿದೆ.
ಸಲ್ಯೂಷನ್ ತೆಗೆದುಕೊಳ್ಳಲು ಬಳಸಿರುವ ಬಟ್ಟೆಗಳು.
ಇನ್ನು ಮಾದಕ ವ್ಯಸನಿಗಳು ಸಲ್ಯೂಷನ್ ಸೇವಿಸಲು ಬಳಸಿರುವ ಸಾಕಷ್ಟು ಬಟ್ಟೆಗಳು ಸ್ಥಳದಲ್ಲಿ ಕಾಣಸಿಗುತ್ತವೆ.
ಕೂಗಳತೆಯ ದೂರದಲ್ಲಿ ಶಾಲಾ-ಕಾಲೇಜುಗಳು.
ಇನ್ನು ತುಮಕೂರು ನಗರದ ಪ್ರಮುಖ ಸರ್ಕಲ್ ಗಳಲ್ಲಿ ಒಂದಾಗಿರುವ ಬಿಜಿಎಸ್ ವೃತ್ತ ಸಾಕಷ್ಟು ಶಾಲಾ-ಕಾಲೇಜುಗಳು ಇದ್ದು ವಿದ್ಯಾರ್ಥಿಗಳು ಸದಾ ಓಡಾಡುವ ಪ್ರದೇಶವಾಗಿದೆ .
ಸ್ಕೈವಾಕರ್ ಬಳಿಯ ಪಾರ್ಕ್ನಲ್ಲಿ ಸಲ್ಯೂಷನ್ ಡಬ್ಬಿಗಳು.
ಸ್ಕೈವಾಕರ್ ಗೆ ಹೊಂದಿಕೊಂಡಂತಿರುವ ಪಾರ್ಕ್ ನಲ್ಲೂ ಕೂಡ ಸಾಕಷ್ಟು ಸಲ್ಯೂಷನ್ ಬಳಸಿ ಬಿಸಾಡಿರುವ ಸಾಕಷ್ಟು ಸಲ್ಯೂಷನ್ ಡಬ್ಬಿಗಳು ಪಾರ್ಕ್ ನಲ್ಲಿ ಕೂಡ ಕಾಣಸಿಗುತ್ತದೆ.
ನಿರ್ವಹಣೆ ಹಾಗೂ ಬೆಳಕಿನ ವ್ಯವಸ್ಥೆ ಕಡೆಗಣನೆ.
ನಿರ್ಮಾಣ ಮಾಡಿರುವ ಸ್ಕೈವಾಕರ್ ನ ನಿರ್ವಹಣೆ ಹಾಗೂ ಅವುಗಳಿಗೆ ಪೂರಕವಾಗಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದೇ ಅಕ್ರಮ ಚಟುವಟಿಕೆಗೆ ತಾಣವಾಗಿವೆ.
ದೊಡ್ಡಮಟ್ಟದ ಅಕ್ರಮ ಚಟುವಟಿಕೆ ನಡೆಯುತ್ತಿದ್ದರು ಗಮನಕ್ಕೆ ಬಾರದೆ ಕಣ್ ಮುಚ್ಚಿರುವ ಅಧಿಕಾರಿಗಳು ಸ್ಕೈ ವಾಕರ್ ಬಳಿ ಸಾಕಷ್ಟು ಜನನಿಬಿಡ ಪ್ರದೇಶವಾಗಿದ್ದರು ಕೂಡ ಅದರ ಅರಿವು ಅಧಿಕಾರಿಗಳ ಗಮನಕ್ಕೆ ಬಾರದೆ ಇರುವುದು ನಿಜಕ್ಕೂ ಶೋಚನೀಯ ಸಂಗತಿ.