ಸರ್ವಜನಿಕರಿಗೆ ತೊಂದರೆಯಾದರೆ ಸುಮ್ಮನೆ ಕೂರುವುದಿಲ್ಲ_ಸಚಿವ ಶ್ರೀರಾಮುಲು

ಸರ್ವಜನಿಕರಿಗೆ ತೊಂದರೆಯಾದರೆ ಸುಮ್ಮನೆ ಕೂರುವುದಿಲ್ಲ_ಸಚಿವ ಶ್ರೀರಾಮುಲು

 

ತುಮಕೂರು_ಶನಿವಾರ ನಡೆದ ಪಾವಗಡ ಪಳವಳ್ಳಿ ಕಟ್ಟೆ ಬಸ್ ದುರಂತ ಸಂಭವಿಸಿದ ನಂತರ ಸಚಿವ ಶ್ರೀರಾಮುಲು ರವರು ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಚಾಟಿ ಬೀಸಿದ್ದು ಘಟನೆಗೆ ಅಧಿಕಾರಿಗಳ ನಿರ್ಲಕ್ಷ ಎದ್ದುಕಾಣುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಆರ್ಟಿಓ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳನ್ನು ಕೂಡಲೇ ಅಮಾನತು ಮಾಡಿ ವಿಚಾರಣೆ ನಡೆಸಲಾಗುವುದು ಎಂದು ಸಾರಿಗೆ  ಸಚಿವ  ಶ್ರೀರಾಮುಲು ತುಮಕೂರಿನಲ್ಲಿ  ಪ್ರತಿಕ್ರಯಿಸಿದ್ದಾರೆ.

 

 

ಇನ್ನು ಪಾವಗಡ  ಬಸ್ ದುರಂತದ  ಘಟನೆಗೆ ಸಂಬಂಧಿಸಿದ ಆರ್ಟಿಓ ಅಧಿಕಾರಿಗಳು ವಾಹನ ಇನ್ಸ್ಪೆಕ್ಟರ್ ಗಳು ವಾಹನ ಮಾಲೀಕರು ಸೇರಿದಂತೆ ಯಾರೇ ಕಾರಣರಾಗಿದ್ದರು ಅಂತಹವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು.

 

 

ಶಾಲಾ ಕಾಲೇಜಿಗೆ ತೆರಳುವ ಮಕ್ಕಳು ಕೈ ತೋರಿಸಿದಲ್ಲಿ ಬಸ್ಗಳನ್ನು ನಿಲ್ಲಿಸುವಂತೆ ರಿಕ್ವೆಸ್ಟ್ ಸ್ಟಾಪ್ ನೀಡಲು ಸೂಚಿಸಿದ್ದೇನೆ ಇನ್ನು ಸರ್ಕಾರಿ ಆದೇಶವನ್ನು ಉಲ್ಲಂಘನೆ ಮಾಡುವ ಅಧಿಕಾರಿಗಳನ್ನು ಅಮಾನತುಗೊಳಿಸಲಲಾಗುವುದು .

 

 

 

ಇನ್ನು ಅಪಘಾತಕ್ಕೆ ಕಾರಣ ಕ್ರಷರ್ ಗಳು ಸಹ ಕಾರಣ 40ರಿಂದ 50 ಟನ್ ಗಳಷ್ಟು ಎಂ ಸೆಂಡ್ ಇತರೆ ಸರಕು ಸಾಗಣೆ ಮಾಡುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆಯಂತೆ ಎನ್ನುವ ಅಭಿಪ್ರಾಯವನ್ನು ಕೇಳಲಾಗಿ ಶ್ರೀರಾಮುಲು ಆದ ನಾನು ಇಂತಹ ಘಟನೆಗಳನ್ನು ನೋಡಿಕೊಂಡು ಸುಮ್ಮನೆ ಇರುವುದಿಲ್ಲ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ತಿಳಿಸುತ್ತೇನೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಅಮಾನತ್ತು ಪಡಿಸುತ್ತೇನೆ ಎಂದು ಖಡಕ್ಕಾಗಿ ತಿಳಿಸಿದರು.

 

 

 

ಮಕ್ಕಳಿಗೆ ಪರೀಕ್ಷೆ ಸಮಯ ಹತ್ತಿರವಿರುವ ಕಾರಣ ಪರೀಕ್ಷೆ ಬರೆಯುವ ಸಂಬಂಧ ವಿಶೇಷ ಅವಕಾಶವನ್ನು ಮಾಡಿಕೊಡಬೇಕೆಂದು ಸಂಬಂಧಪಟ್ಟ ಶಿಕ್ಷಣ ಸಚಿವರೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!