ಜನ ನೀಡಿದ್ದ ಕೂಲಿ ಕೆಲಸ ಮಾಡಿದ್ದೇನೆ,ಜನ ಮತ ಬಿಕ್ಷೆ ನೀಡುತ್ತಾರೆ: ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರೀಶಂಕರ್.
ತುಮಕೂರು – ಗ್ರಾಮಾಂತರ ಕ್ಷೇತ್ರದಲ್ಲಿ ಐದು ವರ್ಷ ಪ್ರಾಮಾಣಿಕವಾಗಿ ಜನರು ನೀಡಿದ್ದ ಕೂಲಿ ಕೆಲಸ ಮಾಡಿದ್ದೇನೆ , ಜನ ಮತ ಬಿಕ್ಷೆ ನೀಡುತ್ತಾರೆ ಎಂದು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರೀಶಂಕರ್ ತಿಳಿಸಿದರು.
ಬುಧವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣೆಯಲ್ಲಿ ಜನರ ಬಳಿಗೆ ಮತ ಭಿಕ್ಷೆಗಾಗಿ ಹೋಗುತ್ತೇನೆ, ಜನರ ಸೇವೆ ಮಾಡಿರುವುದಕ್ಕೆ ಮತ ನೀಡುತ್ತಾರೆ ಎಂದರು.
ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಈ ವಿಚಾರದಲ್ಲಿ ನ್ಯಾಯಾಲಯದ ಮೇಲೆ ಗೌರವವಿದೆ, ನ್ಯಾಯಾಲಯದಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಬುಧವಾರ ದಿನ ಚೆನ್ನಾಗಿತ್ತು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ನಾಳೆ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ಬಿಜಿಎಸ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಕುಟುಂಬಸ್ಥರೊಂದಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದರು.
ನಾಮಪತ್ರ ಸಲ್ಲಿಕೆಗೆ ಕುಮಾರಣ್ಣ ಆಗಮಿಸುವ ನಿರೀಕ್ಷೆ ಇದ್ದು, ಗ್ರಾಮಾಂತರದಲ್ಲಿ ಜೆಡಿಎಸ್ ಬಲ ಪ್ರದರ್ಶನ ಕಾಣಲಿದೆ, ನನ್ನ ಮೇಲಿನ ಪ್ರೀತಿಯಿಂದಲೇ ಸಾವಿರಾರು ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಹಿರೇಹಳ್ಳಿ ಮಹೇಶ್, ಹಾಲನೂರು ಅನಂತ್, ಪಾಲಿಕೆ ಸದಸ್ಯಹೆಚ್.ಡಿ.ಕೆ.ಮಂಜುನಾಥ್, ಹಾಲನೂರು ಲೇಪಾಕ್ಷಿ, ಬೆಳಗುಂಬ ವೆಂಕಟೇಶ್, ನರುಗನಹಳ್ಳಿ ವಿಜಯಕುಮಾರ್, ತನ್ನೀರ್, ಬೆಳಗುಂಬ ಉಸ್ತುವಾರಿ ಎನ್ ಆರ್ ಹರೀಶ್ ಸೇರಿದಂತೆ ಹಲವರು ಇದ್ದರು.