ತುಮಕೂರು: ತುಮಕೂರು ಗ್ರಾಮಾಂತರ ಮಾಜಿ ಶಾಸಕರಾದ ಡಿ ಸಿ ಗೌರಿಶಂಕರ್ ರವರ 46 ನೇ ವರ್ಷದ ಹುಟ್ಟುಹಬ್ಬವನ್ನು ಬಳ್ಳಗೆರೆಯ ಮಾಜಿ ಶಾಸಕರ ನಿವಾಸದ ಬಳಿ ತಮ್ಮ ಅಭಿಮಾನಿಗಳು ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ಶುಭಕೋರಲು ಅಪಾರ ಸಂಖ್ಯೆಯ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಜೆಡಿಎಸ್ ಪಕ್ಷದ ವಿವಿಧ ಮುಖಂಡರುಗಳು ಸಹ ಆಗಮಿಸಿದ್ದರು. ಇನ್ನು ತಮ್ಮ ನೆಚ್ಚಿನ ನಾಯಕರಾದ ಡಿ.ಸಿ.ಗೌರಿಶಂಕರ್‌ರವರಿಗೆ ಶುಭಕೋರಿ ಕೇಕ್ ಕಟ್ ಮಾಡಿಸಿದರು, ಸೆಲ್ಫಿ ತೆಗೆದುಕೊಂಡು ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಇನ್ನು ಇತ್ತೀಚೆಗೆ ಹಲವಾರು ಮಾದ್ಯಮಗಳಲ್ಲಿ ಹಾಗೂ ಜನರಲ್ಲಿ ಮೂಡಿದ್ದ ಗೊಂದಲಕ್ಕೆ ಕೆಲವೊಂದು ಮಾಹಿತಿ ನೀಡಿದ ಗೌರಿಶಂಕರ್‌ರವರು ಜೆಡಿಎಸ್ ಪಕ್ಷದ ಮುಖಂಡರಾದ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಆ ನನ್ನ ಮೈತ್ರಿಗೆ ನನ್ನ ಬೆಂಬಲವಿಲ್ಲವೆಂದರು.
ನಮ್ಮ ವರಿಷ್ಠರು ಯಾವ ರೀತಿಯಾದ ಮೈತ್ರಿಯನ್ನು ಮಾಡಿಕೊಳ್ಳುತ್ತಿದ್ದಾರೋ ನನಗೆ ಪೂರ್ಣವಾಗಿ ಗೊತ್ತಿಲ್ಲ, ಬೇರೆ ಕ್ಷೇತ್ರಗಳ ಬಗ್ಗೆ ನನಗೆ ಗೊತ್ತಿಲ್ಲ ನನ್ನ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಮೊದಲಿನಿಂದಲೂ ಬಿಜೆಪಿ ಪಕ್ಷದ ವಿರುದ್ಧವಾಗಿಯೇ ಹೋರಾಟ ಮತ್ತು ಪಕ್ಷ ಸಂಘಟನೆಯನ್ನು ಮಾಡಿಕೊಂಡು ಬಂದಿದ್ದೇವೆ, ಇದೀಗ ಮೈತ್ರಿ ಎಂದರೆ ನಮಗೆ ಅದು ಸಾಧ್ಯವಾಗದ ಮಾತು ಎಂದು ಹೇಳಿದರು.
ನಮ್ಮ ಪಕ್ಷದ ವರಿಷ್ಠರು ಮುಂಬರುವ ಚುನಾವಣೆಗಳ ಕುರಿತು ಯಾವ ರೀತಿಯಾದ ಮೈತ್ರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡು ನಾನು ನನ್ನ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆಂದು ಹೇಳಿದರಲ್ಲದೇ, ಹಾಗೊಂದು ವೇಳೆ ನಮ್ಮ ಪಕ್ಷದ ವರಿಷ್ಠರು ಮೈತ್ರಿ ಬೇಕೇ ಬೇಕು ಎಂದು ಹೇಳಿದರೆ, ಅದಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದು ಹೇಳಿದರು. (ಈ ಕ್ಷೇತ್ರಕ್ಕೆ ಮಾತ್ರ)
ನಾನು ಯಾವುದೇ ಪಕ್ಷದಿಂದಾಗಲೀ, ಸ್ವತಂತ್ರವಾಗಿಯಾಗಲೀ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಠೀಕರಣ ನೀಡಿದರು. ನಾನು ಈಗಲೂ ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ, ಪಕ್ಷ ಬಿಟ್ಟಿಲ್ಲ ಎಂದು ಮತ್ತೊಮ್ಮೆ ಸ್ಪಷ್ಠೀಕರಣ ನೀಡಿದರು.