HP ಇಂಡಿಯಾ`ಫ್ಯೂಚರ್ ಆಫ್ಲರ್ನಿಂಗ್* ಸ್ಟಡಿ 2022: ಹೆಚ್ಚು ಆದ್ಯತೆಯ ಕಲಿಕೆಯ ಮಾದರಿಯಾಗಿ ಹೈಬ್ರಿಡ್’ ಹೊರಹೊಮ್ಮಿದೆ

 

HP ಇಂಡಿಯಾ`ಫ್ಯೂಚರ್ ಆಫ್ಲರ್ನಿಂಗ್* ಸ್ಟಡಿ 2022: ಹೆಚ್ಚು ಆದ್ಯತೆಯ ಕಲಿಕೆಯ ಮಾದರಿಯಾಗಿ ಹೈಬ್ರಿಡ್’ ಹೊರಹೊಮ್ಮಿದೆ

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಹೈಬ್ರಿಡ್ ಲರ್ನಿಂಗ್ ಮಾದರಿಗೆ ಅಗಾಧವಾದ ಆದ್ಯತೆ ನೀಡುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದವರು, ಹೈಬ್ರಿಡ್ ಮಾದರಿಯು ಹವಾಮಾನ ವೈಪರೀತ್ಯದ ಪರಿಸ್ಥಿತಿಗಳಲ್ಲಿಯೂ ಕಲಿಕೆ ಮುಂದುವರಿಯುವುದನ್ನು ಖಚಿತಪಡಿಸುತ್ತದೆ ಎಂದು ಭಾವಿಸುತ್ತಾರೆ.

ಆನ್‌ಲೈನ್ ತರಗತಿಗಳು ತಮಗೆ ಕೆಲಸ-ಜೀವನದ ಸಮತೋಲನವನ್ನು ಸುಧಾರಿಸಿದೆ ಎಂದು ಶಿಕ್ಷಕರು ಕಂಡುಕೊಂಡಿದ್ದಾರೆ

ಪಿಸಿಗಳು ಈಗ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಹೆಚ್ಚು ಆದ್ಯತೆಯ ಕಲಿಕೆಯ ಸಾಧನಗಳಾಗಿವೆ.

 

*ಮುಖ್ಯಾಂಶಗಳು*

• ಹೈಬ್ರಿಡ್ ಕಲಿಕೆಯ ಮಾದರಿಯು ತಮ್ಮ ಹವ್ಯಾಸಗಳನ್ನು ಮುಂದುವರಿಸಲು ಹೆಚ್ಚುವರಿ ಸಮಯವನ್ನು ನೀಡುತ್ತದೆ ಎಂದು ಸರ್ವೇ ಮಾಡಲಾದ ವಿದ್ಯಾರ್ಥಿಗಳ ಪೈಕಿ 83% ಮಂದಿ ಭಾವಿಸುತ್ತಾರೆ

• ಆನ್‌ಲೈನ್ ಕಲಿಕೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ನಿರಂತರ ಕಲಿಕೆಯನ್ನು ಖಚಿತಪಡಿಸುತ್ತದೆ ಎಂದು ಬಹುತೇಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಒಪ್ಪುತ್ತಾರೆ.

• ಆನ್‌ಲೈನ್ ಕಲಿಕೆಯಿಂದಾಗಿ ತಾವು ಉತ್ತಮ ಕೆಲಸ-ಜೀವನ ಸಮತೋಲನವನ್ನು ಕಂಡುಕೊಂಡಿದ್ದಾಗಿ 92% ಶಿಕ್ಷಕರು ನಂಬುತ್ತಾರೆ.

• ಮಕ್ಕಳು ತಮ್ಮ ಕಲಿಕೆಗೆ ಟ್ಯಾಬ್ಲೆಟ್ ಅಥವಾ ಫೋನ್‌ಗಳಿಗಿಂತ ಒಂದು ಪಿಸಿ ಬಳಸಬೇಕೆಂದು 88% ಶಿಕ್ಷಕರು ಬಯಸುತ್ತಾರೆ

 

*ಬೆಂಗಳೂರು,ಜನವರಿ 20, 2022*- ಸಾಂಕ್ರಾಮಿಕ ರೋಗದ ಆಕ್ರಮಣ ಮತ್ತು ಚಾಲ್ತಿಯಲ್ಲಿರುವ ಪ್ರಭಾವ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಾಕಷ್ಟು ಅಸ್ತವ್ಯಸ್ತಗೊಳಿಸಿದೆ. ಆನ್‌ಲೈನ್ ಕಲಿಕೆಯ ಪರಿಣಾಮವಾಗಿ, ತರಗತಿಯಲ್ಲಿ ಶಿಕ್ಷಕರು ಹೇಗೆ ಬೋಧಿಸುತ್ತಾರೆ ಎಂಬುದೂ ಬದಲಾವಣೆಗೆ ಒಳಗಾಗಿದೆ. HP ಇಂಡಿಯಾ ಫ್ಯೂಚರ್ ಆಫ್ ಲರ್ನಿಂಗ್ ಸ್ಟಡಿ 2022 ಪ್ರಕಾರ, ಸರ್ವೇ ಮಾಡಲಾದವರ ಪೈಕಿ 98% ಪೋಷಕರು ಮತ್ತು 99% ಶಿಕ್ಷಕರು ಆನ್‌ಲೈನ್ ಶಿಕ್ಷಣವು ಕಲಿಕೆಯನ್ನು ನಿರಂತರವಾಗಿ ಮುನ್ನಡೆಸುತ್ತಿದೆ ಎಂದು ಹೇಳುತ್ತಾರೆ. ವಾಸ್ತವವಾಗಿ, ಆನ್‌ಲೈನ್ ಕಲಿಕೆಯು ಸಾಂಪ್ರದಾಯಿಕ ತರಗತಿಯ ಕಲಿಕೆಗೆ ಪೂರಕವಾಗಿದೆ ಎಂದು ಬಹುಪಾಲು (91%) ವಿದ್ಯಾರ್ಥಿಗಳು ನಂಬುತ್ತಾರೆ.

ಅಧ್ಯಯನವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಾದ್ಯಂತ ಹೈಬ್ರಿಡ್ ಕಲಿಕೆಯ ಮಾದರಿಗೆ ಅಗಾಧ ಆದ್ಯತೆಯನ್ನು ಕಂಡುಕೊಂಡಿದೆ ಮತ್ತು ಸಾಂಪ್ರದಾಯಿಕ ತರಗತಿಗಳು ಪುನರಾರಂಭಿಸಿದ ನಂತರವೂ ಅವರು ಆನ್‌ಲೈನ್ ಕಲಿಕೆಯನ್ನು ಕೆಲವು ರೂಪದಲ್ಲಿ ಮುಂದುವರಿಸಲು ಬಯಸುತ್ತಾರೆ.

 

ಭವಿಷ್ಯಕ್ಕಾಗಿ ಹೈಬ್ರಿಡ್ ಕಲಿಕೆಯ ಮಾದರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಆದ್ಯತೆ ನೀಡಿದ್ದಾರೆ. ಸಾಂಪ್ರದಾಯಿಕ ತರಗತಿಗಳು ಮತ್ತೆ ಆರಂಭವಾದ ಮೇಲೂ ಆನ್‌ಲೈನ್ ಕಲಿಕೆಯನ್ನು ಮುಂದುವರಿಸಲು ಒಲವು ತೋರಿದ್ದಾರೆ.

 

ಹೈಬ್ರಿಡ್ ಕಲಿಕೆಯು ಹೊಸ ಸಾಮಾನ್ಯ ಶಿಕ್ಷಣವಾಗಿದೆ ಎಂದು ವಿದ್ಯಾರ್ಥಿಗಳು ಪರಿಭಾವಿಸುತ್ತಾರೆ.

 

• ಆನ್‌ಲೈನ್ ಮತ್ತು ತರಗತಿಯ ಕಲಿಕೆಯ ಸಂಯೋಜಿತ ವಿಧಾನದ ಮೂಲಕ ಚೆನ್ನಾಗಿ ಅರ್ಥವಾಗುತ್ತದೆ, ವೈಯಕ್ತಿಕ ಹವ್ಯಾಸಗಳನ್ನು ಮುಂದುವರಿಸಲು ಹೆಚ್ಚು ಸಮಯ ಸಿಗುತ್ತದೆ ಮತ್ತು ದೀರ್ಘಾವಧಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ- ಇವು ವಿದ್ಯಾರ್ಥಿಗಳು ಹೈಬ್ರಿಡ್ ಕಲಿಕೆಗೆ ಆದ್ಯತೆ ನೀಡುವ ಪ್ರಮುಖ ಕಾರಣಗಳಾಗಿ ಹೊರಹೊಮ್ಮಿವೆ.

 

ಹೈಬ್ರಿಡ್ ಕಲಿಕೆಯು ಹವಾಮಾನ ವೈಪರೀತ್ಯ ಅಥವಾ ಇತರ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಂದಾಗಿ ಜನರ ಸಂಚಾರವನ್ನು ನಿಯಂತ್ರಿಸುವುದರಿಂದ ಕಲಿಕೆಗೆ ಅಡಚಣೆಯಾಗುವುದನ್ನು ಕಡಿಮೆ ಮಾಡುತ್ತದೆ.

ಅಪಾಯಕಾರಿ ಮಾಲಿನ್ಯದ ಮಟ್ಟಗಳು, ಶಾಖದ ಅಲೆಗಳು, ಪ್ರವಾಹಗಳು ಮತ್ತು ಇತರ ಅನೇಕ ನೈಸರ್ಗಿಕ ವಿಕೋಪಗಳಿಂದ ಆಗಾಗ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಆದರೆ, ಹೈಬ್ರಿಡ್ ಕಲಿಕೆಯನ್ನು ಅಳವಡಿಸಿದ್ದರಿಂದ ಕಲಿಕೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಂತರವಾಗಿ ಮುಂದುವರಿಯುತ್ತದೆ ಎಂಬುದು ಗಮನಾರ್ಹ.

 

• ಪ್ರತಿಸ್ಪಂದಿಸಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು, ಹೈಬ್ರಿಡ್ ಮಾದರಿಯು ಇಂತಹ ಹವಾಮಾನ ವೈಪರೀತ್ಯಗಳು ಮತ್ತು ಇತರ ಸಂದರ್ಭಗಳಲ್ಲಿ ನಿರಂತರ ಕಲಿಕೆಯನ್ನು ಖಚಿತಪಡಿಸುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ.

 

 

HP ಇಂಡಿಯಾದ ಎಂಡಿ ಕೇತನ್ ಪಟೇಲ್ ಹೇಳಿದರು, “ಸವಾಲಿನ ಈ ಕಾಲದಲ್ಲಿ ತಂತ್ರಜ್ಞಾನವು ಸಂರಕ್ಷಕನಾಗಿ ಹೊರಹೊಮ್ಮಿದೆ. ಕಲಿಕೆಯ ಮೇಲೂ ಇದರ ಪ್ರಭಾವ ಗಾಢವಾಗಿದೆ. ಹೈಬ್ರಿಡ್ ಕಲಿಕೆಯ ಮಾದರಿಯು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಾಂಪ್ರದಾಯಿಕ ತರಗತಿಯ ವ್ಯವಸ್ಥೆಯಲ್ಲಿ ಆನ್‌ಲೈನ್ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಕಲಿಕೆಯ ವೈಯಕ್ತಿಕ ಸಂವಹನಗಳ ಪ್ರಯೋಜನಗಳನ್ನು ಸಂಯೋಜಿಸುತ್ತದೆ. ಡಿಜಿಟಲ್ ಕಲಿಕೆಯತ್ತ ಒಲವು ವಿದ್ಯಾರ್ಥಿ-ಶಿಕ್ಷಕರ ಸಂವಾದವನ್ನು ಪುಷ್ಟೀಕರಿಸಿದೆ ಮತ್ತು ಪ್ರತಿಯೊಬ್ಬ ಭಾಗೀದಾರನ ಸುರಕ್ಷತೆ ಮತ್ತು ಸೌಕರ್ಯವನ್ನು ಖಾತ್ರಿಪಡಿಸುತ್ತದೆ. ಪರಿವರ್ತನೆಯ ಈ ಸಮಯದಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ತಮ ಕೆಲಸ-ಜೀವನ ಸಮತೋಲನ, ಹೆಚ್ಚಿದ ದಕ್ಷತೆ ಮತ್ತು ಹೆಚ್ಚು ಒಳನೋಟ-ಆಧಾರಿತ ಕಲಿಕೆಯನ್ನು ಸಾಧಿಸಿದ್ದಾರೆ. HP ಇಂಡಿಯಾ ಫ್ಯೂಚರ್ ಆಫ್ ಲರ್ನಿಂಗ್ ಸ್ಟಡಿ 2022 ಬೆಂಬಲದೊಂದಿಗೆ, ಹೆಚ್ಚು ದಕ್ಷ ಮತ್ತು ಪರಿಣಾಮಕಾರಿ ಕಲಿಕೆಯ ಮಾದರಿಯನ್ನು ರಚಿಸುವಲ್ಲಿ ಡಿಜಿಟಲ್ ಕಲಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬುತ್ತೇನೆ.”

 

ನಮ್ಯತೆ ಮತ್ತು ಅನುಕೂಲಕ್ಕಾಗಿ ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯನ್ನು ಇಷ್ಟಪಡುತ್ತಾರೆ.

ಆನ್‌ಲೈನ್ ಕಲಿಕೆಯ ಆರಂಭಿಕ ಸವಾಲುಗಳ ಹೊರತಾಗಿಯೂ, ವಿದ್ಯಾರ್ಥಿಗಳು ಅದು ನೀಡುವ ಸ್ವಾಯತ್ತತೆ ಮತ್ತು ನಮ್ಯತೆಯಲ್ಲಿ ಅಪಾರ ಪ್ರಯೋಜನವನ್ನು ಕಂಡುಕೊಳ್ಳುತ್ತಾರೆ. ಅನುಕೂಲಕರವಾದ ವೇಗದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು (61%), ಪೋಷಕರು (65%) ಮತ್ತು ಶಿಕ್ಷಕರಿಗೆ (81%) ಅವಕಾಶ ಮಾಡಿಕೊಡುವುದು ಆನ್‌ಲೈನ್ ಕಲಿಕೆಯು ಪ್ರಮುಖ ಅಂಶವಾಗಿದೆ.

 

ಮನರಂಜನೆಯಿಂದ ಕಲಿಕೆಯವರೆಗೆ, ಭಾರತವು ಬಹುತೇಕ ವೀಡಿಯೊ-ಫಸ್ಟ್ ದೇಶವಾಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳು (63%), ಶಿಕ್ಷಕರು (57%) ಮತ್ತು ಪೋಷಕರು (61%) ವೀಡಿಯೊ ರೂಪದಲ್ಲಿ ಅಧ್ಯಯನದ ವಸ್ತುವಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ.

 

• ವಿದ್ಯಾರ್ಥಿಗಳು ಹೈಬ್ರಿಡ್ ಕಲಿಕೆಗೆ ಆದ್ಯತೆ ನೀಡುತ್ತಾರೆ. ಏಕೆಂದರೆ ಅವರು ತಮ್ಮ ಕೆಲಸವನ್ನು ಪರಿಷ್ಕರಿಸಲು, ವಿಷಯವನ್ನು ಹೆಚ್ಚು ಸುಲಭವಾಗಿ ಮತ್ತು ಆಳವಾಗಿ ಗ್ರಹಿಸಲು ಸಹಾಯ ಮಾಡುತ್ತದೆ. ರೆಕಾರ್ಡಿಂಗ್‌ಗಳನ್ನು ವೀಕ್ಷಿಸುವ ಮೂಲಕ ಅವರು ತಪ್ಪಿದ ತರಗತಿಗಳನ್ನೂ ಮತ್ತೆ ಪಡೆಯಬಹುದು.

ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಡಿಜಿಟಲ್ ಕಲಿಕೆಯ ಪ್ರಭಾವ

 

ಆನ್‌ಲೈನ್ ಕಲಿಕೆಯ ಪ್ರಮುಖ ಪ್ರಯೋಜನಗಳಲ್ಲಿ ಕೆಲಸ-ಜೀವನದ ಸಮತೋಲನವೂ ಒಂದು ಎಂದು ಶಿಕ್ಷಕರು ಸೂಚಿಸಿದರೆ, ಸಮೀಕ್ಷೆಯಲ್ಲಿ ಭಾಗವಹಿಸಿದ 82% ಶಿಕ್ಷಕರು ಉತ್ತಮ ಆನ್‌ಲೈನ್ ಕಲಿಕೆಗೆ ಅನುಕೂಲವಾಗುವಂತೆ ಹೆಚ್ಚಿನ ಪರಿಕರಗಳ ಅಗತ್ಯವಿದೆ ಎಂದು ಹೇಳಿದರು ಆದರೆ 74% ರಷ್ಟು ಜನರು ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಬಳಸಲು ಮತ್ತು ಅವರ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚಿನ ತರಬೇತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ..

ಸೀಮಿತ ಸಾಮಾಜಿಕ ಸಂವಹನವು ಕೋವಿಡ್-19ರ ಪ್ರಮುಖ ಪರಿಣಾಮಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ತಮ್ಮ ಗೆಳೆಯರೊಂದಿಗೆ ಸಂವಹನ ನಡೆಸಲು ಮತ್ತು ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಶಾಲೆಗೆ ಮರಳುವುದಕ್ಕೆ ಉತ್ಸುಕರಾಗಿದ್ದಾರೆ.

 

• ತರಗತಿಯ ಕಲಿಕೆಯ ಸಮಯದಲ್ಲಿ ಅವರು ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಬಹುದು, ಶಿಕ್ಷಕರ ಸಮ್ಮುಖದಲ್ಲಿ ಉತ್ತಮವಾಗಿ ಕಲಿಯಬಹುದು ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸುತ್ತಾರೆ. ಇತರ ಸಹಪಾಠಿಗಳೊಂದಿಗೆ ಅವರ ಸಂವಹನ ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆಯು ಕೋವಿಡ್-19ನಿಂದಾಗಿ ತುಂಬಾ ಸೀಮಿತವಾಗಿದೆ ಎಂದು ಅವರು ಭಾವಿಸುತ್ತಾರೆ.

 

ಹೈಬ್ರಿಡ್ ಕಲಿಕೆಗೆ ಪಿಸಿ ಒಂದು ಆದರ್ಶ ಆಯ್ಕೆಯಾಗಿ ಹೊರಹೊಮ್ಮುತ್ತದೆ.

ಪ್ರತಿಕ್ರಿಯಿಸಿದವರಲ್ಲಿ, 88% ಶಿಕ್ಷಕರು, 72% ವಿದ್ಯಾರ್ಥಿಗಳು ಮತ್ತು 89% ಪೋಷಕರು ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಕಲಿಕೆಗೆ ಪಿಸಿಗಳು ಸೂಕ್ತವೆಂದು ನಂಬುತ್ತಾರೆ. ವಾಸ್ತವವಾಗಿ, ಆನ್‌ಲೈನ್ ಕಲಿಕೆಗಾಗಿ ಪಿಸಿಗಳಿಗೆ ಮೊರೆ ಹೋಗಬೇಕೆಂದು 79% ಶಿಕ್ಷಕರು ಶಿಫಾರಸು ಮಾಡುತ್ತಾರೆ.

 

• ಕಣ್ಣಿನ ಮೇಲೆ ಒತ್ತಡ ನಿವಾರಣೆ, ಫೈಲ್‌ಗಳ ತ್ವರಿತ ವರ್ಗಾವಣೆ ಮತ್ತು ಉತ್ತಮ ಕಾರ್ಯನಿರ್ವಹಣೆ ಪಿಸಿಗಳು ಆದರ್ಶ ಆಯ್ಕೆಯಾಗಿ ಹೊರಹೊಮ್ಮಲು ಪ್ರಮುಖ ಕಾರಣಗಳಾಗಿವೆ.

 

ಪ್ರಿಂಟರ್ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಸೃಜನಶೀಲತೆಯನ್ನು ಬೆಂಬಲಿಸುತ್ತದೆ

ಪ್ರತಿಕ್ರಿಯಿಸಿದವರಲ್ಲಿ, 75% ಶಿಕ್ಷಕರು ಕಡತಗಳಿಗೆ ಮತ್ತು ಮನೆಗೆಲಸದ ಸಲ್ಲಿಕೆಗಾಗಿ ಪ್ರಿಂಟರ್‌ಗಳನ್ನು ಬಳಸುವುದಕ್ಕೆ ಆದ್ಯತೆ ನೀಡಿದ್ದಾರೆ. ಕಲಿಕೆಯನ್ನು ಅನುಭವದ ಕಲಿಕೆಯಾಗಿ ಮಾರ್ಪಡಿಸುವುದು, ಸಮಗ್ರ ಅನುಭವವನ್ನು ಹೊಂದಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಕ್ಕಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಿಕ್ಷಣಕ್ಕೆ ಸಹಾಯ ಮಾಡುವ ಪ್ರಮುಖ ಸಾಧನವಾಗಿ ಪ್ರಿಂಟರ್‌ಗಳನ್ನು ಬಳಸುತ್ತಿದ್ದಾರೆ. ಪ್ರಿಂಟರ್‌ಗಳಿದ್ದರೆ ಕಲಿಕೆಯ ಫಲಿತಾಂಶವನ್ನು ಸುಧಾರಿಸಬಹುದೆಂದು 82% ವಿದ್ಯಾರ್ಥಿಗಳು ನಂಬುತ್ತಾರೆ. ಇದಲ್ಲದೆ, ಸುಲಭವಾಗಿ ವೀಕ್ಷಿಸಬಹುದಾದ ನೋಟ್ಸ್ ಮತ್ತು ಪ್ರ್ಯಾಕ್ಟೀಸ್ ಶೀಟ್‌ಗಳ ಅನುಕೂಲವು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ನಿಲುವಿಗೆ ಕಾರಣವಾಗಿದೆ.

 

ವಿಧಾನಶಾಸ್ತ್ರ

207 ಶಿಕ್ಷಕರು (ವಯಸ್ಸು: 28 – 50 ವರ್ಷಗಳು), 679 ಪೋಷಕರು (ವಯಸ್ಸು: 30 – 60 ವರ್ಷಗಳು) ಮತ್ತು 711 ವಿದ್ಯಾರ್ಥಿಗಳು (ವಯಸ್ಸು: 14 – 22 ವರ್ಷಗಳು) ಒಳಗೊಂಡಿರುವ 1,500ಕ್ಕೂ ಹೆಚ್ಚು ಪ್ರತಿಸ್ಪಂದಕರು ಈ ಸಮೀಕ್ಷೆಗೆ ಒಳಪಟ್ಟಿದ್ದಾರೆ. ದೆಹಲಿ/ಎನ್‌ಸಿಆರ್, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಲಕ್ನೋ, ಚಂಡೀಗಢ, ಪಾಟ್ನಾ, ಗುವಾಹಟಿ, ಇಂದೋರ್, ರಾಂಚಿ ಮತ್ತು ಕೊಚ್ಚಿಯಂತಹ 13 ನಗರಗಳಲ್ಲಿ ಸಂದರ್ಶನಗಳನ್ನು ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page

error: Content is protected !!