ಸರ್ಕಾರದ 5 ಗ್ಯಾರಂಟಿಗಳನ್ನ ಕಂಡು ವಿಪಕ್ಷಗಳಿಗೆ ಹೊಟ್ಟೆ ಉರಿ – ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್.
ತುಮಕೂರು – ರಾಜ್ಯದ ಜನತೆ 135 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಸುಭದ್ರ ಕಾಂಗ್ರೆಸ್ ಸರ್ಕಾರ ನೀಡಿದ್ದು ಸರ್ಕಾರ ಸದೃಢವಾಗಿದೆ ಜನತೆಗೆ ನೀಡಿದ ಮಾತಿನಂತೆ ಐದು ಗ್ಯಾರoಟಿಗಳನ್ನು ಯಾರಿಗೆ ತಂದಿದ್ದು ಇದರಿಂದ ವಿಪಕ್ಷಗಳಿಗೆ ಹೊಟ್ಟೆ ಉರಿ ಬಂದಿದೆ ಎಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನ ಜಾರಿಗೆ ತಂದ ಹಿನ್ನೆಲೆಯಲ್ಲಿ ಅದನ್ನು ತಡೆಯಲಾಗಿದೆ ಇಲ್ಲಸಲ್ಲದ ಆರೋಪಗಳನ್ನು ಕೆಲವರು ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಹರಿ ಹರಿಹಾಯ್ದರು.
ಶಾಸಕರೊಬ್ಬರು ಮುಖ್ಯಮಂತ್ರಿಗಳಿಗೆ ಶಾಸಕಾಂಗ ಸಭೆ ಕರೆಯುವ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದು ಅದರ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು ಹಿಂದಿನ ಶಾಸಕಾಂಗ ಸಭೆ ಅರ್ಧಕ್ಕೆ ನಿಂತಿತ್ತು ಅಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ರವರು ಸಚಿವರು ಹಾಗೂ ಶಾಸಕರನ್ನ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿ ಇದರ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮ ಅರ್ಧಕ್ಕೆ ಮೋಟಕುಗೊಂಡ ಹಿನ್ನೆಲೆಯಲ್ಲಿ ಸಭೆ ಅರ್ಧಕ್ಕೆ ನಿಂತಿದ್ದು ಅದರ ಹಿನ್ನೆಲೆಯಲ್ಲಿ ಶಾಸಕರ ನಿರೀಕ್ಷೆಗೆ ತಕ್ಕಂತೆ ಅಭಿಪ್ರಾಯ ಹಂಚಿಕೊಳ್ಳಲು ಆಗದ ಹಿನ್ನಡೆಯಲ್ಲಿ ಶಾಸಕರು ಸಭೆ ಕರೆಯಲು ಪತ್ರ ಬರೆದಿದ್ದು ಅದರ ಹಿನ್ನೆಲೆಯಲ್ಲಿ ಸಭೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅದಕ್ಕೆ ಸಂಬಂಧಿಸಿದ ನೆನ್ನೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಶಾಸಕರು ಪತ್ರ ಬರೆದು ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಿಗ್ನೇಚರ್ ಕ್ಯಾಂಪೇನ್ ನಡೆಯುತ್ತಿಲ್ಲ ಇದಕ್ಕೆ ಸಂಬಂಧಿಸಿದಂತೆ ಶಾಸಕರು ಸಹ ಸ್ಪಷ್ಟನೆ ನೀಡಿದ್ದಾರೆ ಎಂದ ಅವರು ಸಭೆಯಲ್ಲಿ ಶಾಸಕರ ಸಮಸ್ಯೆಗಳು ಸಹ ಚರ್ಚೆ ಆಗಿದ್ದು ಅದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಹ ಜಿಲ್ಲೆಯ ಶಾಸಕರು ಹಾಗೂ ಸಚಿವರನ್ನ ಒಳಗೊಂಡಂತೆ ಪ್ರತ್ಯೇಕ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಹಣ ಬೇರೆ ಅಕೌಂಟ್ಗಳಿಗೆ ವರ್ಗಾವಣೆಯಾಗುತ್ತಿರುವ ವಿಷಯಕ್ಕೆ ಸ್ಪಷ್ಟ ಸ್ಪಷ್ಟನೆ ನೀಡಿರುವ ಗೃಹ ಸಚಿವರು ಅರ್ಜಿದಾರರು ಯಾವ ಅಕೌಂಟ್ ಹೊಂದಿದ್ದಾರೋ ಅಂತಹ ಅಕೌಂಟ್ ಗಳಿಗೆ ಹಣ ಹೋಗಿದೆ ಬದಲಾಗಿ ಬೇರೆ ಅಕೌಂಟ್ಗಳಿಗೆ ಹಣ ತಲುಪಿದರೆ ಅಂತಹ ತಪ್ಪುಗಳನ್ನ ಮತ್ತೊಮ್ಮೆ ಪರಿಶೀಲಿಸಲಾಗುವುದು ಆರಂಭಿಕ ಹಂತದಲ್ಲಿ ಇಂತಹ ಗೊಂದಲಗಳು ಸಹಜ ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಹಣ ಜಮಯಾದರೆ ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ವರದಿ ಮಾರುತಿ ಪ್ರಸಾದ್ ತುಮಕೂರು