ಸಚಿವ ಬಿ.ಸಿ ನಾಗೇಶ್ ಮನೆ ಬಳಿ ದಾಂಧಲೆ ಪ್ರಕರಣ 15 ಆರೋಪಿಗಳ ಬಂಧನ ಗೃಹಸಚಿವ ಆರಗ ಜ್ಞಾನೇಂದ್ರ.

ಸಚಿವ ಬಿ.ಸಿ ನಾಗೇಶ್ ಮನೆ ಬಳಿ ದಾಂಧಲೆ ಪ್ರಕರಣ 15 ಆರೋಪಿಗಳ ಬಂಧನ ಗೃಹಸಚಿವ ಆರಗ ಜ್ಞಾನೇಂದ್ರ.

 

 

 

 

ತುಮಕೂರು_ಸಚಿವ ಬಿಸಿ ನಾಗೇಶ್ ಮನೆ ಮೇಲೆ ಬುಧವಾರ ತಿಪಟೂರಿನಲ್ಲಿ ಮದ್ಯಾಹ್ನ 3.30ಸಮಯದಲ್ಲಿ ಸಚಿವ ಬಿ.ಸಿ ನಾಗೇಶ್ ಮನೆ ಬಳಿ ಎನ್.ಎಸ್. ಯು. ಐ ಪದಾಧಿಕಾರಿಗಳು ದಾಂದಲೆ ನಡೆಸಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವ ಅರಗ ಜ್ಞಾನೇಂದ್ರ ರವರು ಸಚಿವ ಬಿ.ಸಿ ನಾಗೇಶ್ ಮನೆ ಬಳಿ ನಡೆದಿರುವ ದಾಂದಲೆ ನಿಜಕ್ಕೂ ಖಂಡನೀಯ ಎಂದ ಅವರು ತಮಗೆ ಬಂದಿರುವ ಮಾಹಿತಿ ಪ್ರಕಾರ ಬಿ.ಸಿ ನಾಗೇಶ್ ರವರ ಮನೆ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳು ಮನೆಗೆ ಬಂಚಿ ಹಚ್ಚುವ ಕೆಲಸಕ್ಕೆ ಸಹ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

 

 

ಇನ್ನು ಘಟನೆ ಸಂಬಂಧ ಸುಮಾರು 15ಕ್ಕೂ ಹೆಚ್ಚು ಜನರ ಬಂಧನವಾಗಿದ್ದು ಎರಡು ವಾಹನಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ ಇನ್ನೂ ಘಗಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು ಸರ್ಕಾರ ಇಂತಹ ಗೂಂಡಾ ವರ್ತನೆ ಯನ್ನು ತಡೆಯಲು ಸಾಧ್ಯವಿಲ್ಲ ಇದಕ್ಕೆ ತಕ್ಕ ಪಾಠವನ್ನು ಅವರು ಕಲಿಯಬೇಕಾಗುತ್ತದೆ ಇನ್ನು ಕೆಲವರು ಯಾರದೋ ಮನೆಗೆ ನುಗ್ಗುತ್ತಿವೆ ಎದುರಿಸುತ್ತೇವೆ ಎಂದು ಅಂದುಕೊಂಡರೆ ಈ ದೇಶದಲ್ಲಿ ನಡೆಯುವುದಿಲ್ಲ ಈ ಸಂಬಂಧ ಪೊಲೀಸರು ಕಾನೂನು ಕ್ರಮ ಜರುಗಿಸಲಿದಾರೆ ಎಂದರು.

 

 

 

ಇನ್ನು ಘಟನೆಯ ಯಾವ ಕಾರಣಕ್ಕಾಗಿ ನಡೆದಿದೆ ಎನ್ನುವುದು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ ಘಟನಾ ಸ್ಥಳಕ್ಕೆ ತಾವು ಸಹ ಕೂಡಲೇ ಭೇಟಿ ನೀಡಲಿದ್ದೇವೆ ಎಂದರು.

 

 

ಬೆಂಗಳೂರಿನಿಂದ ಐದು ಮಂದಿ, ಭದ್ರಾವತಿಯಿಂದ ಒಬ್ಬರು, ತುಮಕೂರಿನಿಂದ ಒಬ್ಬರು ,ಚಿಕ್ಕಮಗಳೂರಿನಿಂದ ಇಬ್ಬರು ,ದಾವಣಗೆರೆಯಿಂದ ಮೂವರು, ಹಾಸನದಿಂದ ಮೂರು ಮಂದಿ ಬಂದು ಕೃತ್ಯದಲ್ಲಿ ಭಾಗಿಯಾಗಿರುವ ಸುಮಾರು 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಇನ್ನು ಘಟನಾ ಸ್ಥಳದಿಂದ ಪರಾರಿಯಾಗಿರುವ ಇತರೆ ಆರೋಪಿಗಳಿಗಾಗಿ ಪೊಲೀಸರು ಹುಡುಕುತಿದ್ದು ತಪ್ಪಿಸಿಕೊಂಡಿರುವ ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

 

 

ಇನ್ನು ಘಟನೆಯನ್ನು ಗಮನಿಸಿದಾಗ ಬೇರೆ ಬೇರೆ ಜಿಲ್ಲೆಗಳಿಂದ ಎಲ್ಲರೂ ಸೇರಿ ಒಟ್ಟಿಗೆ ಮನೆ ಮೇಲೆ ದಾಳಿ ನಡೆಸಿರುವುದನ್ನು ಗಮನಿಸಿದರೆ ಅದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

ಇನ್ನು ತಿಪಟೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಾರಣ ಯಾರು ಎಲ್ಲಿಗೆ ಹೋಗಲಿ ಇದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ ಇನ್ನೂ ಘಟನೆಗೆ ಪೊಲೀಸ್ ವೈಫಲ್ಯ ಕಾರಣ ಎನ್ನಲಾಗುವುದಿಲ್ಲ ಇನ್ನು ಘಟನೆ ನಡೆದಾಗ ಮನೆಯಲ್ಲಿ ಸಚಿವರ ಮಗ ಹಾಗೂ ಅವರ ಆಪ್ತ ಸಹಾಯಕ ಮಾತ್ರ ಇರುವ ಕಾರಣ ಯಾರಿಗೂ ತೊಂದರೆಯಾಗಿಲ್ಲ .

 

ಇನ್ನು ರಾಜ್ಯದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಕಂಡಿಲ್ಲ ಪೊಲೀಸರು ಸಹ ಎಚ್ಚರದಿಂದ ಇದ್ದಾರೆ ಘಟನೆ ಏಕಾಏಕಿ ನಡೆದಿದೆ. ಇನ್ನೂ ಘಟನೆಯ ಹಿಂದೆ ಕಾಂಗ್ರೆಸ್ ಇದ್ದು ಎನ್.ಎಸ್. ಯು ಐ ಕಾಂಗ್ರೆಸ್ನ ಮತ್ತೊಂದು ಬಾಗವಾಗಿದೆ ಇನ್ನೂ ಘಟನೆಯಲ್ಲಿ ಎನ್.ಎಸ್. ಯು .ಐ ನ ರಾಜ್ಯ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ  ಕೃತ್ಯದಲ್ಲಿ ಭಾಗಿಯಾಗಿರುವ 15 ಆರೋಪಿಗಳನ್ನು ಬಂಧಿಸಲಾಗಿದೆ ಶೀಘ್ರದಲ್ಲೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

 

ವರದಿ ಮಾರುತಿ ಪ್ರಸಾದ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!