ಗೋವಾ – ಬೆಳಗಾವಿ ಟ್ರೈನ್ ಮೇಲೆ ಕ್ಯಾಸಲ್ ರಾಕ್ ಬಳಿ ಗುಡ್ಡ ಕುಸಿತ!

ಗೋವಾ – ಬೆಳಗಾವಿ ಟ್ರೈನ್ ಮೇಲೆ ಕ್ಯಾಸಲ್ ರಾಕ್ ಬಳಿ ಗುಡ್ಡ ಕುಸಿತ!

 

ಕರ್ನಾಟಕ, ಕೇರಳ, ಆಂಧ್ರಪ್ರದೇಶ ,ತೆಲಂಗಾಣ ಗೋವಾ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಕಳೆದ ಹತ್ತು ದಿನಗಳಿಂದ ಭಾರಿ ಮಳೆಯಾಗುತ್ತಿದೆ ಇದರಿಂದ ಸಾರ್ವಜನಿಕರ ಬದುಕು ಕಷ್ಟಕರವಾಗಿದ್ದು ಇದರಿಂದ ದಕ್ಷಿಣ ರಾಜ್ಯಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆ ಸೇರಿದಂತೆ ಹಲವು ರೀತಿಯ ನಷ್ಟ ಸಂಭವಿಸುತ್ತಿರುವುದು ವರದಿಯಾಗುತ್ತಲೇ ಇದೆ.

 

ಆದರೆ ಇಂದು ಗೋವಾ ಬೆಳಗಾವಿ ನಡುವೆ ಸಂಚರಿಸುವ ರೈಲಿನ ಮೇಲೆ ಕ್ಯಾಸಲ್ ರಾಕ್ ಬಳಿ ಗುಡ್ಡ ಕುಸಿದಿದ್ದು ಸಂಚರಿಸುತ್ತಿದ್ದ ರೈಲು ಹಠಾತ್ತನೆ ಗುಡ್ಡದ ಮಧ್ಯೆ ಸಿಲುಕಿ ಹಾಕಿಕೊಂಡು ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

 

ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ ಆದರೆ ಹಠಾತ್ ಗುಡ್ಡ ಕುಸಿತದಿಂದ ಪ್ರಯಾಣಿಕರು ಗುಡ್ಡದ ಮಧ್ಯೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಇಂತಹ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!